Headlines

ಪಾಕ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ತನ್ನ ದೇಶದ ಪ್ರಧಾನಿ ಹೆಸರೇ ಗೊತ್ತಿಲ್ಲ

ಪಾಕ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ತನ್ನ ದೇಶದ ಪ್ರಧಾನಿ ಹೆಸರೇ ಗೊತ್ತಿಲ್ಲ


2026 ರ ಟಿ20 ಆಗಿದೆ (ಟಿ20 ವಿಶ್ವಕಪ್ 2026) ಫೆಬ್ರವರಿ 7 ರಂದು ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಬಾಂಗ್ಲಾದೇಶ ತಂಡವನ್ನು ಹೊರಹಾಕಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಬಾಂಗ್ಲಾದೇಶದ ಮೇಲೆ ಇತ್ತೀಚಿಗೆ ಸಾಕಷ್ಟು ಪ್ರೀತಿ ತೋರಿಸುತ್ತಿರುವ ಪಾಕಿಸ್ತಾನ, ಇದೀಗ ಹೊಸ ವರಸೆ ತೆಗೆದಿದೆ. ಅದೇನೆಂದರೆ ಬಾಲಾದೇಶವನ್ನು TI20 ನಿಂದ ಹೊರಹಾಕಿದ ಐಸಿಸಿ (ICC) ನೀತಿಯನ್ನು ಪಾಕಿಸ್ತಾನ ಟಿ20 ನಿಂದ ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ ಬೆದರಿಕೆಯನ್ನು ಹಾಕುತ್ತಿದೆ. ಅದರ ಸಲುವಾಗಿಯೇ ಇಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ದೇಶದ ಪ್ರದಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದರು. ಆದಾಗ್ಯೂ ಈ ಭೇಟಿಯ ನಂತರ ಪಿಸಿಬಿ ಅಧ್ಯಕ್ಷರು ಮಾಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ, ಮೊಹ್ಸಿನ್ ನಖ್ವಿ ಜಾಗತೀಕವಾಗಿ ನಗೆಪಾಟಲಿಗೀಡಾಗಿದ್ದಾರೆ.

ಅಪಹಾಸ್ಯಕ್ಕೊಳಗಾದ ನಖ್ವಿ

ವಾಸ್ತವವಾಗಿ ಪಿಸಿಬಿ ಅಧ್ಯಕ್ಷ ನಖ್ವಿ ಕಳೆದೆರಡು ದಿನಗಳಿಂದ ಟಿ20 ನಿಂದ ಪಾಕಿಸ್ತಾನ ತಂಡದ ಭಾಗವಹಿಸುವಿಕೆ ಕುರಿತು ಹೊಸ ನಾಟಕವನ್ನು ಪ್ರಾರಂಭಿಸಲಾಗಿದೆ. ಆ ನಾಟಕದ ಮುಂದುವರಿದ ಭಾಗವಾಗಿ ಇಂದು ಅಂದರೆ ಜನವರಿ 26 ಸೋಮವಾರದಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದರು. ಪ್ರಧಾನಿಯ ಭೇಟಿಯ ಸಮಯದಲ್ಲಿ, ನಖ್ವಿ ಅವರಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಆಯ್ಕೆಗಳ ಕುರಿತು ಚರ್ಚಿಸಲಾಗಿದೆ. ಈ ಸಭೆಯ ಬಗ್ಗೆ ಮಾಹಿತಿ ನೀಡುವ ಸಲವಾಗಿ ಮೊಹ್ಸಿನ್ ನಖ್ವಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಪೋಸ್ಟ್ನಲ್ಲಿ ಮಹಾ ಪ್ರಮಾದ ಮಾಡಿ ಅಪಹಾಸ್ಯಕ್ಕೊಳಗಾಗಿದ್ದಾರೆ.

ಪ್ರಧಾನಿ ಹೆಸರು ತಪ್ಪಾಗಿ ಉಲ್ಲೇಖ

ಪ್ರಧಾನಿ ಶಹಬಾಜ್ ಷರೀಫ್ ಅವರ ಭೇಟಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ, ಅದರಲ್ಲಿ ದೇಶದ ಪ್ರಧಾನಿಯ ಹೆಸರನ್ನು ತಪ್ಪಾಗಿ ಬರೆದಿದ್ದಾರೆ. ಹಾಲಿ ಪ್ರಧಾನಿ ಶಹಬಾಜ್ ಷರೀಫ್ ಅವರ ಹೆಸರನ್ನು ಬರೆಯುವ ಬದಲಿಗೆ ಮಾಜಿ ಪ್ರಧಾನಿ ಮಿಯಾನ್ ಮುಹಮ್ಮದ್ ನವಾಜ್ ಷರೀಫ್ ಅವರ ಹೆಸರನ್ನು ಬರೆದಿದ್ದಾರೆ. ನವಾಜ್ ಷರೀಫ್ ಪಾಕಿಸ್ತಾನದ ಮಾಜಿ ಪ್ರಧಾನಿ, ಶಹಬಾಜ್ ಷರೀಫ್ ಅವರ ಸಹೋದರ. ಹೀಗೆ ತನ್ನ ದೇಶದ ಪ್ರಧಾನಿಯ ಹೆಸರನ್ನು ತಪ್ಪಾಗಿ ಬರೆದಿರುವ ನಖ್ವಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಮತ್ತು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಆ ಬಳಿಕ ನಖ್ವಿಗೆ ತನ್ನ ತಪ್ಪಿನ ಅರಿವಾಗಿದೆಯಾದರೂ ಅಷ್ಟರಲ್ಲಾಗಲೇ ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.

T20 ವಿಶ್ವಕಪ್ 2026: T20 ನಿಂದ ಭಾರತ-ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ

ಟಿ20 ಇದರ ಬಗ್ಗೆ ಚರ್ಚೆ

ಶಹಬಾಜ್ ಷರೀಫ್ ಅವರ ಭೇಟಿಯ ನಂತರ, ನಖ್ವಿ ಅವರು ಜನವರಿ 30 ರ ಶುಕ್ರವಾರ ಅಥವಾ ಫೆಬ್ರವರಿ 2 ರಂದು ಸೋಮವಾರದಿಂದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಟಿ20 ನಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆಯ ಬಗ್ಗೆ ಪಾಕಿಸ್ತಾನ ಸರ್ಕಾರ ನಿರ್ಧರಿಸುತ್ತದೆ ಎಂದು ನವಿ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಇದೆಲ್ಲವನ್ನು ನೋಡಿದರೆ, ಪಾಕಿಸ್ತಾನದ ಉದ್ದೇಶಪೂರ್ವಕವಾಗಿ ಇಲ್ಲದ ತೊಂದರೆ ತನ್ನ ಮೈಮೇಲೆ ಎಳೆದುಕೊಳ್ಳುತ್ತಿದೆ ಎನ್ನಬಹುದು.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *