Headlines

Video: ಓಡ್ಬೇಡ ಕಂದಮ್ಮ, ಬಿದ್ದೋಗ್ತೀಯಾ ; ಪುಟ್ಟ ಪುಟ್ಟ ಹೆಜ್ಜೆ ಓಡುತ್ತಿರುವ ಕಂದನನ್ನು ಬೀಳದಂತೆ ತಡೆದ ತಾಯಾನೆ

Video: ಓಡ್ಬೇಡ ಕಂದಮ್ಮ, ಬಿದ್ದೋಗ್ತೀಯಾ ; ಪುಟ್ಟ ಪುಟ್ಟ ಹೆಜ್ಜೆ ಓಡುತ್ತಿರುವ ಕಂದನನ್ನು ಬೀಳದಂತೆ ತಡೆದ ತಾಯಾನೆ


ತಾಯಿ ಪ್ರೀತಿನೇ (mother love) ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಪ್ರಾಣಿಗಳು ಹೊರತಾಗಿಲ್ಲ. ಹೌದು, ತಾಯಾನೆ (ತಾಯಿ ಆನೆ) ತನ್ನ ಮರಿಯನ್ನು ಎಷ್ಟು ಕೇರ್ ಮಾಡುತ್ತಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಮರಿಯಾನೆಯೊಂದು ಹಿಂದೆ ಓಡುತ್ತಿದೆ, ತಾಯಾನೆ ಅದರ ಓಡುತ್ತಾ ಸೊಂಡಿಲಿನಿಂದ ಬೀಳದಂತೆ ತಡೆಯುವ ಹೃದಯಸ್ಪರ್ಶಿ ದೃಶ್ಯವಾಗಿದೆ. ಈ ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ಕಳೆದೇ ಹೋಗಿದ್ದಾರೆ.

rachellehaven5 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತಾಯಾನೆ ಮರಿಯಾನೆಯನ್ನು ಕಾಳಜಿ ವಹಿಸುವುದನ್ನು ನೋಡಬಹುದು. ಪುಟಾಣಿ ಆನೆಯೂ ತನ್ನ ಹೆಜ್ಜೆಯಿಟ್ಟು ಕಾಣಿಸಿಕೊಂಡಿದೆ, ಇತ್ತ ತಾಯಾನೆ ಅದರೊಂದಿಗೆ ಪುಟ್ಟ ಓಡುತ್ತಿದೆ. ಕೊನೆಗೆ, ತನ್ನ ಸೊಂಡಿಲಿನಿಂದ ಕಂದಮ್ಮನ ಕೊರಳಿಗೆ ಕಟ್ಟಿದ ಹಗ್ಗ ಹಿಡಿದು ಬೀಳದಂತೆ ತಡೆದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: ಮಾಲೀಕರೊಂದಿಗೆ ಗಜರಾಜನ ಕಣ್ಣಾಮುಚ್ಚಾಲೆ ಆಟ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಇದುವರೆಗೆ ಎಂಭತ್ತೆಟು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ತಾಯಾನೆ ಹಾಗೂ ಮರಿಯಾನೆ ಇಬ್ಬರೂ ಎಲ್ಲಿಗೆ ಓಡಿ ಹೋಗ್ತಾ ಇದ್ದೀರಾ ಎಂದು ಕೇಳಿದ್ದಾರೆ. ಇತರರು, ಅಮ್ಮನ ಬಿಟ್ಟು ಎಲ್ಲಿಗೆ ಓಡ್ತಾ ಇದ್ಯಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಮುದ್ದಾದ ವಿಡಿಯೋ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:23 pm, ಸೋಮ, 1 ಡಿಸೆಂಬರ್ 25





Source link

Leave a Reply

Your email address will not be published. Required fields are marked *