Headlines

ಇದು ಯಾವುದೇ ಸಿನಿಮಾದ ಸ್ಟಂಟ್ ಅಲ್ಲ, ಬ್ರೆಜಿಲ್​ನಲ್ಲಿ ಸಂಭವಿಸಿದ ಕಾರು ಅಪಘಾತದ ಭಯಾನಕ ವಿಡಿಯೋ

ಇದು ಯಾವುದೇ ಸಿನಿಮಾದ ಸ್ಟಂಟ್ ಅಲ್ಲ,  ಬ್ರೆಜಿಲ್​ನಲ್ಲಿ ಸಂಭವಿಸಿದ ಕಾರು ಅಪಘಾತದ ಭಯಾನಕ ವಿಡಿಯೋ


ಸಾವೊ ಪಾಲೊ, ನವೆಂಬರ್ 12: ಬ್ರೆಜಿಲ್‌ನ ಸಾವೊ ಪಾಲೊದ ಜಾರ್ಡಿಮ್ ಅಪೂರದಲ್ಲಿ ಕಾರು ವೇಗವಾಗಿ ಬಂದು ರಸ್ತೆಯಿಂದ ಕೆಳಗೆ ಹಾರಿ ಮೆಟ್ಟಿಲುಗಳಿಗೆ ಡಿಕ್ಕಿ ಹೊಡೆದು ಬಿದ್ದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಳಗ್ಗೆ 5.30ರ ಸುಮಾರಿಗೆ ಘಟನೆ ನಡೆದಿದೆ.8 ವರ್ಷದ ರೈಲ್ಸನ್ ಸೌಜಾ ಅವರು ಚಾಲನೆ ಮಾಡುವಾಗ ಹಠಾತ್ ತಲೆನೋವಿನಿಂದ ನಿಯಂತ್ರಣ ಕಳೆದುಕೊಂಡಿದ್ದರು.ಇಷ್ಟು ದೊಡ್ಡ ಅಪಘಾತ ಸಂಭವಿಸಿದರೂ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಾಗಿದ್ದರೆ ಅವರು ಬಚಾವಾಗಿದ್ದಾರೆ. ಕಾರು ವೇಗವಾಗಿ ತಿರುವು ಪಡೆದು, ರಸ್ತೆಯಿಂದ ಹೊರಕ್ಕೆ ತಿರುಗಿ, ಲೋಹದ ಬೇಲಿಗಳನ್ನು ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *