ತಾಯಿ ಪ್ರೀತಿಯೇ (ತಾಯಿ ಪ್ರೀತಿ) ಹಾಗೇ, ಪರಿಶುದ್ಧವಾದದ್ದು. ಈ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳ ಸಂತೋಷದಲ್ಲೇ ತನ್ನ ಖುಷಿಯನ್ನು ಕಾಣುತ್ತಾಳೆ. ಕಾಳಜಿ ವಹಿಸುತ್ತಾ ಮಕ್ಕಳ ರಕ್ಷಣೆಗಾಗಿ ನಿಲ್ಲುತ್ತಾಳೆ. ಪ್ರಾಣಿಗಳು ಕೂಡ ಈ ವಿಚಾರದಲ್ಲಿ ಹೊರತಾಗಿಲ್ಲ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ನಾಯಿಮರಿಯೊಂದು ನೀರಿನಲ್ಲಿ ಆಟವಾಡುತ್ತಿತ್ತು ಅದರ ತಾಯಿ ಅದನ್ನು ನೀರಿನಿಂದ ಮೇಲಕ್ಕೆ ಬರುವಂತೆ ಹೇಳಿದರು. ಆದರೆ ನಾಯಿಮರಿ ಮಾತು ಕೇಳದೇ ಇದ್ದಾಗ ಈ ತಾಯಿ ಶ್ವಾನ (ನಾಯಿ) ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ಬಳಕೆದಾರರು ತಾಯಿ ಕಾಳಜಿಗೆ ಇದಕ್ಕಿಂತ ಉದಾಹರಣೆ ಬೇಕು.
ನೀರಿನಲ್ಲಿ ಆಟ ಆಡ್ತಾ ಇದ್ದ ನಾಯಿಮರಿ, ಮುಂದೇನಾಯ್ತು ನೋಡಿ
tv1indialive ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಶ್ವಾನವನ್ನು ತನ್ನ ಮರಿಯನ್ನು ಹೇಗೆ ರಕ್ಷಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ದೃಶ್ಯದಲ್ಲಿ ನೀರು ತುಂಬಿದ ಕೊಚ್ಚೆ ಗುಂಡಿಯಲ್ಲಿ ಪುಟ್ಟ ನಾಯಿಮರಿಯೊಂದು ಕುಣಿದು ಕುಪ್ಪಳಿಸುತ್ತಿರುವುದನ್ನು ನೋಡಬಹುದು. ಶ್ವಾನವು ಬೊಗಳುವ ಮೂಲಕ ತನ್ನ ಕಂದಮ್ಮ ನೀರಿನಲ್ಲಿ ಆಟ ಆಡುವುದನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಇದ್ಯಾವು ಕಿವಿಗೆ ಹಾಕದೇ ಮರಿಯೂ ತನ್ನದೇ ಲೋಕದಲ್ಲಿ ಮುಳುಗಿದಾಗ ಶ್ವಾನವೊಂದು ಒಂದು ಹೆಜ್ಜೆ ಮುಂದೆ ಹೋಗಿ ಪ್ರೀತಿಯಿಂದ ಬಾಯಿಯಿಂದ ಅದರ ಬಾಲವನ್ನು ಹಿಡಿದು ನೀರಿನಿಂದ ಮೇಲಕ್ಕೆ ಎಳೆದು ಬೇರೆ ಕಡೆಗೆ ಕರೆದುಕೊಂಡು ಹೋಗುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:ವೀಡಿಯೋ: ಜೋಪಾನವಾಗಿ ಕಂದಮ್ಮನನ್ನು ರಸ್ತೆ ಹತ್ತಿಸಿದ ತಾಯಾನೆ, ಮುದ್ದಾದ ದೃಶ್ಯ ವೈರಲ್
ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಮನುಷ್ಯನಾಗಿರಲಿ, ಪ್ರಾಣಿಯಾಗಿರಲಿ ತಾಯಿ ಪ್ರೀತಿ ಒಂದೇ ಎಂದು ಹೇಳಿದ್ದಾರೆ. ತಾಯಿ ಯಾವತ್ತಿದ್ರೂ ತಾಯಿಯೇ ಎಂದು ಹೇಳಿದ್ದಾರೆ. ಇತರ ಬಳಕೆದಾರ ಮಕ್ಕಳಿಗೆ ತೊಂದರೆಯಾಗದಂತೆ ನಿಲ್ಲುವ ಜೀವ ಈ ತಾಯಿ, ಅವಳ ಸ್ಥಾನವನ್ನು ಯಾರು ತುಂಬಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ