ಬೆಂಗಳೂರು, ಮಾರ್ಚ್ 2: ಮಧ್ಯ ಪ್ರಾಚ್ಯದಲ್ಲಿ ಯುದ್ಧ ಆರಂಭಗೊಂಡಿರುವ ಹಿನ್ನೆಲೆ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದವರು, ಉದ್ಯೋಗ ಸಂಬಂಧಿ ಕೆಲಸಗಳಿಗಾಗಿ ದುಬೈಗೆ ಹೋಗಿರುವ ಕನ್ನಡಿಗರು ಸ್ವದೇಶಕ್ಕೆ ಹಿಂತಿರುಗಲಾರದೆ ಪರದಾಟ ನಡೆಸುತ್ತಿದ್ದಾರೆ. ಏಕಾಏಕಿ ವಿಮಾನಗಳ ಹಾರಾಟ ರದ್ದುಗೊಂಡಿರುವ ಕಾರಣ ಆತಂಕಕ್ಕೆ ಒಳಗಾಗಿದ್ದಾರೆ. ಕ್ಷಣ ಕ್ಷಣಕ್ಕೂ ಯುದ್ಧದ ತೀವ್ರತೆ ಹೆಚ್ಚುತ್ತಿರುವ ಕಾರಣ ಜೀವ ಭಯ ಕಾಡಲಾರಂಭಿಸಿದ್ದು, ಈ ನಡುವೆ ಕನ್ನಡಿಗರು ಸೇರಿದಂತೆ ಸರ್ವ ಭಾರತೀಯರ ಸುರಕ್ಷಿತ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.
ಪ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋದವರ ಪರದಾಟ
ಫ್ಯಾಮಿಲಿ ಜೊತೆ ದುಬೈ ಪ್ರವಾಸಕ್ಕೆ ಹೋಗಿದ್ದ ಚಿಕ್ಕಮಗಳೂರಿನ ಮಯೂರ್ ಹೋಟೆಲ್ ಮಾಲೀಕ ಗಿರೀಶ್ ಮತ್ತು ಕುಣಿಗಲ್ ನಲ್ಲಿ ವಾಸವಿರೋ ಅವರ ಸಹೋದರ ಹರೀಶ್ ಭಟ್ ಕುಟುಂಬಗಳು ದುಬೈನಲ್ಲಿ ಸಿಲುಕಿವೆ. ಅಲ್ಲಿಂದ ಭಾರತಕ್ಕೆ ಹಿಂದಿರುಗಲು ಮಾರ್ಚ್ 3ಕ್ಕೆ ಫ್ಲೈಟ್ ಬುಕ್ ಆಗಿದೆ. ಈ ನಡುವೆ ಯುದ್ಧ ಪ್ರಾರಂಭವಾಗಿರುವ ಕಾರಣ ಎರಡು ಕುಟುಂಬಗಳು ಒಟ್ಟು 9 ಜನ ಹೋಟೆಲ್‌ನಲ್ಲಿ ಉಳಿದುಕೊಂಡಿವೆ. ಫೆ. 2ರಂದು ಇವರು ಪ್ರವಾಸಕ್ಕೆ ತೆರಳಿದ್ದರು3. ಹಾಗೆಯೇ ಚಿತ್ರದುರ್ಗದ ಬಾಪೂಜಿ ವಿದ್ಯಾ ಸಂಸ್ಥೆಯ ಕೆ.ಎಂ. ವೀರೇಶ್ ಕುಟುಂಬ ಕೂಡ ದುಬೈನಲ್ಲೇ ಲಾಕ್ ಆಗಿದೆ. ಕುಟುಂಬದವರೆಲ್ಲರೂ ಸುರಕ್ಷಿತವಾಗಿದ್ದು, ಖಾಸಗಿ ಪತ್ರಿಕೆಯ ಅವಾರ್ಡ್ ಕಾರ್ಯಕ್ರಮಕ್ಕೆಂದು ಇವರು ತೆರಳಿದ್ದರು.
ಪ್ಲೀಸ್ ನಮ್ಮನ್ನು ಕರೆಸಿಕೊಳ್ಳಿ- ಮಹಿಳೆಯ ಅಳು
ಬೆಂಗಳೂರಿನ ಹೊಸಕೆರೆ ನಿವಾಸಿಯಾಗಿರುವ ಸುನೀತಾ ಅವರು ತಮ್ಮ ಕುಟುಂಬದೊಂದಿಗೆ ದುಬೈ ಪ್ರವಾಸಕ್ಕೆ ತೆರಳಿದಾಗ ಅನಿರೀಕ್ಷಿತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಫೆಬ್ರವರಿ 23 ರಂದು ದುಬೈಗೆ ಪ್ರಯಾಣಿಸಿದ್ದರು ಈ ಕುಟುಂಬ, ಫೆಬ್ರವರಿ 28 ರಂದು ಅಬುಧಾಬಿಯಿಂದ ಬೆಂಗಳೂರಿಗೆ ಮರಳಬೇಕಿತ್ತು. ಆದರೆ, ಇಸ್ರೇಲ್-ಇರಾನ್ ಸಂಘರ್ಷದ ಸಾಧ್ಯತೆ ಇರಬೇಕಿದ್ದ ವಿಮಾನಗಳು ರದ್ದುಗೊಂಡಿವೆ.
ಇದನ್ನೂ ಓದಿ: ಕನ್ನಡಿಗರಷ್ಟೇ ಅಲ್ಲ ಯಾರೂ ಆತಂಕ ಪಡಬೇಕಿಲ್ಲ, ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ; ಪ್ರಲ್ಹಾದ್ ಜೋಶಿ ಅಭಯ
ಲಂಡನ್ ಗೆ ಹೊರಟಿದ್ದ ಪ್ರಯಾಣಿಕ ದುಬೈನಲ್ಲಿ ಲಾಕ್
ಕೆಲಸದ ವಿಚಾರಕ್ಕೆ ಬೆಂಗಳೂರಿನಿಂದ ಲಂಡನ್‌ಗೆ ಹೊರಟಿದ್ದ ಸೀನಿಯರ್ ಈಕ್ವಿಟಿ ಸಲಹಾಗಾರ ನಾಗೇಂದ್ರ ಅವರು ಕೂಡ ದುಬೈನಲ್ಲಿ ಸಿಲುಕಿಕೊಂಡು ಪರದಾಟ ನಡೆಸುತ್ತಿದ್ದಾರೆ. ಲಂಡನ್‌ಗೆ ಹೊರಟಿದ್ದ ಇವರು ದುಬೈನಲ್ಲಿ ವಿಮಾನವನ್ನು ಬದಲಾಯಿಸಿದ್ದರು. ಕುಟುಂಬದ ಜೊತೆಗೆ ಇರುವ ನಾಗೇಂದ್ರ, ಸುತ್ತಮುತ್ತ ದೊಡ್ಡ ಶಬ್ದ ಕೇಳಿಬರುತ್ತಿದೆ ಎಂದು ಹೆಂಡತಿಗೆ ಮಾತನಾಡುತ್ತಾರೆ. ತಾನಿರುವ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆ ಇರೋದಾಗಿಯೂ ಮಾಹಿತಿ ಲಭ್ಯವಾಗಿದೆ.
ಸಹಾಯವಾಣಿ ಆರಂಭ
ಮಧ್ಯಪ್ರಾಚ್ಯ ದೇಶಗಳಲ್ಲಿ ಅನೇಕ ಕನ್ನಡಿಗರು ಸಿಲುಕಿರುವ ಹಿನ್ನೆಲೆ ರಾಜ್ಯ ಸರ್ಕಾರ ತುರ್ತು ಸಹಾಯವಾಣಿ ಆರಂಭಿಸಿದೆ. 080-22340676 ಅಥವಾ 22253707 ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.