ಮೋದಿಯ ‘ವೋಕಲ್ ಫಾರ್ ಲೋಕಲ್’ ಕರೆಗೆ ಸಿನಿಮಾ ಸೆಲೆಬ್ರಿಟಿಗಳ ಬೆಂಬಲ

ಮೋದಿಯ ‘ವೋಕಲ್ ಫಾರ್ ಲೋಕಲ್’ ಕರೆಗೆ ಸಿನಿಮಾ ಸೆಲೆಬ್ರಿಟಿಗಳ ಬೆಂಬಲ


ಸ್ವದೇಶಿ ವಸ್ತುಗಳ ಬಳಕೆಯ ಮೂಲಕ ಉದ್ಯಮ ಸ್ವಾವಲಂಬನೆ, ಸ್ಥಳೀಯ ಉದ್ಯಮಿಗಳು, ವ್ಯಾಪಾರಿಗಳು, ಉದ್ಯೋಗಿಗಳನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ‘ವೋಕಲ್ ಫಾರ್ ಲೋಕಲ್’ ಹೆಸರಿನಲ್ಲಿ ಸ್ವದೇಶಿ ವಸ್ತುಗಳ ಖರೀದಿ ಮತ್ತು ಬಳಕೆಗೆ ಕರೆ ನೀಡಿದರು. ವಿದೇಶಿ ಬ್ರ್ಯಾಂಡುಗಳ ಬದಲಿಗೆ ಸ್ಥಳೀಯ ಅಂಗಡಿಗಳ ವಸ್ತುಗಳ ಖರೀದಿ, ದೇಶದಲ್ಲಿಯೇ ನಿರ್ಮಾಣವಾದ ನಮ್ಮ ದೇಶದ ಬ್ರ್ಯಾಂಡುಗಳ ವಸ್ತುಗಳ ಖರೀದಿಗೆ ಆದ್ಯತೆ ನೀಡುವಂತೆ ಕರೆ ನೀಡಲಾಗಿದೆ. ಮೋದಿ ಅವರ ಈ ಕರೆಗೆ ಇದೀಗ ಸಿನಿಮಾ ಸೆಲೆಬ್ರಿಟಿಗಳು ಬೆಂಬಲ ನೀಡಿದ್ದಾರೆ.

ದೀಪಾವಳಿ ಸಮಯದಲ್ಲಿ ದೇಶದೆಲ್ಲೆಡೆ ವ್ಯಾಪಾರ-ವ್ಯವಹಾರಕ್ಕೆ ಭಾರಿ ಚುರುಕು ಮೂಡುತ್ತದೆ. ಈ ಸಮಯದಲ್ಲಿ ಮೋದಿ ಅವರ ಲೋಕಲ್ ಫಾರ್ ವೋಕಲ್ ಕರೆ ನೀಡಿದ್ದು, ಸ್ಥಳೀಯ ವ್ಯಾಪಾರಿಗಳಿಗೆ ವಸ್ತುಗಳನ್ನು ಖರೀದಿಸಿದ ವ್ಯಾಪಾರಿ ಅಥವಾ ಕುಶಲಕರ್ಮಿ ಜೊತೆಗೆ ಅಥವಾ ದೇಸಿ ವಸ್ತುವಿನ ಜೊತೆಗೆ ಸೆಲ್ಫಿ ಆ ಚಿತ್ರಗಳನ್ನು ನಮೋ ಆಪ್‌ನಲ್ಲಿ ಹಂಚಿಕೊಳ್ಳುವಂತೆ ಮೋದಿ ಅವರು ಮನವಿ ಮಾಡಿದರು. ಮೋದಿ ಅವರ ಈ ಇನಿಶಿಯೇಟಿವ್ ಅನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಸಿನಿಮಾ ಸೆಲೆಬ್ರಿಟಿಗಳು ಮಾಡುತ್ತಿದ್ದಾರೆ.

ತೃಪ್ತಿ ದಿಮ್ರಿ, ಮಾಧುರಿ ದೀಕ್ಷಿತ್, ರೂಪಾಲಿ ಗಂಗೂಲಿ, ಹಾಸ್ಯನಟ ಸುನಿಲ್ ಗ್ರೋವರ್, ಗಾಯಕ ಮಹದೇವನ್ ಅವರು ಮೋದಿ ಅವರನ್ನು ಕರೆಯುವಂತೆ ಸ್ಥಳೀಯ ವ್ಯಾಪಾರಿಗಳಿಂದ ತಮಗೆ ಬೇಕಾದ ವಸ್ತುಗಳನ್ನು ಶಂಕರ್ ಖರೀದಿಸಿ, ವ್ಯಾಪಾರಿಗಳಿಗೆ ಸೆಲ್ಫಿ ಹಂಚಿದ್ದಾರೆ. ಮಾಧುರಿ ದೀಕ್ಷಿತ್ ಅವರು ರಾಯಪುರದ ಸ್ಥಳೀಯ ಲೈಟುಗಳ ಅಂಗಡಿಗಳಿಂದ ದೀಪಾವಳಿಗೆ ಲೈಟುಗಳನ್ನು ಖರೀದಿಸಿದರೆ, ನಟಿ ತೃಪ್ತಿ ದಿಮ್ರಿ ಸ್ಥಳೀಯವಾಗಿ ಮಾಡಿದ ಸುಂದರವಾದ ಚಪ್ಪಲಿಗಳನ್ನು ಖರೀದಿಸಿದ್ದಾರೆ. ಸುನಿಲ್ ಗ್ರೋವರ್ ಲಖನೌನ ಶಾಪ್ ಒಂದರಿಂದ ಉಡುಗೊರೆಗಳನ್ನು ಖರೀದಿಸಿದ್ದಾರೆ. ಶಂಕರ್ ಮಹದೇವನ್ ಅವರು ಪ್ರಯಾಗ್ರಾಜ್ ನಲ್ಲಿ ಸಿಹಿ ಖರೀದಿ ಮಾಡಿದ್ದಾರೆ. ಎಲ್ಲರೂ ಆಹಾ ಕುಶಲಕರ್ಮಿಗಳು, ವ್ಯಾಪಾರಿಗಳೊಟ್ಟಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳು ಇದೀಗ ಮೋದಿ ಅವರ ಕರೆಗೆ ಬೆಂಬಲ ನೀಡಿದ್ದು, ಮೋದಿ ಅವರ ಕನಸಿನ ಸ್ವಾವಲಂಬಿ ಉದ್ಯಮ, ಸ್ವದೇಶಿ ವಸ್ತುಗಳ ಖರೀದಿ ಮೂಲಕ ಆರ್ಥಿಕ ಬಲವೃದ್ಧಿ ಕಾರ್ಯಕ್ರಮಗಳಿಗೆ ತಮ್ಮ ಯೋಗದಾನವನ್ನೂ ನೀಡಿದ್ದಾರೆ. ಈ ಹಿಂದೆಯೂ ಸಹ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ಜನಪರ ಕಾರ್ಯಗಳಿಗೆ ಬೆಂಬಲ ನೀಡಿದ್ದರು. ರಾಯಭಾರಿಗಳಾಗಿ ಪ್ರಚಾರವನ್ನೂ ಸಹ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 9:00 pm, ಶನಿವಾರ, 18 ಅಕ್ಟೋಬರ್ 25





Source link

Leave a Reply

Your email address will not be published. Required fields are marked *