ಜೀ ಕನ್ನಡದ ‘ಕರ್ಣ’ ಧಾರಾವಾಹಿಯ ಕೆಲವ ದೃಶ್ಯಗಳು ಸದ್ದು ಮಾಡುತ್ತಿದೆ. ಅವಧಿ ಮೀರಿದ ಮಾತ್ರೆಗಳ ಪ್ರಕರಣದಲ್ಲಿ ಜೈಲು ಸೇರಿರುವ ಕರ್ಣನ ವಿರುದ್ಧ ಆರೋಗ್ಯ ಸಚಿವರೇ ಪಿತೂರಿ ನಡೆಸಿ, ಆತನನ್ನು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಒಂದು ಸೀರಿಯಲ್ ಎಂದರೆ, ಅದರಲ್ಲಿ ಸಮಾಜದ ವಿವಿಧ ಮುಖಗಳನ್ನು ತೋರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಕೆಲವೊಂದು ದೃಶ್ಯಗಳು ನೆಗೆಟಿವ್ ರೂಪದಲ್ಲಿ ವೀಕ್ಷಕರ ಮನಸ್ಸಿನ ಮೇಲೆ ನಾಟುವ ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ಸಾಕಷ್ಟು ಟೀಕೆಗಳು ಬಂದರೆ, ಒಳ್ಳೆಯ ದೃಶ್ಯಗಳಿಗೆ ಉತ್ತಮ ಪ್ರತಿಕ್ರಿಯೆಯೂ ಬರುತ್ತದೆ.

ಅದೇ ರೀತಿ ಜೀ ಕನ್ನಡದ ಕರ್ಣ ಸೀರಿಯಲ್ (Karna Serial) ಬಗ್ಗೆ ಇದಾಗಲೇ ಹಲವಾರು ರೀತಿಯಲ್ಲಿ ಪರ- ವಿರೋಧ ನಿಲುವು ವ್ಯಕ್ತವಾಗುತ್ತಲೇ ಇದೆ. ಕೆಲವೊಮ್ಮೆ ಆ ಪಾತ್ರಗಳನ್ನು ಮಾಡುವ ನಟ-ನಟಿಯರ ಮೇಲೂ ಇದು ಪರಿಣಾಮ ಬೀರುತ್ತದೆ. ಇದೊಂದು ಸೀರಿಯಲ್, ಅವರು ಪಾತ್ರಧಾರಿಗಳು ಎನ್ನುವುದನ್ನೂ ಮರೆತು ಜನರು ವೈಯಕ್ತಿಕವಾಗಿಯೇ ತೆಗೆದುಕೊಳ್ಳುವುದೂ ಇದೆ.

ಈ ಸೀರಿಯಲ್ನ ವಿಲನ್ ರಮೇಶ್ (ನಟ ಟಿ. ನಾಗಾಭರಣ) ಕಸದ ಬುಟ್ಟಿಯಲ್ಲಿ ಅನ್ನ ಚೆಲ್ಲುವುದು, ಕರ್ಣನಿಗೆ ಆಹಾರ ಸಿಗದಂತೆ ಉಳಿದ ಆಹಾರ ಚೆಲ್ಲಲು ಪತ್ನಿಯನ್ನು ಪ್ರೇರೇಪಿಸಿದ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಕೆಲವರು ನೇರವಾಗಿ ನಟನ ವಿರುದ್ಧವೇ ಅಸಮಾಧಾನವನ್ನು ಸೋಷಿಯಲ್ ಮೀಡಿಯಾದಲ್ಲಿ ಹೊರ ಹಾಕಿದ್ದು ಇವೆ.

ಆ ಬಳಿಕ ರಮೇಶ್ ಸೇರಿದಂತೆ ಇತರ ವಿಲನ್ಗಳಾದ ನಯನತಾರಾ, ಸಂಜಯ್ ಎಲ್ಲಾ ಸೇರಿ ಡೇಟ್ ಬಾರ್ ಆಗಿರೋ ಮಾತ್ರೆಗಳನ್ನು ಇಟ್ಟು, ರೋಗಿಗಳನ್ನು ಸಾಯಿಸಿರುವುದು ಕೂಡ ಸಾಕಷ್ಟು ಟ್ರೋಲ್ ಆಗುತ್ತಿದೆ. ಕರ್ಣನ ಹೆಸರಿಗೆ ಮಸಿ ಬಳಿಯುವ ನೆಪದಲ್ಲಿ ಈ ರೀತಿ ವರ್ತಿಸಿರುವ ದೃಶ್ಯದ ಬಗ್ಗೆ ಆಕ್ಷೇಪಗಳು ಕೇಳಿಬರುತ್ತಿವೆ. ಆದರೆ, ಸೀರಿಯಲ್ನಲ್ಲಿ ಸದ್ಯ ಇದೇ ಕಾರಣಕ್ಕೆ ಕರ್ಣ ಜೈಲುಪಾಲಾಗಿದ್ದಾನೆ.

ಆದರೆ, ಇದೇ ವೇಳೆ ಕೆಲವು ದುಷ್ಟ, ಭ್ರಷ್ಟ ರಾಜಕಾರಣಿಗಳನ್ನು ಅನಾವರಣಗೊಳಿಸುತ್ತಿದೆ ಈ ಸೀರಿಯಲ್ ಎನ್ನುವ ಮಾತು ಕೇಳಿಬರುತ್ತಿದೆ. ಅದಕ್ಕೆ ಕಾರಣ, ಕರ್ಣ ಸೀರಿಯಲ್ನಲ್ಲಿ, ಜೈಲುಪಾಲಾಗಿರುವ ಕರ್ಣನನ್ನು ನೋಡಲು ಸೀರಿಯಲ್ನ ಆರೋಗ್ಯ ಸಚಿವ ಜೈಲಿಗೆ ಬಂದಿರುವುದು.

ಪೊಲೀಸ್ ಬಳಿ ಈ ಸೀರಿಯಲ್ ಆರೋಗ್ಯ ಸಚಿವ, ಈ ವಿಷಯದಲ್ಲಿ ಕರ್ಣನ ತಪ್ಪು ಇದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಈತನಿಗೆ ಸಿಕ್ಕಾಪಟ್ಟೆ ಕಠಿಣ ಶಿಕ್ಷೆ ಆಗುವ ಹಾಗೆ ಮಾಡಬೇಕು. ಈ ಕೇಸ್ನಲ್ಲಿ ಇವನನ್ನು ಫಿಕ್ಸ್ ಮಾಡಬೇಕು. ದೊಡ್ಡ ಜೈಲಿನಲ್ಲಿ ಇವನನ್ನು ಇಡುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದು ಪೊಲೀಸ್ ಅಧಿಕಾರಿಗೆ ಹೇಳಿ ಹೋಗುತ್ತಾನೆ.

ಅಲ್ಲಿಗೆ ಈ ಸೀರಿಯಲ್ ಆರೋಗ್ಯ ಸಚಿವ ರಮೇಶ್, ನಯನತಾರಾ ಪರವಾಗಿ ಅಲ್ಲಿಗೆ ಬಂದಿದ್ದಾನೆ. ಆ ವಿಲನ್ಗಳ ನಿಯತ್ತಿನ ಮನುಷ್ಯನಾಗಿ ಕರ್ಣನನ್ನು ಫಿಕ್ಸ್ ಮಾಡಲು ನೋಡುತ್ತಿದ್ದಾರೆ. ರೌಡಿಗಳ, ವಿಲನ್ಗಳು, ಆಗರ್ಭ ಶ್ರೀಮಂತರ ಕೈಯಾಳಾಗಿರುವ ವ್ಯಕ್ತಿಯಾಗಿ ಈ ರಾಜಕಾರಣಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ ಎನ್ನುವ ಮಾತು ಕೇಳಿಬರುತ್ತಿದೆ. ಅಷ್ಟಕ್ಕೂ ನಿಜ ಜೀವನದಲ್ಲಿಯೂ ಇಂಥ ಅದೆಷ್ಟೋ ಘಟನೆಗಳು, ಪ್ರಕರಣಗಳು ಕಣ್ಣಾರೆ ಕಾಣುತ್ತೇವೆ ಅಲ್ಲವೇ ಎನ್ನುವುದು ಅವರ ಪ್ರಶ್ನೆ.

Source link
ಜೈಲಿಗೆ ಬಂದ ಆರೋಗ್ಯ ಸಚಿವ! ಕೇಸ್ನಲ್ಲಿ ಫಿಕ್ಸ್- ಭ್ರಷ್ಟ ರಾಜಕಾರಣಿಗಳ ಬಟಾ ಬಯಲು ಮಾಡ್ತಿದ್ಯಾ Karna Serial?