ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದರು. ಈ ಬಾರಿ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ತೆರಳಿದ್ದರು. ಈಗ ಅವರಿಗೆ ಜೀ ಕನ್ನಡ ವಾಹಿನಿಯಿಂದ ಆಫರ್ ಸಿಕ್ಕಿದೆ. ‘ಜಗದ್ಧಾತ್ರಿ’ ಹೆಸರಿನ ಹೊಸ ಧಾರಾವಾಹಿ ಶೀಘ್ರವೇ ಪ್ರಸಾರ ಕಾಣಲಿದೆ. ಈ ಧಾರಾವಾಹಿಗೆ ಮೋಕ್ಷಿತಾ ಪೈ ನಾಯಕಿ ಎಂದು ವರದಿಯಾಗಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.