ಸೆಟ್​ನಲ್ಲಿ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಟಿ Megha Shetty ಮಾಡಿದ್ದೇನು? ವಿಡಿಯೋ ವೈರಲ್​

ಸೆಟ್​ನಲ್ಲಿ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಟಿ Megha Shetty ಮಾಡಿದ್ದೇನು? ವಿಡಿಯೋ ವೈರಲ್​

ಸೆಟ್​ನಲ್ಲಿ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಟಿ Megha Shetty ಮಾಡಿದ್ದೇನು? ವಿಡಿಯೋ ವೈರಲ್​
‘ಜೊತೆಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ ‘ಚೀತಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ವೇಳೆ ತಮ್ಮ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಮಸ್ಕರಿಸುವ ಮೂಲಕ ಅವರು ತೋರಿದ ವಿನಯವಂತಿಕೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೊತೆಜೊತೆಯಲಿ ಸೀರಿಯಲ್​ನಲ್ಲಿ ಅನು ಪಾತ್ರದ ಮೂಲಕ, ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ (Megha Shetty) ಇದೀಗ ‘ಚೀತಾ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೊರಿಯೋಗ್ರಫರ್‌ ರಾಜಾ ಕಲೈ ಕುಮಾರ್ ನಿರ್ದೇಶನದ ಮೊದಲ ಚಿತ್ರ ‘ಚೀತಾ’ ಆಗಿದ್ದು, ಇದಕ್ಕೆ ಪ್ರಜ್ವಲ್ ದೇವರಾಜ್ ನಾಯಕ ಆಗಿದ್ದಾರೆ.

ಇದಾಗಲೇ ನಟಿ ಮೇಘಾ ಶೆಟ್ಟಿ ಸೀರಿಯಲ್​ ಬಳಿಕ, ‘ಥ್ರಿಬಲ್ ರೈಡಿಂಗ್’, ‘ಗ್ರಾಮಾಯಣ’, ‘ದಿಲ್ ಪಸಂದ್’ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಚೀತಾದಲ್ಲಿ ನಾಯಕಿ ಆಗಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡೊಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗಿತ್ತು. ಪ್ರಜ್ವಲ್ ದೇವರಾಜ್ ಜೊತೆ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದಾರೆ ಮೇಘಾ ಶೆಟ್ಟಿ.

ಇದೀಗ ನಟಿಯ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ನಟ-ನಟಿಯರಿಗೆ ಡ್ರೆಸ್​ ಸೇರಿದಂತೆ ಅವರ ವೇಷ ಭೂಷಣಗಳನ್ನು ಆಗಾಗ್ಗೆ ಬದಲಿಸುತ್ತಿರಲು ಸಹಾಯಕರು ಇರುತ್ತಾರೆ. ಅದೇ ರೀತಿ, ಮೇಘಾ ಶೆಟ್ಟಿ (Megha Shetty) ಅವರು ಶೂಟಿಂಗ್​ನಲ್ಲಿ ಇದ್ದ ಸಮಯದಲ್ಲಿ, ಅವರ ಸಹಾಯಕರೊಬ್ಬರು ಸ್ಲಿಪ್ಪರ್​ ಅನ್ನು ಬದಲಿಸಿದ್ದಾರೆ.

ಆ ಸಮಯದಲ್ಲಿ ನಟಿ ನಡೆದುಕೊಂಡಿರುವ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟಕ್ಕೂ ನಟಿ, ಚಪ್ಪಲಿ ಬದಲಿಸಿದ ಬಳಿಕ, ಆ ಸಿಬ್ಬಂದಿಗೆ ನಮಸ್ಕರಿಸಿದ್ದಾರೆ. ಸಾಮಾನ್ಯವಾಗಿ ಕಾಲು ಟಚ್​ ಆದರೆ, ಭಾರತೀಯ ಸಂಪ್ರದಾಯದಲ್ಲಿ ಕೈ ಮುಗಿಯುತ್ತೇವೆ. ಅದರಂತೆ ನಟಿ ನಡೆದುಕೊಂಡಿರುವುದಕ್ಕೆ ಹಲವರು ನಟಿಗೆ ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇನ್ನು ‘ಚೀತಾ’ ಸಿನಿಮಾದ ಕುರಿತು ಹೇಳುವುದಾದರೆ, ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಇದು ಮೂಡಿ ಬರುತ್ತಿದೆ. ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.

ಇತ್ತೀಚೆಗಷ್ಟೇ ಸಿನಿಮಾದ ಹಾಡೊಂದು ವೈರಲ್​ ಆಗಿತ್ತು. ಇದಕ್ಕಾಗಿ ಅದ್ಧೂರಿ ಸೆಟ್ ನಿರ್ಮಿಸಲಾಗಿತ್ತು. ಈ ಹಾಡಿನಲ್ಲಿ ಮೇಘಾ ಮತ್ತು ಪ್ರಜ್ವಲ್​ ಅವರ ಕಾಂಬಿನೇಷನ್​ ನೋಡಿ ವೀಕ್ಷಕರು ಫುಲ್​ ಖುಷ್​ ಆಗಿದ್ದಾರೆ. ಇವರ ಕೆಮೆಸ್ಟ್ರಿಯನ್ನು ಮೆಚ್ಚಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *