Mouna Guddemane: ಕಲರ್ಸ್ ಕನ್ನಡದಲ್ಲಿನ ‘ರಾಮಾಚಾರಿ’ ಧಾರಾವಾಹಿ ಮುಗಿಯುತ್ತಿದ್ದಂತೆ, ಇದೀಗ ನಾಯಕಿ ಚಾರು ಆಲಿಯಾಸ್ ಮೌನ ಗುಡ್ಡೆಮನೆ ಅವರಿಗೆ ಬಂಪರ್ ಆಫರ್ ಸಿಕ್ಕಿದೆ. ಹೌದು, ಇದೀಗ ಜೀ ಕನ್ನಡ ವಾಹಿನಿಯ ಹೊಸ ಧಾರಾವಾಹಿಯಲ್ಲಿ ಮೌನ ನಾಯಕಿಯಾಗಿ ನಟಿಸುತ್ತಿದ್ದಾರೆ.

ಮೌನ ಗುಡ್ಡೆಮನೆ ಎನ್ನುವ ಹೆಸರಿಗಿಂತ ಕಿರುತೆರೆಯ ಪ್ರೇಕ್ಷಕರಿಗೆ ಚಾರು ಆಗಿ ಪರಿಚಿತರಾದವರು ಇವರು. ‘ರಾಮಾಚಾರಿ’ ಧಾರಾವಾಹಿಯ ಚಾರು ಪಾತ್ರ ಎಷ್ಟೊಂದು ಸ್ಟ್ರಾಂಗ್ ಆಗಿತ್ತೆಂದರೆ, ಯಾವಾಗಲೂ ಜನ ಮೌನ ಅವರನ್ನು ಚಾರು ಅಂತಾನೆ ಗುರುತಿಸುವರು. ಆದರೆ ಇದೀಗ ಮೌನಗೆ ಬಂಪರ್ ಆಫರ್ ಸಿಕ್ಕಿದೆ.

ರಾಮಾಚಾರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಬೆಡಗಿ ಮೌನ ಗುಡ್ಡೆಮನೆ. ಈ ಧಾರಾವಾಹಿಯಲ್ಲಿ ಸೊಕ್ಕಿನ ಬೆಡಗಿ ಚಾರು ಆಗಿ, ಬಳಿಕ ಪ್ರೇಮಿಯಾಗಿ, ನಂತರ ನಾರಾಯಣಾಚಾರ್ಯರ ಮನೆಯ ಮುದ್ದಿನ ಸೊಸೆಯಾಗಿ, ಕೊನೆಗೆ ಮುದ್ದು ಮಗುವಿನ ತಾಯಿಯಾಗುವಲ್ಲಿವರೆಗೂ ಮೌನ ಒಂದೇ ಧಾರಾವಾಹಿಯಲ್ಲಿ ವಿಭಿನ್ನ ರೀತಿಯ ಪಾತ್ರ ಬದಲಾವಣೆ ಮೂಲಕ ಗಮನ ಸೆಳೆದಿದ್ದರು.

ಇದೀಗ ರಾಮಾಚಾರಿ ಧಾರಾವಾಹಿ ಇತ್ತೀಚೆಗಷ್ಟೇ ಮುಗಿದಿದ್ದು, ಒಂದು ಸೀರಿಯಲ್ ಮುಗಿಯುತ್ತಿದ್ದಂತೆ ಮತ್ತೊಂದು ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆಗೆ ಭರ್ಜರಿ ಆಫರ್ ಸಿಕ್ಕಿದೆ. ಹಾಗಂತ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ಸೊಶಿಯಲ್ ಮೀಡಿಯಾ ಮಾಹಿತಿ ಪ್ರಕಾರ ಈ ಮಾಹಿತಿ ಕನ್ಫರ್ಮ್ ಆಗಿದೆ.

ಕಲರ್ಸ್ ಕನ್ನಡದಲ್ಲಿ ಮಿಂಚಿದ ಬಳಿಕ, ಇದೀಗ ಜೀ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಮೌನ ಗುಡ್ಡೆಮನೆ. ಜೀಯಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿರುವ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಈ ಹೊಸ ಸೀರಿಯಲ್ ಗೆ ನಾಯಕನಾಗಿ ‘ಒಲವಿನ ನಿಲ್ದಾಣ’ ಧಾರಾವಾಹಿ ನಾಯಕ, ಅಕ್ಷಯ್ ನಾಯಕ್ ಆಯ್ಕೆಯಾಗಿದ್ದಾರೆ. ಇವರು ಈ ಹಿಂದೆ ‘ಅಯ್ಯನ ಮನೆ’ ವೆಬ್ ಸೀರೀಸ್ ನಲ್ಲೂ ಸಹ ನಟಿಸಿದ್ದರು. ಶೀಘ್ರದಲ್ಲೇ ಸೀರಿಯಲ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.

ಮೌನ ಗುಡ್ಡೆಮನೆ ಮತ್ತೆ ಸೀರಿಯಲ್ ನಲ್ಲಿ ನಟಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಆದಷ್ಟು ಬೇಗ ಸೀರಿಯಲ್ ಶುರುವಾಗಲಿ ಎಂದು ಹಾರೈಸಿದ್ದಾರೆ. ಆದರೆ ಸೀರಿಯಲ್ ಯಾವಾಗ? ಎಷ್ಟು ಗಂಟೆಗೆ ಶುರು ಅನ್ನೋದು ಮಾತ್ರ ಗೊತ್ತಿಲ್ಲ.

Source link
ಇದಪ್ಪಾ ಲಕ್ ಅಂದ್ರೆ…. ‘ರಾಮಾಚಾರಿ’ ಮುಗಿಯುತ್ತಿದ್ದಂತೆ ಹೊಸ ಸೀರಿಯಲ್ ನಾಯಕಿಯಾದ Mouna Guddemane