ಬೆಳಗಾವಿ, (ಜನವರಿ 13): ಕಳೆದ ವರ್ಷ ಸಂಭವಿಸಿದ ಅಪಘಾತದ ರಸ್ತೆಯ ಬಗ್ಗೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ (ಲಕ್ಷ್ಮಿ ಹೆಬ್ಬಾಳ್ಕರ್) ನೆನಪಿಸಿಕೊಂಡಿದ್ದಾರೆ. ಇಂದು (ಜನವರಿ 13) ಬೆಳಗಾವಿಯ ಸಹ್ಯಾದ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಕಾರು ಅಪಘಾತ (ಕಾರು ಅಪಘಾತ) ಇವತ್ತಿಗೆ ಒಂದು ವರ್ಷವಾಗಿದೆ. ಒಂದು ವರ್ಷದ ಹಿಂದೆ ಏನಾದರೂ ಹೆಚ್ಚು ಕಡಿಮೆ ಆಗಿದ್ರೆ ಎಲ್ಲರೂ ಒಂದು ವರ್ಷದ ಜಯಂತಿ ಮಾಡ್ತಿದ್ರಿ. ನಿಮ್ಮೆಲ್ಲರ ಆಶೀರ್ವಾದದಿಂದ ಸೇವೆ ಮಾಡುವ ಸಲುವಾಗಿ ಬದುಕಿದ್ದೇನೆ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡರು.
ಇನ್ನು ಇದೇ ವೇಳೆ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪನವರ ರೀತಿ ಬೆಳೆಯಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ನಾನು ಜನನಾಯಕಿ ಅನ್ನಿಸಿಕೊಳ್ಳಬೇಕೆಂಬ ಹುಚ್ಚು ಹಂಬಲವಿದೆ. ನಾನು ಶಾಸಕಿಯಾದ ಮೇಲೆ ಗಲಭೆ, ಜಾತಿ ರಾಜಕಾರಣ ಮಾಡಿಲ್ಲ. ನಾನು ಪೊಲೀಸರ ಮೇಲೂ ಒತ್ತಡ ಹಾಕಿಲ್ಲ. ಕುವೆಂಪು ಹೇಳಿದಂತೆ ನಮ್ಮ ಕ್ಷೇತ್ರ ಶಾಂತಿಯ ತೋಟವಾಗಿದೆ. ಎಲ್ಲರೂ ಅನ್ಯೋನ್ಯವಾಗಿ ಒಟ್ಟಾಗಿ ಹೋಗೋಣ, ಬಾಳೋಣ. ನನ್ನ ಕಾರು ಅಪಘಾತಗೊಂಡು ಇವತ್ತಿಗೆ ಒಂದು ವರ್ಷವಾಗಿದೆ. ಎಲ್ಲಿಯೂ ಕಲಿಯಬೇಡಿ ಎಂದು ಯುವರಾಜ ಅಣ್ಣ ಹೇಳಿದ್ರು. ಆದರೆ ನಾನು ಸಾಧನೆ ಮಾಡುವುದು, ಹೆಸರು ಗಳಿಸಬೇಕಿದೆ. ಜನನಾಯಕಿ ಅನ್ನಿಸಿಕೊಳ್ಳಬೇಕು ಎಂಬ ಹುಚ್ಚು, ಹಂಬಲವಿದೆ. ಸಿದ್ದರಾಮಯ್ಯ, ಯಡಿಯೂರಪ್ಪಗೆ ಜನಪ್ರಿಯ ನಾಯಕ’ ಅಂತೀವಿ. ಅದೇ ರೀತಿ ನಾಯಕಿ ಅನ್ನಿಸಿಕೊಳ್ಳಬೇಕು ಎಂದು ಜನಪ್ರಿಯವಾಗಿದೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ