‘ರಾಕಾ’ ಪೋಸ್ಟರ್ ರಿಲೀಸ್ ಬೆನ್ನಲ್ಲೆ Jr NTR ಸಿನಿಮಾದ ನಿರ್ದೇಶಕ ವೈರಲ್ ಆಗಿದ್ದೇಕೆ?

‘ರಾಕಾ’ ಪೋಸ್ಟರ್ ರಿಲೀಸ್ ಬೆನ್ನಲ್ಲೆ Jr NTR ಸಿನಿಮಾದ ನಿರ್ದೇಶಕ ವೈರಲ್ ಆಗಿದ್ದೇಕೆ?


'ರಾಕಾ' ಪೋಸ್ಟರ್ ರಿಲೀಸ್ ಬೆನ್ನಲ್ಲೇ Jr NTR ಸಿನಿಮಾದ ನಿರ್ದೇಶಕ ವೈರಲ್ ಆಗಿದ್ದೇಕೆ?

ಅಲ್ಲು ಅರ್ಜುನ್ (ಅಲ್ಲು ಅರ್ಜುನ್) ನಟಿಸಿ ಅಟ್ಲಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಟೈಟಲ್ ಪೋಸ್ಟರ್ ನಿನ್ನೆಯಷ್ಟೆ ಬಿಡುಗಡೆಯಾಯಿತು. ಸಿನಿಮಾಕ್ಕೆ ‘ರಾಕಾ’ ಎಂದು ಹೆಸರಿಟ್ಟಿದ್ದು, ಪೋಸ್ಟರ್‌ನಲ್ಲಿ ರಾಕ್ಷಸನ ರೀತಿ ಅಲ್ಲು ಅರ್ಜುನ್ ನಟಿಸಿದ್ದಾರೆ. ಪೋಸ್ಟರ್ ಅಲ್ಲು ಅರ್ಜುನ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಇದೆ. ಆದರೆ ಪೋಸ್ಟರ್ ಬಿಡುಗಡೆ ಆದ ಬಳಿಕ ಜೂ ಎನ್ ಟಿಆರ್ ಜೊತೆಗೆ ಸಿನಿಮಾ ಮಾಡಿದ್ದ ನಿರ್ದೇಶಕ ಟ್ರೆಂಡ್ ಆಗಲು ಆರಂಭಿಸಿದ್ದು, ಹಠಾತ್ತನೆ ಆ ನಿರ್ದೇಶಕನ ವಿಡಿಯೋಗಳು, ಹಳೆ ಸಂದರ್ಶನಗಳು ವೈರಲ್ ಆಗುತ್ತಿವೆ.

ಜೂ ಎನ್ ಟಿಆರ್ ‘ಶಕ್ತಿ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಪೌರಾಣಿಕ ಹಿನ್ನೆಲೆಯುಳ್ಳ ಆಕ್ಷನ್ ಸಿನಿಮಾ ಆಗುತ್ತಿದೆ. ಸಿನಿಮಾದಲ್ಲಿ ಜೂ ಎನ್ ಟಿಆರ್ ದ್ವಿಪಾತ್ರದಲ್ಲಿ ನಟಿಸಿದ್ದರು. ದಿವ್ಯ ಶಕ್ತಿ, ದುಷ್ಟ ಶಕ್ತಿ ಹೀಗೇ ಸಾಕಷ್ಟು ಕುತೂಹಲಕಾರಿ ಕಥೆ ಸಿನಿಮಾ ಇತ್ತು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ಫ್ಲಾಪ್ ಆದರೂ ಸಹ ಸಿನಿಮಾ ಕಲ್ಟ್ ಎನಿಸಿಕೊಂಡಿತು. ಹಿಂದಿಗೆ ಡಬ್ ಆಗಿ ಸಾಕಷ್ಟು ಜನ ಮನ್ನಣೆಯನ್ನೂ ಸಹ ಗಳಿಸಿಕೊಂಡಿತು.

ಇದನ್ನೂ ಓದಿ:ಅಲ್ಲು ಅರ್ಜುನ್ ಸಿನಿಮಾ ‘ರಾಕಾ’ ಟೈಟಲ್ ಅರ್ಥವೇನು? ಶುರುವಾಗಿದೆ ಚರ್ಚೆ

‘ಶಕ್ತಿ’ ಸಿನಿಮಾವನ್ನು ಮೆಹರ್ ರಮೇಶ್ ನಿರ್ದೇಶನ ಮಾಡಿದ್ದರು. ಈಗ ಅಲ್ಲು ಅರ್ಜುನ್ ಅವರ ‘ರಾಕಾ’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗುತ್ತಿದ್ದಂತೆ ಮೆಹರ್ ರಮೇಶ್ ಟ್ರೆಂಡ್ ಆಗುತ್ತಿದ್ದಾರೆ. ಅಲ್ಲು ಅರ್ಜುನ್ ನಟಿಸುತ್ತಿರುವ ಸಿನಿಮಾದ ಹೆಸರು ‘ರಾಕಾ’. ಮೆಹರ್ ರಮೇಶ್ ನಿರ್ದೇಶಿಸಿದ್ದ ‘ಶಕ್ತಿ’ ಸಿನಿಮಾದಲ್ಲಿ ವಿಲನ್ ಹೆಸರು ಸಹ ರಾಕಾ. ರಾಜಮೌಳಿ ನಿರ್ದೇಶನ ಮಾಡುತ್ತಿರುವ ‘ವಾರಣಾಸಿ’ ಸಿನಿಮಾದಲ್ಲಿ ನಾಯಕನ ಹೆಸರು ‘ರುದ್ರ’, ಮೆಹರ್ ನಿರ್ದೇಶಿಸಿದ್ದ ‘ಶಕ್ತಿ’ ಸಿನಿಮಾದಲ್ಲಿ ನಾಯಕನ ಹೆಸರು ಸಹ ರುದ್ರ ಆಗುತ್ತಿದೆ. ಇದೇ ಕಾರಣಕ್ಕೆ ಮೆಹರ್ ರಮೇಶ್ ಅವರು ಟ್ರೆಂಡ್ ಆಗುತ್ತಿದ್ದಾರೆ.

‘ರಾಕಾ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರದ್ದು ದ್ವಿಪಾತ್ರ ಎನ್ನಲಾಗುತ್ತಿದೆ. ರಾಕ್ಷಸನ ಪಾತ್ರದಲ್ಲಿಯೂ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ. ರಶ್ಮಿಕಾ ಮಂದಣ್ಣ ಸಹ ಸಿನಿಮಾನಲ್ಲಿದ್ದಾರೆ. ಅಟ್ಲಿ ನಿರ್ದೇಶಿಸುತ್ತಿರುವ ಈ ಸಿನಿಮಾಕ್ಕೆ ಕಲಾನಿಧಿ ಮಾರನ್ ಬಂಡವಾಳ ಹೂಡಿದ್ದಾರೆ. ಹಾಲಿವುಡ್ನ ಕೆಲವು ಖ್ಯಾತನಾಮ ಸಂಸ್ಥೆಗಳು ಸಿನಿಮಾಕ್ಕಾಗಿ ಕೆಲಸ ಮಾಡಿದೆ. ಸಿನಿಮಾ ಇದೇ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *