Headlines

ಫರ್ಮಾನ್ ಖಾನ್ ಜೊತೆ ಮೊನಲಿಸಾ ಮದುವೆ: ತಂದೆ ಹೇಳಿದ್ದೇನು?

ಫರ್ಮಾನ್ ಖಾನ್ ಜೊತೆ ಮೊನಲಿಸಾ ಮದುವೆ: ತಂದೆ ಹೇಳಿದ್ದೇನು?


ಫರ್ಮಾನ್ ಖಾನ್ ಜೊತೆ ಮೊನಲಿಸಾ ಮದುವೆ: ತಂದೆ ಹೇಳಿದ್ದೇನು?

ಕುಂಭಮೇಳದ ಒಂದು ಚಿತ್ರದಿಂದ ಭಾರಿ ಜನಪ್ರಿಯತೆ ಪಡೆದ ಮೊನಲಿಸಾ ಭೋಸ್ಲೆಯ (ಮೊನಾಲಿಸಾ ಭೋಸ್ಲೆ) ಮದುವೆ ಇತ್ತೀಚೆಗಷ್ಟೇ ಕೇರಳದಲ್ಲಿ ನಡೆದಿದ್ದು, ಅವರ ಕುಂಭಮೇಳದ ಚಿತ್ರದಿಂದ ಅವರ ಮದುವೆಯೂ ವೈರಲ್ ಆಗುತ್ತಿದೆ. ಮೊನಾಲಿಸಾ ಭೋಸ್ಲೆ, ಫರ್ಮಾನ್ ಖಾನ್ ಎಂಬುವವರನ್ನು ಅವರ ಕುಟುಂಬದ ಆಯ್ಕೆಯ ವಿರುದ್ಧವಾಗಿ ಕೇರಳದಲ್ಲಿ ಮದುವೆ ಆಗಿದ್ದಾರೆ. ಇವರ ಮದುವೆಯ ಮುಂದಾಳತ್ವವನ್ನು ಕೇರಳದ ಕೆಲವು ರಾಜಕೀಯ ಪ್ರಮುಖ ವಹಿಸಿಕೊಂಡಿದ್ದು ವಿಶೇಷ. ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಅವರ ಮದುವೆಯನ್ನು ‘ಲವ್ ಜಿಹಾದ್’ ಎಂದು ಸಹ ಕರೆದಿದ್ದಾರೆ, ಆದರೆ ನೂತನ ವಧು-ವರರು ಇದನ್ನು ಅಲ್ಲಗಳೆದಿದ್ದಾರೆ. ಇದೀಗ ಮೊನಲಿಸಾ ತಂದೆ ಈ ಬಗ್ಗೆ ಮಾತನಾಡಿದ್ದಾರೆ.

ಮೊನಲಿಸಾ ತಂದೆ ಜಯಸಿಂಗ್ ಭೋಸ್ಲೆ ಹೇಳಿರುವಂತೆ, ‘ಕೆಲ ದಿನಗಳ ಹಿಂದಷ್ಟೇ ಅವರ ಮನೆಗೆ ಬಂದು ಕೇರಳದಲ್ಲಿ ನಟನೆ ತರಬೇತಿ ಹಾಗೂ ಸಿನಿಮಾ ಅಭಿನಯಕ್ಕಾಗಿ ತೆರಳುತ್ತಿದ್ದಾಗ, ಮೊನಲಿಸಾ ಅವರನ್ನು ಕಳಿಸಿಕೊಡುವಂತೆ ಕೇಳಿದರಂತೆ. ಇಂಥಹಾ ವಿಷಯಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಜಯಸಿಂಗ್ ಭೋಸ್ಲೆ ಸರಿಯೆಂದು ಒಪ್ಪಿಕೊಂಡಿದ್ದಾರೆ ಅವರೂ ಸಹ ಮೊನಲಿಸಾ ಜೊತೆಗೆ ಕೇರಳಕ್ಕೆ ತೆರಳಿದ್ದರಂತೆ. ಮನೆಗೆ ಬಂದಿದ್ದ ಗುಂಪಿನಲ್ಲಿ ಮೊನಲಿಸಾ ಮದುವೆ ಆಗಿರುವ ಫರ್ಮಾನ್ ಖಾನ್ ಈಗ ಇದ್ದಂತೆ. ಈಗ ನೋಡಿದರೆ ಇಬ್ಬರೂ ಮದುವೆ ಆಗಿದ್ದಾರೆ.

ಮದುವೆ ಆಗುವ ವಿಷಯವನ್ನು ಹೇಳಿದಾಗ ನಾನು ವಿರೋಧಿಸಿದೆ, ನಮಗೆ ಮರಳೋಣ ಎಂದು ಕೇಳಿದೆ ಆದರೆ ಅವರು ಕೇರಳ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೇಳಿದರು. 18 ವರ್ಷ ವಯಸ್ಸಿನವರಿಗೆ ಕಾರಣ ಅವರು ತಮಗೆ ಇಚ್ಛಿಸಿದವರನ್ನು ವಿವಾಹವಾಗಿದ್ದಾರೆ. ನಾವು ಏನೂ ಮಾಡಲಾಗಲಿಲ್ಲ’ ಜಯಸಿಂಗ್ ಭೋಸ್ಲೆ.

ಇದನ್ನೂ ಓದಿ:ಕುಂಭಮೇಳ ‘ಮೊನಾಲಿಸಾ’ ಮೊದಲ ಸಿನಿಮಾ ಬಂದ್, ನಿರ್ದೇಶಕನಿಂದ ಮೋಸ?

ಮೊನಲಿಸಾ ಅವರ ಚಿಕ್ಕಪ್ಪ ಮಾತನಾಡಿ, ‘ಸಿನಿಮಾ ಅವಕಾಶದ ನೆಪ ಹೇಳಿ ಕೆಲವರು ಆಕೆಯನ್ನು ಕೇರಳಕ್ಕೆ ಕರೆಸಿದ್ದರು. ನಾವು ಹೆಚ್ಚು ವಿದ್ಯಾವಂತರಲ್ಲ ಮತ್ತು ಇದೆಲ್ಲ ಹೇಗೆ ಎಂದು ನಮಗೆ ಅರ್ಥವಾಗುತ್ತಿಲ್ಲ. ಬಹುಶಃ ಯಾರಾದರೂ ಆಕೆಯ ಮೇಲೆ ಪ್ರಭಾವ ಬೀರಬಹುದು. ಆಕೆಯ ನಿರ್ಧಾರವನ್ನು ಒಪ್ಪಿಕೊಳ್ಳದೆ ಕುಟುಂಬಕ್ಕೆ ಬೇರೆ ದಾರಿಯಿಲ್ಲ’ ಜೊತೆಗೆ, ‘ನಮಗೆ ಮೊದಲೇ ಹೇಳಿದ್ದರೆ ನಾವೇ ಮದುವೆಯನ್ನು ಏರ್ಪಾಡು ಮಾಡುತ್ತಿದ್ದೇವೆ’ ಎಂದು ಸಹ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *