ಚಾಮರಾಜನಗರ, ಅಕ್ಟೋಬರ್ 17: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೇಗುಲದ ಹುಂಡಿ ಏಣಿಕೆ ಕಾರ್ಯ ಗುರುವಾರ ನಡೆದಿದ್ದು, 2.27 ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹವಾಗಿದೆ. ದಸರಾ, ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ಹುಂಡಿ ಭರ್ತಿ, ಎಣಿಕೆ ನಡೆಸಲಾಯಿತು. ಕೇವಲ 28 ದಿನಕ್ಕೆ ಈ ಮೊತ್ತ ಸಂಗ್ರಹವಾಗಿದೆ. ಗುರುವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ. ನಗದು ರೂಪದಲ್ಲಿ 46 ಗ್ರಾಂ ಚಿನ್ನ, 1.350 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮಾದಪ್ಪನ ಹುಂಡಿಯಲ್ಲಿ 9 ವಿದೇಶಿ ನೋಟುಗಳು ಹಾಗೂ ಚಲಾವಣೆ ಇಲ್ಲದ ಎರಡು ಸಾವಿರ ಮುಖಬೆಲೆಯ 9 ನೋಟು ಸಿಕ್ಕಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ