Headlines

ಅತಿಥಿಯಾಗಿ ಕರೆದು ಕಿರುಕುಳ ನೀಡಿದ ಅಂಕಲ್ಸ್: ನಟಿ ಮೌನಿ ರಾಯ್​ಗೆ ಕೆಟ್ಟ ಅನುಭವ

ಅತಿಥಿಯಾಗಿ ಕರೆದು ಕಿರುಕುಳ ನೀಡಿದ ಅಂಕಲ್ಸ್: ನಟಿ ಮೌನಿ ರಾಯ್​ಗೆ ಕೆಟ್ಟ ಅನುಭವ


ನಟಿ ಮೌನಿ ರಾಯ್ ಅವರಿಗೆ ಕೆಟ್ಟ ಅನುಭವವಾಗಿದೆ. ಮನರಂಜನಾ ಕಾರ್ಯಕ್ರಮವನ್ನು ಅತಿಥಿಯಾಗಿ ಹೋದಾಗ ಅವರಿಗೆ ಕಿರುಕುಳ ನೀಡಲಾಗುತ್ತದೆ. ಬಹಿರಂಗ ವೇದಿಕೆಯಲ್ಲೇ ಈ ರೀತಿ ಆಗಿದೆ. ಹಿರಿ ವಯಸ್ಸಿನ ಅಂಕಗಳನ್ನು ಈ ರೀತಿ ಮಾಡಿದ್ದಾರೆ ಎಂದು ಮೌನಿ ರಾಯ್ ಅವರು ಆರೋಪಿಸಿದ್ದಾರೆ. ಹರಿಯಾಣದಲ್ಲಿ ಈ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಮೌನಿ ರಾಯ್ (ಮೌನಿ ರಾಯ್) ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಈ ಘಟನೆಯಿಂದ ತಮಗೆ ಬಹಳ ನೋವಾಗಿದೆ ಎಂದು ಅವರು ಹೇಳಿದ್ದಾರೆ.

‘ಕರ್ನಾಲ್‌ನಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ತಾತನ ವಯಸ್ಸಿನ ಇಬ್ಬರು ಅಂಕಲ್‌ಗಳ ವರ್ತನೆಯಿಂದ ಅಸಹ್ಯ ಆಗಿದೆ. ನಾನು ವೇದಿಕೆಗೆ ಹೋದಾಗ ಆ ಕುಟುಂಬದ ಸದಸ್ಯರು ನನ್ನ ಜೊತೆ ಫೋಟೋ ನೋಡಲು ಬಂದು ಸೊಂಟಕ್ಕೆ ಕೈ ಹಾಕಿದರು. ನಾನು ವಿರೋಧಿಸಿದ್ದು ಅವರಿಗೆ ಇಷ್ಟ ಆಗಲಿಲ್ಲ. ಇಬ್ಬರು ಅಂಕಲ್‌ಗಳು ನನ್ನ ಎದುರು ನಿಂತು ಕೆಟ್ಟದಾಗಿ ಸನ್ನೆ ಮಾಡುತ್ತಿದ್ದರು’ ಎಂದು ಮೌನಿ ರಾಯ್ ಹೇಳಿದ್ದಾರೆ.

‘ಅವರು ಮಾಡಿದ್ದು ಸರಿ ಎನಿಸಲಿಲ್ಲ. ಆ ರೀತಿ ಮಾಡಬೇಡಿ ಎಂದು ನಾನು ನಯವಾಗಿಯೇ ಹೇಳಿದೆ. ಆಗ ಅವರು ನನ್ನ ಕಡೆಗೆ ಹೂವು ಬಿಟ್ಟರು. ಮಧ್ಯದಲ್ಲೇ ನಾನು ಹೊರಟು ಹೋಗಲು ನಿರ್ಧರಿಸಿದೆ. ಆದರೆ ಕಾರ್ಯಕ್ರಮ ಪೂರ್ಣಗೊಳಿಸಬೇಕು ಅಂತ ವಾಪಸ್ ಬಂದೆ. ಆಗಲೂ ಅವರು ನಿಲ್ಲಿಸಲಿಲ್ಲ’ ಮೌನಿ ರಾಯ್.

‘ನನ್ನಂಥವರಿಗೆ ಈ ರೀತಿ ಆಗುತ್ತದೆ ಎಂದರೆ, ಈಗ ತಾನೇ ಬಂದಿರುವ ನಟಿಯರಿಗೆ ಏನಾಗಿರಬಹುದು ಅಂತ ನೋಡಿ. ನನಗೆ ಕಿರುಕುಳ ಆಗಿದೆ. ಬಹಳ ನೋವಾಗಿದೆ. ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರ ಮಗಳ ಜೊತೆ, ಸಹೋದರಿಯರ ಜೊತೆ ಇದೆ ರೀತಿ ಯಾರಾದರೂ ನಡೆದುಕೊಂಡರೆ ಏನು ಮಾಡುತ್ತಾರೆ ಅಂತ ನನಗೆ ಆಶ್ಚರ್ಯವಾಗುತ್ತಿದೆ’ ಎಂದು ಮೌನಿ ರಾಯರ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ವೇದಿಕೆಯಲ್ಲಿ ಕೆಜಿಎಫ್ ಹಾಡಿಗೆ ಮೌನಿ ರಾಯ್ ಭರ್ಜರಿ ಡ್ಯಾನ್ಸ್

‘ಆ ವೇದಿಕೆ ಬಹಳ ಎತ್ತರದಲ್ಲಿ ಇತ್ತು. ಈ ಅಂಕಲ್‌ಗಳ ಕೆಳಗಿನಿಂದ ವಿಡಿಯೋ ಮಾಡಿ. ಅದನ್ನು ನಿಲ್ಲಿಸಿ ಅಂತ ಹೇಳಲು ಬಂದವರಿಗೆ ಬೈಯ್ದರು. ನಾನು ನನ್ನ ದೇಶ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಆದರೆ ಇದು? ಸಾಮಾನ್ಯವಾಗಿ ನೆಗೆಟಿವ್ ವಿಚಾರಗಳನ್ನು ನಾನು ಪೋಸ್ಟ್ ಮಾಡಿಲ್ಲ. ಆದರೆ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ವಧು-ವರರನ್ನು ಹರಸಲು ನಾವು ಅವರ ಅತಿಥಿಯಾಗಿ ಹೋಗುತ್ತೇನೆ. ಆದರೆ ಅವರು ನಮಗೆ ಕಿರುಕುಳ ನೀಡಿದ್ದಾರೆ’ ಎಂದು ಮೌನಿ ರಾಯ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *