ಕಪಾಳಮೋಕ್ಷ ಮಾಡಿದಕ್ಕೆ ನಾನೇ ನನ್ನ ಸ್ನೇಹಿತನನ್ನು ಕೊಂದೆ: ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಪ್ಪೊಪ್ಪಿಕೊಂಡ ಯುವಕ

ಕಪಾಳಮೋಕ್ಷ ಮಾಡಿದಕ್ಕೆ ನಾನೇ ನನ್ನ ಸ್ನೇಹಿತನನ್ನು ಕೊಂದೆ: ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಪ್ಪೊಪ್ಪಿಕೊಂಡ ಯುವಕ


ದೆಹಲಿ, ಜ.24: ಈಶಾನ್ಯ ದೆಹಲಿಯ ಮೌಜ್ಪುರದ ಕೆಫೆಯೊಂದರಲ್ಲಿ (ದೆಹಲಿ ಕೆಫೆ ಶೂಟಿಂಗ್) 24 ವರ್ಷದ ಯುವಕನನ್ನು ಗುಂಡಿಕ್ಕಿ ಕೊಂದ ಘಟನೆಯೊಂದು ನಡೆದಿದೆ. ಇದೀಗ ಈ ಕೊಲೆಯ ಬಗ್ಗೆ ಆರೋಪಿ ತಪ್ಪೊಪ್ಪಿಗೆಯ ವಿಡಿಯೋ ಹಂಚಿಕೊಂಡಿದ್ದಾನೆ. ಗುಂಡಿಕ್ಕಿ ಕೊಂದ ನಂತರ ಮನಕಲಕುವ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಗುರುವಾರ (ಜ 22) ರಾತ್ರಿ ವೈಯಕ್ತಿಕ ದ್ವೇಷಕ್ಕಾಗಿ 24 ವರ್ಷದ ಫೈಜಾನ್ ಎಂಬ ಯುವಕನನ್ನು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. @moinqureshiii_’ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವು ತಿಂಗಳ ಹಿಂದೆ ಫೈಜಾನ್ ನನಗೆ ಹೊಡೆದ ಎಂಬ ಕಾರಣಕ್ಕೆ ನಾನು ಅವನನ್ನು ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ಈ ಕೊಲೆಯಲ್ಲಿ ನನ್ನ ಕುಟುಂಬ ಅಥವಾ ಸ್ನೇಹಿತರ ಪಾತ್ರ ಇಲ್ಲ ಎಂದು ಹೇಳಿದ್ದಾನೆ.

ನಾನು ಫೈಜಾನ್‌ನ ವೈಯಕ್ತಿಕ ದ್ವೇಷದಿಂದ ಕೊಂಡೆ. ಇದರಲ್ಲಿ ನನ್ನ ಯಾವುದೇ ಪಾತ್ರವಿಲ್ಲ, ನನ್ನ ಕುಟುಂಬ ಅಥವಾ ತಂದೆ ಯಾವುದೇ ಸಂಬಂಧವಿಲ್ಲ. ನನ್ನ ಮನೆಯವರ ಮಾತು ಕೇಳಿ ಆತನನ್ನು ಕೊಂದಿಲ್ಲ. ಹಾಗೂ ಈ ಕೊಲೆಯನ್ನು ಹಣಕ್ಕಾಗಿ ಮಾಡಿಲ್ಲ. ನಾಲ್ಕು ತಿಂಗಳ ಹಿಂದೆ ನನಗೆ ಕಪಾಳಮೋಕ್ಷ ಮಾಡಿದ್ದ, ಆ ಕಾರಣಕ್ಕೆ ಕೋಪಗೊಂಡು ನಾನು ಕೊಲೆ ಮಾಡಿದ್ದಾನೆ. ಈ ವಿಷಯವು ಹಣಕ್ಕೆ ಸಂಬಂಧಿಸಿದೆ ಎಂಬ ಫೈಜಾನ್ ಅವರ ಹೇಳಿಕೆಯನ್ನು ಸುಳ್ಳು ಎಂದು ಹೇಳಿದ್ದಾನೆ.

ಫೈಜಾನ್ ಅಣ್ಣ ಹೇಳಿರುವ ಪ್ರಕಾರ, ನನ್ನ ಹಣಕ್ಕಾಗಿ ಕೊಲೆ ಮಾಡಿದ್ದಾರೆ. ಇದರಲ್ಲಿ ಕೊಲೆಗಾರನ ತಂದೆ, ಸ್ನೇಹಿತರು ಕೈವಾಡ ಇದೆ ಎಂದು ಹೇಳಿದ್ದಾರೆ. ಹಣಕ್ಕಾಗಿ ತನ್ನ ಜೊತೆಗೆ ಕೊಲೆಗಾರನ ತಂದೆ ಜಗಳ ಮಾಡಿದ್ದಾರೆ. ಈ ಜಗಳ ನಂತರವೇ ತಮ್ಮನ ಕೊಲೆಯಾಗಿದೆ. ಕೊಲೆಗಾರ ಹಾಗೂ ಆತನ ತಂದೆ ಈಗಲೇ ಬಂಧಿಸಬೇಕು ಎಂದು ಫೈಜಾನ್ ಸಹೋದರ ಸಲ್ಮಾನ್ ಹೇಳಿದ್ದಾರೆ. ಫೈಜಾನ್ ಸಾಲ ಪಡೆದಿದ್ದ, ಮರುಪಾವತಿಸಲು ಸಾಧ್ಯವಾಗದಿದ್ದಾಗ, ತಂದೆ ಮತ್ತು ಮಗ ನಮ್ಮ ಮನೆಗೆ ಬಂದು ಜಗಳವಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಗುರುವಾರ ರಾತ್ರಿ 10:28 ರ ಸುಮಾರಿಗೆ ಮೌಜ್ಪುರದ ಮಿಸ್ಟರ್ ಕಿಂಗ್ ಲೌಂಜ್ ಮತ್ತು ಕೆಫೆಯಲ್ಲಿ ವೆಲ್ಕಮ್ ಪ್ರದೇಶದ ನಿವಾಸಿ ಫೈಜಾನ್ ಅವರ ಗುಂಡಿಕ್ಕಿ ದಾಳಿ ನಡೆಸಲಾಯಿತು.

ಇದನ್ನೂ ಓದಿ: ಮದುವೆಯಾಗಿ 2 ತಿಂಗಳಿಗೆ ಕಳೆದುಕೊಂಡ ಜೀವ: ಯುವತಿ ಪ್ರಾಣ ಪಡೆದ ಸಿಟಿ ವ್ಯಾಮೋಹ!

ಗಂಭೀರವಾಗಿ ಕಂಡುಬಂದಿದ್ದ ಫೈಜಾನ್ ಅವರನ್ನು ಗುರು ತೇಗ್ಹದ್ದೂರ್ (ಜಿಬಿಟಿ) ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗಲೇ ದಾರಿಯಲ್ಲಿ ಹೋಗಿದ್ದಾರೆ. ಮೂರು ಗುಂಡುಗಳು ತನ್ನ ಸಹೋದರನಿಗೆ ತಗುಲಿದೆ. ಒಂದು ಅವನ ತಲೆಗೆ ಹಾಗೂ ಎರಡು ಎದೆಗೆ ಹೊಕ್ಕವು, ಅವನ ಕೈಯಲ್ಲಿ ಗಾಯದ ಗುರುತು ಕೂಡ ಇದೆ ಎಂದು ಸಲ್ಮಾನ್ ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *