ರಾಯಚೂರು, (ಮಾರ್ಚ್ 04): ಎಟಿಎಂ ಪಿನ್ (ಪಾಸ್ವರ್ಡ್) ಯಾರೊಂದಿಗೆ ಹಂಚಿಕೊಳ್ಳಬೇಡಿ ಎಂದು ವೈದ್ಯರು, ಬ್ಯಾಂಕಿನವರು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಹಳ್ಳಿ ಕಡೆಗಳಲ್ಲಿ ಏನು ತಳಿಯ ಜನ ಎಟಿಎಂನಲ್ಲಿ ಹಣ ಪಡೆಯಲು ಬೇರೆಯವರ ಮೊರೆ ಹೋಗುತ್ತಾರೆ. ಅದರಂತೆ ರಾಯಚೂರಿನಲ್ಲಿ ವ್ಯಕ್ತಿಯೋರ್ವ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಲು ಬೇರೆಯವನ ಸಹಾಯಕರು 64,000 ಕಳೆದುಕೊಂಡಿದ್ದಾರೆ. ಹೌದು…ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ ನಲ್ಲಿ ಫೆಬ್ರವರಿ 26 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..
ಫೆಬ್ರವರಿ 26 ರಂದು ಭೀಮಪ್ಪ ಎಂಬ ವ್ಯಕ್ತಿ ಎಟಿಎಂನಿಂದ ಹಣ ಡ್ರಾಮಾಡಿಕೊಳ್ಳಲು ಹೋಗಿದ್ದಾನೆ. ಆದರೆ, ಗೊತ್ತಾಗಿದ್ದಾಗ ಬೇರೊಬ್ಬರಿಗೆ ಹಣ ತೆಗೆದು ಕೊಡಲು ಏಟಿಎಂ ಪಿನ್ ಸಹ ಹೇಳಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ, ಭೀಮಪ್ಪನಿಗೆ ಬದಲಾಗಿ ಎಟಿಎಂ ಕಾರ್ಡ್ ನೀಡಿ ನಂತರ ಬೇರೆ ಕಡೆ ಹೋಗಿ ಭೀಮಪ್ಪನ ಎಟಿಎಂನಿಂದ 64,000 ಹಣ ಡ್ರಾ ಮಾಡಿಕೊಂಡಿದ್ದಾನೆ. ಬಳಿಕ ಬ್ಯಾಂಕ್‌ಗೆ ತೆರಳಿ ಸಿಬ್ಬಂದಿಯನ್ನು ವಿಚಾರಿಸಿದಾಗ ಮೋಸಹೋಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಭೀಮಪ್ಪ ನೀಡಿದ ದೂರಿನ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,ಪೊಲೀಸರು ತನಿಖೆ ನಡೆಸುತ್ತಿದ್ದಾರೆ.