
ಪಾಕಿಸ್ತಾನ್ ವಿರುದ್ಧದ ಎರಡನೇ ಏಕದಿನ ಆಟಗಾರ ಬಾಂಗ್ಲಾದೇಶ ತಂಡದ ನಾಯಕ ಮೆಹಿದಿ ಹಸನ್ ಮಿರಾಝ್ ಅವರು ಸಲ್ಮಾನ್ ಅಲಿ ಅಘಾ ಅವರನ್ನು ರನ್ ಔಟ್ ಮಾಡಿದ ರೀತಿಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾವುದೇ ಆಯ್ಕೆ ಪಡೆಯುವ ಹಪಾಹಪಿಯು ಕ್ರೀಡಾ ಸ್ಫೂರ್ತಿಗಿಂತ ದೊಡ್ಡದಲ್ಲ. ಇದು ಫೈನಲ್ ಪಂದ್ಯವಾಗಿದ್ದರೂ ಸಹ ಇಂತಹ ಕೆಲಸ ಮಾಡಬಾರದು. ಯುವ ಕ್ರಿಕೆಟಿಗರು ಇದನ್ನು ಎಂದಿಗೂ ಅನುಕರಿಸಬಾರದು ಎಂದು ಮೊಹಮ್ಮದ್ ಕೈಫ್ ಸೋಷಿಯಲ್ ಮೀಡಿಯಾ ಮೂಲಕ ಕಿವಿಮಾತು ಹೇಳಿದ್ದಾರೆ.
ಘಟನೆ ಹಿನ್ನಲೆ:
ಪಾಕ್ ತಂಡದ ಆಟಗಾರನ ಸಲ್ಮಾನ್ ಅಲಿ ಅಘಾ ಅವರು ಕ್ರೀಸ್‌ನಿಂದ ಸ್ವಲ್ಪ ಹೊರಬಂದರು, ಕೆಳಗೆ ಬಿದ್ದಿದ್ದ ಚೆಂಡನ್ನು ಎತ್ತಿ ಬೌಲರ್‌ಗೆ (ಮಿರಾಝ್) ನೀಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಮಿರಾಝ್ ಅವರು ಚೆಂಡನ್ನು ತಕ್ಷಣವೇ ಎತ್ತಿ ಸ್ಟಂಪ್‌ಗೆ ಎಸೆದು ಔಟ್ ಮಾಡಿದ್ದಾರೆ. ಅತ್ತ ಥರ್ಡ್ ಅಂಪೈರ್ ಪರಿಶೀಲಿಸಿದಾಗ ಸಲ್ಮಾನ್ ಅಲಿ ಅಘಾ ಕ್ರೀಸ್ ನಿಂದ ಹೊರಗಿರುವುದು ಕಂಡು ಬಂದಿದೆ. ಹೀಗಾಗಿ ಔಟ್ ಎಂದು ತೀರ್ಪು ನೀಡಿದೆ.
ಇದರಿಂದ ಆಕ್ರೋಶಗೊಂಡ ಅಲಿ ಅಘಾ ಅಸಮಾಧಾನ ಹೊರಹಾಕುತ್ತಾ ಮೈದಾನದಿಂದ ತೆರಳಿದ್ದರು. ಇದನ್ನೇ ಪ್ರಸ್ತಾಪಿಸಿ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್, “ಕ್ರೀಡಾ ಸ್ಫೂರ್ತಿ ಇಲ್ಲದ ಆಟ ಆಟವೇ ಅಲ್ಲ” ಎಂದು ಅವರು ಕಿಡಿಕಾರಿದ್ದಾರೆ.