ಚಿತ್ರದುರ್ಗ, (ಅಕ್ಟೋಬರ್ 31): ಸದ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಶುರುವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇದರ ನಡುವೆ ದಲಿತ ಸಿಎಂ ಕೂಗು ಕೇಳಿಬಂದಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಜಮೀರ್ ಅಹ್ಮದ್ ಖಾನ್ ಮುಂದಿನ ಡಿಸಿಎಂ ಎಂದು ಘೋಷಣೆ ಮೊಳಗಿದೆ. ಚಿತ್ರದುರ್ಗದಲ್ಲಿ ಜಮೀರ್ ಅಹ್ಮದ್ ಖಾನ್ ಮುಂದಿನ ಡಿಸಿಎಂ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಬೈಕ್ ರ್ಯಾಲಿ ಮೂಲಕ ಜಮೀರ್ ಸ್ವಾಗತಿಸುವ ವೇಳೆ ಬೆಂಬಲಿಗರು, ಜಮೀರ್ ಮುಂದಿನ ಡಿಸಿಎಂ ಅಭಿತ್ತಿಪತ್ರ ಪ್ರದರ್ಶಿಸಿದರು. ಇದೇ ಖುಷಿಯಲ್ಲಿ ಜಮೀರ್ ಅಭಿಮಾನಿಗಳಿಗೆ ಮುತ್ತುಕೊಟ್ಟಿದ್ದಾರೆ.