ಮೃಣಾಲ್ ಠಾಕೂರ್ ಹಾಗೂ ಧನುಷ್ (ಧನುಷ್) ವಿವಾಹ ಆಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿದೆ. ಆದರೆ, ಇದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನು ಫೇಕ್ ಸುದ್ದಿ ಎನ್ನಲಾಗುತ್ತಿದೆ. ಹೀಗಿರುವಾಗಲೇ ಮೃಣಾಲ್ ಠಾಕೂರ್ ಅವರಿಗೆ ಧನುಶ್ ಹುಟ್ಟೂರಾದ ಚೆನ್ನೈ ವಿಷಯ ಚರ್ಚೆಗೆ ಬಂದಿದೆ. ಆ ಬಳಿಕ ಮೃಣಾಲ್ ಠಾಕೂರ್ ಅವರು ಅಕ್ಷರಶಃ ನಾಚಿ ನೀರಾಗಿದ್ದಾರೆ. ಅಷ್ಟಕ್ಕೂ ವೇದಿಕೆ ಮೇಲೆ ನಡೆದಿದ್ದು ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೃಣಾಲ್ ಠಾಕೂರ್ ಅವರು ‘ದೋ ದೀವಾನೆ ಸೆಹರ್ ಮೇ’ ಚಿತ್ರದಲ್ಲಿ ನಟಿಸಿದ್ದಾರೆ. ಇದು ಹಿಂದಿ ಸಿನಿಮಾ. ಈ ಚಿತ್ರದಲ್ಲಿ ಸಿದ್ದಾಂತ್ ಚತುರ್ವೇದಿ ನಟಿಸಿದ್ದಾರೆ. ಇಬ್ಬರೂ ಸಿನಿಮಾ ಪ್ರಚಾರ ಮಾಡಲು ವೇದಿಕೆ ಏರಿದ್ದರು. ಆಗ ಅಲ್ಲಿರುವವರು ‘ಚೆನ್ನೈ ವ್ಯಕ್ತಿ ನಿಮಗೆ ಪ್ರಶ್ನೆ ಕೇಳುತ್ತಿದ್ದರು’ ಎಂದು ಹೇಳಿದರು. ಸಿದ್ದಾಂತ ತಕ್ಷಣ ಮೃಣಾಲ್ ಕಾಲೆಳೆದರು.
‘ಚೆನ್ನೈ ವ್ಯಕ್ತಿಯ ಪ್ರಶ್ನೆ ನನಗೋ ಅಥವಾ ಮೃಣಾಲ್ಗೋ’ ಎಂದು ಸಿದ್ದಾಂತ ಕೇಳಿದರು. ಈ ವೇಳೆ ಮೃಣಾಲ್ ಅವರು, ‘ನಿಮಗೆ’ ಎಂದರು. ಆಗ ಮೃಣಾಲ್ ಹಾಗೂ ಸಿದ್ಧಾಂತ್ ಇಬ್ಬರೂ ನಕ್ಕರು. ವರದಿಗಾರರು, ‘ನಮಗೆ ಅರ್ಥವಾಯಿತು’ ಎಂದರು.
ಧನುಶ್ ಹುಟ್ಟೂರು ಚೆನ್ನೈ. ಅವರು ಈಗ ಅಲ್ಲಿಯೇ ವಾಸವಾಗಿದ್ದಾರೆ. ಧನುಶ್ ಹಾಗೂ ಮೃಣಾಲ್ ಮದುವೆ ಆಗುತ್ತಾರೆ ಎಂಬ ಮಾತು ಜೋರಾಗಿದೆ. ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್ ವೇಳೆ ಧನುಶ್ ಹಾಗೂ ಮೃಣಾಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದು ಕೂಡ ಚರ್ಚೆಯ ಕೇಂದ್ರ ಬಿಂದುವಾಗಿದೆ.
ಇದನ್ನೂ ಓದಿ: ಕದ್ದುಮುಚ್ಚಿ ಶಾಸ್ತ್ರೋಕ್ತವಾಗಿ ಮದುವೆ ಆದ್ರಾ ಧನುಷ್-ಮೃಣಾಲ್ ಠಾಕೂರ್?
ಧನುಷ್ ಅವರು ಈ ಮೊದಲು ಐಶ್ವರ್ಯಾ ರಜನಿಕಾಂತ್ ಅವರ ವಿವಾಹ ಆಗಿದ್ದರು. ಆ ಬಳಿಕ ಇವರು ವಿಚ್ಛೇದನ ಪಡೆದರು. ಈಗ ಮಗನ ಸಾಕೋ ಜವಾಬ್ದಾರಿ ಇಬ್ಬರ ಮೇಲೂ ಇದೆ. ಹೀಗಾಗಿ, ಎರಡನೇ ಮದುವೆ ಆದರೆ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬುದು ಧನುಶ್ ಆಲೋಚನೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಅವರ ಎರಡನೇ ಮದುವೆ ಆಗಲು ಸಿದ್ಧರಿಲ್ಲ ಎಂಬ ವರದಿಗಳೂ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.