
ತುಮಕೂರು, ಮಾರ್ಚ್ 29: ನಿಮ್ಮ ಬಳಿಯಿರುವ ಗ್ಯಾಸ್ ಅನ್ನು ವ್ಯರ್ಥ ಮಾಡಬೇಡಿ, 5 ಬಾರಿ ಚಿಂತಿಸಿ ಬಳಸಿ ಎಂದು ಸಿದ್ದಲಿಂಗಶ್ರೀ ಮನವಿ ಮಾಡಿದರು. ನಗರದ ಸಿದ್ಧಗಂಗಾ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್, ನೀರು, ಎಲ್ಪಿಜಿ, ತೈಲ ಅತ್ಯಂತ ಅಮೂಲ್ಯವಾದುದು. ನಮಗೆ ಸಿಕ್ಕಿದ್ದು ಮತ್ತೊಬ್ಬರಿಗೂ ಸಿಗಲಿ ಎಂದು ಉದಾರತೆ ಇರಲಿ. ಪ್ರತಿಯೊಂದು ವಸ್ತು ಬಳಸುವಾಗ 5 ಬಾರಿ ಯೋಚಿಸಿ ಬಳಸಿ. ನಮ್ಮ ಬಳಿ ಅಧಿಕವಾಗಿದ್ದರೂ ಮುಂದಿನ ದಿನಗಳಲ್ಲಿ ಕೊರತೆಯಾಗಬಹುದು. ಸಿದ್ಧಗಂಗಾ ಮಠದಲ್ಲಿ ಸೌದೆ, ಅಡಕೆ ಸಿಪ್ಪೆಯನ್ನು ಇಂಧನವಾಗಿ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗೋಬರ್ ಗ್ಯಾಸ್ ಘಟಕ ಅಳವಡಿಸುವ ಚಿಂತನೆಯಿದೆ. ಯುದ್ಧದಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ಸಂಕಷ್ಟ ಸಂಪನ್ಮೂಲ ಮಿತವಾಗಿ ಬಳಸುವ ಮೂಲಕ ಎದುರಿಸಲು ನಾವೆಲ್ಲರೂ ಸಿದ್ಧರಿರಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.