ವರ್ಷಕ್ಕೆ 90 ದಿನ ಕೆಲಸ ಮಾಡಿದರೂ ಸಾಕು, ಅರೆಕಾಲಿಕ ಕಾರ್ಮಿಕರಿಗೆ ಅನುಕೂಲವಾಗಲಿರುವ ಸರ್ಕಾರದ ಹೊಸ ರೂಲ್ಸ್

ವರ್ಷಕ್ಕೆ 90 ದಿನ ಕೆಲಸ ಮಾಡಿದರೂ ಸಾಕು, ಅರೆಕಾಲಿಕ ಕಾರ್ಮಿಕರಿಗೆ ಅನುಕೂಲವಾಗಲಿರುವ ಸರ್ಕಾರದ ಹೊಸ ರೂಲ್ಸ್


ಜನವರಿ 2: ಓಲಾ, ಊಬರ್, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಇತ್ಯಾದಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ಡ್ರೈವರ್‌ಗಳು ಮತ್ತು ಅರೆಕಾಲಿಕ ಕಾರ್ಮಿಕರಿಗೆ (ಗಿಗ್ ವರ್ಕರ್ಸ್) ಸಾಮಾಜಿಕ ಭದ್ರತಾ ಸಂಹಿತೆಯ ಸೌಲಭ್ಯ ಸಿಗುವ ಸಂಬಂಧ ಸರ್ಕಾರಕ್ಕೆ ಹೊಸ ನಿಯಮಗಳಿವೆ. ಸರ್ಕಾರ ರೂಪಿಸಿರುವ ಕರಡು ನಿಯಮಗಳ ಪ್ರಕಾರ, ಗಿಗ್ ಕಾರ್ಮಿಕರು ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಿದರೂ, ಅವರು ಸೋಶಿಯಲ್ ಸೆಕ್ಯುರಿಟಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪ್ಲಾಟ್ ಫಾರ್ಮ್ ಗಾಗಿ ಕೆಲಸ ಮಾಡುತ್ತಿದ್ದೀರಾ..?

ಈಗ ಒಬ್ಬ ಆಟೋಚಾಲಕ ಅಥವಾ ಕ್ಯಾಬ್ ಚಾಲಕರಾಗಿದ್ದರೆ ನಮ್ಮ ಯಾತ್ರಿ, ಓಲಾ, ಊಬರ್ ಪ್ಲಾಟ್‌ಫಾರ್ಮ್‌ಗಳಿಗೆ ಸಬ್‌ಸ್ಕ್ರೈಬ್ ಆಗಿರುವುದು. ಎಲ್ಲವನ್ನೂ ಆನ್‌ನಲ್ಲಿಟ್ಟುಕೊಂಡು ಗ್ರಾಹಕರಿಗಾಗಿ ಕಾಯುವುದು. ಜೊತೆಗೆ, ಸ್ವಿಗ್ಗಿ, ಜೊಮಾಟೊ ಎರಡಕ್ಕೂ ಕೆಲಸ ಮಾಡುವ ಡೆಲಿವರಿ ಪಾರ್ಟ್ನರ್ಸ್ ಕಾರ್ಮಿಕರಿಗೆ. ಹೀಗೆ, ಒಂದಕ್ಕಿಂತ ಹೆಚ್ಚು ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯವಾಗಿರುವ ಕಾರ್ಮಿಕರು ಸೋಷಿಯಲ್ ಸೆಕ್ಯುರಿಟಿ ಸೌಲಭ್ಯ ಪಡೆಯಲು 120 ದಿನಗಳ ಕೆಲಸದ ಸ್ಥಳವನ್ನು ಮುಟ್ಟಬೇಕು.

ಇದನ್ನೂ ಓದಿ: 21 ವರ್ಷದ ಬೆಂಗಳೂರು ಹುಡುಗ ಎಡ್ವರ್ಡ್‌ಗೆ ಎರಡೂವರೆ ಕೋಟಿ ರೂ ಸಂಬಳ ಆಫರ್

ಆದರೆ, ಇಲ್ಲೊಂದು ಅನುಕೂಲ ಇರುತ್ತದೆ. ಒಬ್ಬ ಕಾರ್ಮಿಕ ದಿನದಲ್ಲಿ ಮೂರು ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿದ್ದಾಗ, ಆತನ ಕೆಲಸದ ದಿನವನ್ನು ಮೂರು ಎಂದು ಪರಿಗಣಿಸಲಾಗಿದೆ. ಹೀಗೆ, ದಿನಕ್ಕೆ ಮೂರು ಪ್ಲಾಟ್‌ಫಾರ್ಮ್‌ಗಳಿಗೆ 40 ದಿನ ಕೆಲಸ ಮಾಡಿದರೂ ಸಾಕು, ಆತ ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯಲು ಅರ್ಹನಾಗಿರುತ್ತಾನೆ. ಇಂಥದ್ದೊಂದು ಅವಕಾಶ ನೀಡುವ ಪ್ರಸ್ತಾವವನ್ನು ಸರ್ಕಾರ ಮಾಡಿದೆ.

ನೇರ ನೇಮಕಾತಿ ಆಗಬೇಕೆಂದಿಲ್ಲ…

ಅರೆಕಾಲಿಕ ಕಾರ್ಮಿಕ ಅಥವಾ ಗಿಗ್ ವರ್ಕರ್ ಸಾಮಾಜಿಕ ಭದ್ರತಾ ಯೋಜನೆಗಳು ಕಂಪನಿಗೆ ನೇರವಾಗಿ ನೇಮಕಾತಿ ಆಗಿರಬೇಕೆಂದಿಲ್ಲ. ಥರ್ಡ್ ಪಾರ್ಟಿ ಮೂಲಕ ಗುತ್ತಿಗೆ ಆಧಾರವಾಗಿ ಕೆಲಸ ಮಾಡುವವರಿಗೆ ಕವರೇಜ್ ಸಿಗಬೇಕು ಎಂದು ಕರಡು ನಿಯಮವನ್ನು ತಿಳಿಸಲಾಗಿದೆ.

ಸಾಮಾಜಿಕ ಭದ್ರತೆ ಸ್ಕೀಮ್ ಹೇಗಿರುತ್ತದೆ?

ಹೊಸ ಕಾರ್ಮಿಕ ಸಂಹಿತೆ ಪ್ರಕಾರ, ಅರೆಕಾಲಿಕ ಕಾರ್ಮಿಕರಿಗೆ ಆರೋಗ್ಯ ಇನ್‌ಶೂರೆನ್ಸ್, ಲೈಫ್ ಇನ್‌ಶೂರೆನ್ಸ್ ಮತ್ತು ಆಕ್ಸಿಡೆಂಟ್ ಇನ್‌ಶೂರೆನ್ಸ್ ಸೌಲಭ್ಯ ಕೊಡಬೇಕು. ಆಯುಷ್ಮಾನ್ ಭಾರತ್ ಸ್ಕೀಮ್ ಅಡಿಯಲ್ಲಿ ಅವರನ್ನು ಸೇರಿಸಬೇಕು ಎಂದಿದೆ.

ಇದನ್ನೂ ಓದಿ: ಪ್ಯಾಲೆಸ್ಟೀನ್ ಧ್ವಜದ ಸ್ಟಿಕರ್ ಅಂಟಿಸಿಕೊಂಡು ಆಡಿದ ಕಾಶ್ಮೀರೀ ಕ್ರಿಕೆಟಿಗ; ಪೊಲೀಸರಿಂದ ವಿಚಾರಣೆ

ಒಂದು ಅಂದಾಜು ಪ್ರಕಾರ, ಭಾರತದ ವಿವಿಧೆಡೆ ಒಟ್ಟು 1.27 ಕೋಟಿಗೂ ಅಧಿಕ ಇಂತಹ ಗಿಗ್ ವರ್ಕರ್ಸ್ ಇದ್ದಾರೆ ಎಂದು ಅಂದಾಜಿಸಲಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ (2029-30) ಇಂಥ ಕಾರ್ಮಿಕರ ಸಂಖ್ಯೆ 2.35 ಕೋಟಿ ದಾಟುವ ನಿರೀಕ್ಷೆ ಇದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *