Headlines

Bengaluru: ಪ್ರೀತಿಯ ಹುಚ್ಚು: ತಾಯಿ, ಸಂಬಂಧಿಕರ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳಿಸಿದ ಮಗಳು

Bengaluru: ಪ್ರೀತಿಯ ಹುಚ್ಚು: ತಾಯಿ, ಸಂಬಂಧಿಕರ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳಿಸಿದ ಮಗಳು

Bengaluru: ಪ್ರೀತಿಯ ಹುಚ್ಚು: ತಾಯಿ, ಸಂಬಂಧಿಕರ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳಿಸಿದ ಮಗಳು

ಬೆಂಗಳೂರಿನಲ್ಲಿ 23 ವರ್ಷದ ಯುವತಿಯೊಬ್ಬಳು ತನ್ನ ತಾಯಿ ಮತ್ತು ಚಿಕ್ಕಮ್ಮನ ಖಾಸಗಿ ಫೋಟೋಗಳನ್ನು ತೆಗೆದು ಪ್ರಿಯಕರನಿಗೆ ಕಳುಹಿಸಿದ್ದಾಳೆ. ಈ ವಿಷಯ ಪೋಷಕರಿಗೆ ತಿಳಿದಾಗ, ಆಕೆ ಅವನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ.

ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಮಗಳು ಮತ್ತು ಆಕೆಯ ಪ್ರಿಯಕರನ ವಿರುದ್ಧ ತಾಯಿ ದೂರು ದಾಖಲಿಸಿದ್ದಾರೆ. ಮಗಳು ಮಾಡಿದ ಕೆಲಸಕ್ಕೆ ಕುಟುಂಬವೇ ಶಾಕ್ ಆಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

23 ವರ್ಷದ ರಿಷಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಪ್ರಿಯಕರ ಕಿರಣ್ (ಹೆಸರು ಬದಲಾಯಿಸಲಾಗಿದೆ) ಎಂಬಾತನೊಂದಿಗೆ ತನ್ನ ಕುಟುಂಬ ಸದಸ್ಯರ ಖಾಸಗಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾಳೆ. ಇದೀಗ ಕಿರಣ್‌ನನ್ನೇ ಮದುವೆಯಾಗೋದಾಗಿ ಹಠ ಹಿಡಿದಿದ್ದಾಳೆ.

ಇತ್ತೀಚೆಗಷ್ಟೆ ರಿಷಾ ತನ್ನ ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಬೇಕೆಂದು ಪೋಷಕರಿಂದ ಪಡೆದುಕೊಂಡಿದ್ದಳು. ತಿಂಗಳ ಹಿಂದೆಯಷ್ಟೇ ಅಪರಿಚಿತ ಯುವಕನೊಂದಿಗೆ ಮಾತನಾಡುವ ಸಂದರ್ಭದಲ್ಲಿ ತಾಯಿ ಕೈಯಲ್ಲಿ ತಗ್ಲಾಕೊಂಡಿದ್ದಳು. ತಾಯಿ ಮೊಬೈಲ್ ನೀಡುವಂತೆ ಕೇಳಿದಾಗ ರಿಷಾ ನೀಡಿರಲಿಲ್ಲ.

ನಂತರ ಈ ವಿಷಯ ರಿಷಾ ತಂದೆಗೂ ಗೊತ್ತಾಗಿದೆ. ತಂದೆ ಕೇಳಿದಾಗ ರಿಷಾ ಮೊಬೈಲ್ ನೀಡಿದ್ದಾಳೆ. ಈ ವೇಳೆ ಮೊಬೈಲ್ ಪರಿಶೀಲಿಸಿದಾಗ ಮಗಳ ನೀಚ ಕೆಲಸ ಬಯಲಾಗಿದೆ. ಮನೆಯಲ್ಲಿ ತಾಯಿ ಮತ್ತು ಚಿಕ್ಕಮ್ಮ ಮಲಗಿರುವ ಫೋಟೋಗಳನ್ನು ಕ್ಲಿಕ್ಕಿಸಿದ್ದಾಳೆ. ಈ ಫೋಟೋಗಳನ್ನು ಪ್ರಿಯಕರ ಕಿರಣ್‌ಗೆ ಕಳುಹಿಸಿದ್ದಾಳೆ.

ಇದನ್ನೂ ಓದಿ: Tumakuru: ಚೆಂದದ ಮಂಟಪ, ಸುತ್ತಲೂ ಮಂತ್ರಘೋಷ; ತಾಳಿ ಕಟ್ಟುವ ಹೊತ್ತಿಗೆ ವರನಿಗೆ ಬಿಗ್‌ ಶಾಕ್

ಈ ಬಗ್ಗೆ ಪ್ರಶ್ನೆ ಮಾಡಿದಾಗ ತಾನು ಕಿರಣ್‌ನನ್ನೇ ಮದುವೆಯಾಗೋದಾಗಿ ಪೋಷಕರ ಮುಂದೆ ಹಠ ಹಿಡಿದಿದ್ದಾಳೆ. ನಂತರ ತಿಳಿ ಹೇಳಿ ಮೊಬೈಲ್‌ನಲ್ಲಿದ್ದ ಕುಟುಂಬಸ್ಥರ ಖಾಸಗಿ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಇದೀಗ ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ರಾಜ್ ವರ್ಲ್ಡ್ ಶಾಪಿಂಗ್ ಸೆಂಟರ್‌ನ ಸ್ಪಾನಲ್ಲಿ ಗುಡ್ಡೆ ಗುಡ್ಡೆ ಕಾಂಡೋಮ್ ರಾಶಿ ನೋಡಿ ಪೊಲೀಸರೇ ಶಾಕ್

Source link

Leave a Reply

Your email address will not be published. Required fields are marked *