Headlines

ಚಿತ್ರರಂಗದ ದಿಗ್ಗಜನ ಬಗ್ಗೆ ಸಿನಿಮಾ: ಯಾರಿದು ವಿ ಶಾಂತಾರಾಮ್?

ಚಿತ್ರರಂಗದ ದಿಗ್ಗಜನ ಬಗ್ಗೆ ಸಿನಿಮಾ: ಯಾರಿದು ವಿ ಶಾಂತಾರಾಮ್?


ಬಾಲಿವುಡ್ನಲ್ಲಿ (ಬಾಲಿವುಡ್) ಬಯೋಪಿಕ್ಗಳ ಟ್ರೆಂಡ್ ಮುಗಿಯುತ್ತಲೇ ಇಲ್ಲ. ಒಂದರ ಹಿಂದೊಂದು ಬಯೋಪಿಕ್‌ಗಳು ಬಾಲಿವುಡ್‌ನಲ್ಲಿ ಬರುತ್ತಲೇ ಇವೆ. ಹಲವು ಗಮನ ಸೆಳೆಯುತ್ತಿವೆ. ಅಧಿಕಾರಿಗಳು, ರಾಜಕಾರಣಿಗಳು, ಸೈನ್ಯಾಧಿಕಾರಿಗಳು, ಕ್ರಿಮಿನಲ್‌ಗಳು, ಸರ್ಕಾರಿ ಅಧಿಕಾರಿಗಳು, ಅಧಿಕಾರಿಗಳು, ಸಿನಿಮಾ ಕಾರ್ಮಿಕರು ಹೀಗೆ ಹಲವು ವಿಭಾಗಗಳಲ್ಲಿ ಹೆಸರು ಮಾಡಿದವರ ಬಗ್ಗೆ ಸಿನಿಮಾಗಳನ್ನು ಮಾಡಲಾಗಿದೆ. ಇದೀಗ ಮತ್ತೊಮ್ಮೆ ಚಿತ್ರರಂಗದ ದಿಗ್ಗಜರೊಬ್ಬರ ಜೀವನ ಶೈಲಿಯ ಸಿನಿಮಾ ಮಾಡಲು ಮುಂದಾಗಿದೆ.

ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿರುವ ಶಾಂತಾರಾಮ್ ಅವರ ಜೀವನವನ್ನು ಸಿನಿಮಾ ಮಾಡಲು ವೇದಿಕೆ ಸಜ್ಜುಗೊಳಿಸಲಾಗಿದೆ. ವಿ ಶಾಂತಾರಾಮ್ ಅವರ ಪಾತ್ರದಲ್ಲಿ ಯುವನಟ ಸಿದ್ಧಾಂತ್ ಚತುರ್ವೇಧಿ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ನಟಿಸಲಿದ್ದಾರೆ. ಸಿನಿಮಾಕ್ಕೆ ‘ವಿ ಶಾಂತಾರಾಮ್’ ಎಂದು ಹೆಸರಿಡಲಾಗಿದೆ. ತಮನ್ನಾ ಭಾಟಿಯಾರ ಪೋಸ್ಟರ್ ಅನ್ನು ಇಂದು (ಡಿಸೆಂಬರ್ 09) ಬಿಡುಗಡೆ ಮಾಡಲಾಗಿದೆ. ತಮನ್ನಾ ಭಾಟಿಯಾ ಅವರು ‘ವಿ ಶಾಂತಾರಾಮ್’ ಸಿನಿಮಾದಲ್ಲಿ ನಟಿ ಜಯಶ್ರೀ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ನಟಿ ತಮನ್ನಾ ಭಾಟಿಯಾ ಒಟ್ಟು ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?

ವಿ ಶಾಂತಾರಾಮ್ ಅವರು ಭಾರತೀಯ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟ ಸಿನಿಮಾ ಕರ್ಮಿ. ವಿಶ್ವ ಚಿತ್ರರಂಗದ ದಂತಕತೆ ಚಾರ್ಲಿ ಚಾಪ್ಲಿನ್ ಸಹ ಮೆಚ್ಚಿಕೊಂಡಿದ್ದ ಸಿನಿಮಾ ಕರ್ಮಿ ವಿ ಶಾಂತಾರಾಮ್. 1927 ರಲ್ಲಿ ಮೊದಲ ಸಿನಿಮಾ ನಿರ್ದೇಶಿಸಿದ ಶಾಂತಾರಾಮ್ ಅವರು, ಸಿನಿಮಾಗಳ ಮೂಲಕ ಸಾಮಾಜಿಕ ವಿಷಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದರು. ಪುರಾಣ ಕತೆಗಳನ್ನೇ ಹೆಚ್ಚಾಗಿ ಸಿನಿಮಾ ಮಾಡುವ ಸಮಯದಲ್ಲಿ ಶಾಂತಾರಾಮ್ ಅವರು ಸಾಮಾಜಿಕವಾಗಿ ಸಿನಿಮಾ ಮಾಡುತ್ತಿದ್ದರು. ಸುಮಾರು ಏಳು ಕಾಣುವ ಕಾಲ ಅವರು ಸಿನಿಮಾ ನಿರ್ದೇಶಕನಾಗಿ ಕೆಲಸ ಮಾಡಿ, ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು, ಸಿನಿಮಾಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣರಾದರು.

ವಿ ಶಾಂತಾರಾಮ್ ಅವರು ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಸಿನಿಮಾಟೊಗ್ರಾಫರ್ ಆಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅವರ 1950 ರ ಸಿನಿಮಾಗಳು ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜವಾಗಿವೆ. ಕೆಲವು ಬಾರಿ ರಾಷ್ಟ್ರಪ್ರತಿಗಳ ಸುವರ್ಣ ಪದಕ ಗಳಿಸಿವೆ. ಶಾಂತಾರಾಮ್ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪದ್ಮವಿಭೂಷಣ ಗೌರವ ನೀಡಿದೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಸಹ ಶಾಂತಾರಾಮ್ ಅವರಿಗೆ ಸಂದಿದೆ. ಇದೀಗ ಈ ದಿಗ್ಗಜನ ಕತೆ ಸಿನಿಮಾ ಆಗಿ ಮೂಡಿ ಬರಲಿದೆ.

‘ವಿ ಶಾಂತಾರಾಮ್’ ಸಿನಿಮಾವನ್ನು ಅಭಿಜಿತ್ ಶಿರೀಶ್ ದೇಶಪಾಂಡೆ ಅವರು ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆ ‘ವಿ ಶಾಂತಾರಾಮ್: ದಿ ರೆಬಲ್ ಆಫ್ ಇಂಡಿಯನ್ ಸಿನಿಮಾ’ ಎಂದು ಹೆಸರಿಸಲಾಗಿದೆ. ಸಿನಿಮಾ ಮೂಲಕ ಅವರು ಮಾಡಿದ ಸಾಮಾಜಿಕ ಕ್ರಾಂತಿಯ ಕಥೆ ಈ ಸಿನಿಮಾ ಹೇಳಲಿದೆ. ಸಿನಿಮಾದ ನಾಯಕಿಯಾಗಿ ತಮನ್ನಾ ಭಟ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 5:47 pm, ಮಂಗಳವಾರ, 9 ಡಿಸೆಂಬರ್ 25



Source link

Leave a Reply

Your email address will not be published. Required fields are marked *