Video: ಮಹಿಳೆಯ ಕೈಯಲ್ಲಿನ ಗಾಯ ನೋಡಿ ಡಾಕ್ಟರ್‌ನಂತೆ ಚಿಕಿತ್ಸೆ ನೀಡಿದ ಮಂಗ

Video: ಮಹಿಳೆಯ ಕೈಯಲ್ಲಿನ ಗಾಯ ನೋಡಿ ಡಾಕ್ಟರ್‌ನಂತೆ ಚಿಕಿತ್ಸೆ ನೀಡಿದ ಮಂಗ


ನಮ್ಮ ಹಿರಿಯರು ಹಿಂದೆಲ್ಲಾ ಸಣ್ಣ ಪುಟ್ಟ ಗಾಯವಾದರೆ ಪ್ರಕೃತಿಯಲ್ಲಿ ಎಲೆಗಳನ್ನೇ ಬಳಸಬೇಕು. ಆದರೆ ಈಗ ಆಗಿಲ್ಲ, ಯಾವುದೇ ಗಾಯವಾಗಲಿ, ಅದನ್ನು ಶುಚಿಗೊಳಿಸಿ ಆಂಟಿಸೆಪ್ಟಿಕ್ ಕ್ರೀಂ ಹಚ್ಚಿ, ಬ್ಯಾಂಡೇಜ್ ಮಾಡುವುದನ್ನು ನೀವು ನೋಡುತ್ತೀರಿ. ಮಹಿಳೆಯೊಬ್ಬಳ ಕೈಯಲ್ಲಾದ ಗಾಯ ನೋಡಿದ ಮಂಗವು (ಕೋತಿ) ತನ್ನ ಬುದ್ಧಿಯನ್ನು ಉಪಯೋಗಿಸಿದೆ. ಈ ಕೋಟಿಯೂ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಪ್ರಾಣಿಯ ಬುದ್ಧಿವಂತಿಕೆಗೆ ಸಾಕ್ಷಿಯಾದ ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

smartanimalz ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಮಂಗನ ಬುದ್ಧಿವಂತಿಕೆಯು ಕಂಡುಬರುತ್ತದೆ. ಹೌದು, ಮಹಿಳೆಯೊಬ್ಬಳ ಕೈಗೆ ಸಣ್ಣ ಗಾಯವಾಗಿದ್ದು ರಕ್ತವು ಬರುತ್ತಿದೆ. ಇದನ್ನು ನೋಡಿದ ಮಂಗವು ಅಲ್ಲೇ ಇದ್ದ ಎಲೆಯನ್ನು ಕಿತ್ತು ಗಾಯದ ಮೇಲೆ ಇಟ್ಟು ಹೋಗುವುದನ್ನು ನೋಡಬಹುದು. ಈ ಮಂಗ ಮಾಡುತ್ತಿರುವ ಕೆಲಸ ನೋಡಿ ಅಚ್ಚರಿಗೊಂಡ ಮಹಿಳೆ, ಮೂಕ ಪ್ರಾಣಿಗೆ ಧನ್ಯವಾದ ತಿಳಿಸಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಪುಟ್ಟ ಹುಡುಗಿಯನ್ನು ಜೋಪಾನವಾಗಿ ಶಾಲೆಗೆ ಬಿಟ್ಟು ಬರಲು ಹೊರಟ ಮರಿಯಾನೆ

ಈ ವಿಡಿಯೋ ಇಪ್ಪತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಇದು ನಿಜವೇ ಎಂದು ಕೇಳಿದ್ದಾರೆ. ಮತ್ತರು, ಅದ್ಭುತವಾಗಿದೆ ಎಂದರೆ, ಒಬ್ಬರು, ಈ ಮನುಷ್ಯರಿಗೆ ತಿಳಿಯದ ಅದೆಷ್ಟೋ ವಿಷಯಗಳು ಪ್ರಾಣಿಗಳಿಗೆ ಎಂದು ಕಾಮೆಂಟ್ ಮಾಡಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *