
‘ಧುರಂಧರ 2’ (ಧುರಂಧರ 2) ಸಿನಿಮಾ ಬಗ್ಗೆ ಪರ-ವಿರೋಧ ಎರಡೂ ವ್ಯಕ್ತವಾಗುತ್ತಿದೆ. ಇದೀಗ ರಾಜ್ಯ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಧುರಂಧರ 2’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಟಿಪ್ಪು ಸುಲ್ತಾನ್ ಸಂಬಂಧಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೊದಲೆಲ್ಲ ವಾಟ್ಸ್ ಆಪ್ ಯೂನಿವರ್ಸಿಟಿಯಲ್ಲಿದ್ದ ಸುಳ್ಳುಗಳನ್ನು ಈಗ ಸಿನಿಮಾ ಮಾಡಲಾಗುತ್ತಿದೆ. ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ, ‘ಧುರಂಧರ’, ‘ಛಾವಾ’ ಇನ್ನೂ ಏನೇನೋ. ಇವರೆಲ್ಲ ಸಿನಿಮಾ ಮಾಡಿ ಅದು 1000 ಕೋಟಿ ಗಳಿಸಿದರೆ ನನಗೆ ಬೇಸರವಿಲ್ಲ. ಯಾರೋ ಬುದ್ಧಿ ಇಲ್ಲದ ಜನ, ಬಿಜೆಪಿ ಕಾರ್ಯಕರ್ತರು ಅದನ್ನು ನಂಬಿಕೊಂಡರೆ ಬೇಸರವಿಲ್ಲ. ಆದರೆ ಶಿಕ್ಷಿತರು ಈ ಪ್ರೊಗಂಡಾಕ್ಕೆ ತೆಗೆದುಕೊಳ್ಳಬಾರದು’ ಪ್ರಿಯಾಂಕ್ ಖರ್ಗೆ ಹೇಳುವುದೇನು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ