
ಹದಿಹರೆಯದವರ ನಡುವಿನ ಅರಿವಿನ ಕೊರತೆ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕುವಂತಹ ಘಟನೆಯೊಂದು ವರದಿಯಾಗಿದೆ. 14 ವರ್ಷದ ಬಾಲಕನೊಬ್ಬನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಮತ್ತು ಆತಂಕ ಮೂಡಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರ ಪ್ರಕಾರ, 14 ವರ್ಷದ ಬಾಲಕನೊಬ್ಬ ಇಬ್ಬರು ಬಾಲಕಿಯರ ಗರ್ಭಧಾರಣೆಗೆ ಕಾರಣನಾಗಿದ್ದಾನೆ. ಈ ಬಾಲಕಿಯರೂ ಸಹ ಅಪ್ರಾಪ್ತ ವಯಸ್ಕರಾಗಿದ್ದರೆ, ಘಟನೆಯು ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ. ಇನ್ನು ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇದು ವಿದೇಶದ ವಿಡಿಯೋ ಎಂದು ಹೇಳಲಾಗಿದೆ.
ಹದಿಹರೆಯದವರಲ್ಲಿ ಶಿಕ್ಷಣದ ಕೊರತೆ, ಪೋಷಕರ ಮಾರ್ಗದರ್ಶನದ ವೈಫಲ್ಯ ಮತ್ತು ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವ ಘಟನೆಗಳು ಮತ್ತು ದೈಹಿಕ ಬದಲಾವಣೆಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದು ಇಂತಹ ಕಾರಣಗಳಿಗಾಗಿ ಅನೇಕರು ಕಮೆಂಟ್ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ‘ನನಗೆ 3BHK ಮನೆ ಹುಡುಕಿ ಕೊಡಿ, ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ’: ಬೆಂಗಳೂರಿನಲ್ಲಿ ಮನೆ ಹುಡುಕಾಟದಿಂದ ಬೇಸತ್ತ ಯುವಕ
ಇಲ್ಲಿದೆ ನೋಡಿ ವೈರಲ್ ವಿಡಿಯೋ:
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಈ ವಯಸ್ಸಿನಲ್ಲಿ ಗರ್ಭಧರಿಸುವುದು ಬಾಲಕಿಯರ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಕಾನೂನಾತ್ಮಕವಾಗಿ ಇದು ಬಾಲಾಪರಾಧ ಮತ್ತು ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ. ಈ ಘಟನೆಯು ಕುಟುಂಬಗಳು, ಶಾಲೆಗಳು ಮತ್ತು ಸಮಾಜವು ಯುವ ಪೀಳಿಗೆಯ ಸಂಬಂಧಗಳು ಮತ್ತು ಪ್ರಜನನ ಆರೋಗ್ಯದ ಬಗ್ಗೆ ಶಿಕ್ಷಣ ನೀಡಬೇಕೆಂದು ಹೇಳಲಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ