Headlines

ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ: ಅಮಿರ್ ಆಕ್ರೋಶ

ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ: ಅಮಿರ್ ಆಕ್ರೋಶ


ಕ್ರಿಕೆಟ್‌ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ: ಅಮೀರ್ ಆಕ್ರೋಶ

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪ್ರದರ್ಶನ (13 ಮಾರ್ಚ್ 2026) ನಡೆದ ಸಲ್ಮಾನ್ ಅಲಿ ಅಘಾ ಅವರ ವಿವಾದಾತ್ಮಕ ರನ್-ಔಟ್ ಬಗ್ಗೆ ಪಾಕ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಢಾಕಾದಲ್ಲಿ ನಡೆದ ಈ ಆಟ ಮೊಹಮ್ಮದ್ ರಿಝವಾನ್ ಹೊಡೆದ ಚೆಂಡನ್ನು ತಡೆಯಲು ಬೌಲರ್ ಮೆಹದಿ ಹಸನ್ ಮಿರಾಝ್ ಪ್ರಯತ್ನಿಸಿದರು. ಈ ವೇಳೆ ಕ್ರೀಸ್‌ನಿಂದ ಹೊರಗಿದ್ದ ಅಘಾ ಚೆಂಡು ಬೌಲರ್‌ಗೆ ನೀಡಲು ಮುಂದಾಗಿದ್ದರು.

ಸಲ್ಮಾನ್ ಅಲಿ ಅಘಾ ಅವರು ಚೆಂಡನ್ನು ಎತ್ತಿ ಕೊಡಲು ಮುಂದಾದಾಗ, ಮೆಹದಿ ಹಸನ್ ಅವರು ತಕ್ಷಣವೇ ಚೆಂಡನ್ನು ಎತ್ತಿ ಸ್ಟಂಪ್‌ಗಳಿಗೆ ಎಸೆದರು. ಅಘಾ ಕ್ರೀಸ್‌ನಿಂದ ಹೊರಗಿದ್ದ ಕಾರಣ ಮೂರನೇ ಅಂಪೈರ್ ಅವರನ್ನು ‘ಔಟ್’ ಎಂದು ಘೋಷಿಸಿದರು. ಅಂಪೈರ್ ತೀರ್ಪಿನಿಂದ ಕೆರಳಿದ ಸಲ್ಮಾನ್ ಅಲಿ ಅಘಾ ಕ್ರೀಸ್‌ನಲ್ಲೇ ತಮ್ಮ ಹೆಲ್ಮೆಟ್ ಮತ್ತು ಗ್ಲೌಸ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ಈ ಘಟನೆ ಕುರಿತು ಮೊಹಮ್ಮದ್ ಅಮೀರ್ ಮಾತನಾಡಿದ್ದು, ಕ್ರಿಕೆಟ್‌ನಲ್ಲಿ ಅಂಪೈರಿಂಗ್ ಮಟ್ಟ ದಿನೇ ದಿನೇ ಕುಸಿಯುತ್ತಿದೆ ಎಂದು ದೂರಿದ್ದಾರೆ. ಮೆಹದಿ ಹಸನ್ ಅವರು ಅಘಾ ಕ್ರೀಸ್‌ಗೆ ಮರಳದಂತೆ ಅಡ್ಡಿಪಡಿಸಿದರು. ಇದನ್ನು ಅಂಪೈರ್‌ಗಳು ಗಮನಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ರನ್-ಔಟ್ ನಿಯಮದ ಪ್ರಕಾರ ಸರಿ ಇರಬಹುದು. ಆದರೆ ಕ್ರಿಕೆಟ್‌ನ ‘ಕ್ರೀಡಾ ಸ್ಫೂರ್ತಿ’ಯ ದೃಷ್ಟಿಯಿಂದ ಇದು ತಪ್ಪು. ಬಾಂಗ್ಲಾದೇಶ ತಂಡವು ಸೌಜನ್ಯ ಮೆರೆಯಬಹುದಿತ್ತು ಎಂದು ಅಮೀರ್ ಹೇಳಿದ್ದಾರೆ. ಅಘಾ ಅವರನ್ನು ಬೌಲರ್ ತಡೆದ, ಇದರ ಲಾಭವನ್ನು ಬ್ಯಾಕಿಗೆ ನೀಡಬೇಕಿತ್ತು. ಆದರೆ ಇದ್ಯಾವುದನ್ನೂ ಅಂಪೈರ್ ಗಮನಿಸಲೇ ಇಲ್ಲ.

ಕ್ರಿಕೆಟ್ ಎಂಬುದು ಜಂಟಲ್ಮ್ಯಾನ್ ಆಟ. ಆದರೆ ಇಲ್ಲಿ ಬಾಂಗ್ಲಾದೇಶ ಆಟಗಾರ ಮೆಹದಿ ಹಸನ್ ಮಿರಾಝ್ ಕ್ರೀಡಾ ಸ್ಫೂರ್ತಿಯನ್ನೇ ಮರೆತಿದ್ದಾರೆ. ಅವರು ಕ್ರಿಕೆಟ್‌ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ ಎಂದು ಮೊಹಮ್ಮದ್ ಅಮೀರ್ ಆಕ್ರೋಶ ವ್ಯಕ್ತಪಡಿಸಿದರು.

 



Source link

Leave a Reply

Your email address will not be published. Required fields are marked *