Muddu Sose Serial Actress Prathima Thakur News: ಮುದ್ದು ಸೊಸೆ ಧಾರಾವಾಹಿಯಲ್ಲಿ ವಿದ್ಯಾ ಆಗಿ ಮಿಂಚುತ್ತಿರುವ ನಟಿ ಪ್ರತಿಮಾ ಠಾಕೂರ್ ಅವರಿಗೆ ಜನ್ಮದಿನದ ಸಂಭ್ರಮ. ಈಗ ಖುಷಿಯಲ್ಲಿ ಯುಟ್ಯೂಬರ್ ರೋಶನ್ ಅವರು ಪ್ರತಿಮಾಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿರೋದು ವಿಶೇಷವಾಗಿದೆ.

ಪ್ರತಿಮಾ ಠಾಕೂರ್ ಹಾಗೂ ರೋಶನ್ ಅವರು ಬಹಳ ಸಮಯದಿಂದ ಸ್ನೇಹಿತರು. ಪ್ರತಿಮಾಗೆ ರೋಶನ್ ಅವರು ಪುಟ್ಟಿ ಎಂದು ಕರೆಯುತ್ತಾರೆ, ರೋಶನ್‌ಗೆ ಪ್ರತಿಮಾ ಅವರು ಅಪ್ಪಿ ಎಂದು ಕರೆಯುತ್ತಾರೆ.

ಪ್ರತಿಮಾ ಠಾಕೂರ್ ಅವರು ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದು, ಫುಲ್ ಬ್ಯುಸಿಯಿದ್ದಾರೆ.

“ನಿನ್ನ ಜೊತೆ ನನಗೆ ಬೆಳೆಯಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ನಿನ್ನ ಆಯ್ಕೆ ನಾನಾಗಿದ್ದಕ್ಕೆ ನಾನೇ ಧನ್ಯ. ನಿನ್ನ ಎಲ್ಲಾ ಕನಸುಗಳು ನನಸಾಗುವವರೆಗೂ ನಾನು ನಿನ್ನ ಜೊತೆಗಿರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಪುಟ್ಟಿ” ಎಂದು ರೋಶನ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.

ರೋಶನ್ ಹಾಗೂ ಪ್ರತಿಮಾ ಅವರ ಅತ್ಮೀಯತೆ, ಇವರಿಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಅನುಮಾನ ಮೂಡಿಸುತ್ತಿರುತ್ತವೆ. ಇವರಿಬ್ಬರು ಲವ್‌ನಲ್ಲಿದ್ದಾರಾ ಎಂಬ ಪ್ರಶ್ನೆ ಮೂಡತ್ತಲೇ ಇದೆ.

ಲವ್ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರತಿಮಾ ಅವರು “ನಾವಿಬ್ಬರು ಸ್ನೇಹಿತರು, ನಮ್ಮ ಮಧ್ಯೆ ಪ್ರೀತಿ ಇಲ್ಲ” ಎಂದು ಹೇಳಿದ್ದರು.

Source link
Muddu Sose Serial ನಟಿ ಪ್ರತಿಮಾ ಠಾಕೂರ್‌ಗೆ ರೋಶನ್ ಮೆಸೇಜ್; ವೀಕ್ಷಕರಿಗೆ ಭರ್ಜರಿ ಅನುಮಾನ!