Muddu Sose: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಭದ್ರೇ ಗೌಡ್ರ ಸ್ನೇಹಿತ ಕ್ವಾಟ್ಲೆ ಪಾತ್ರದಲ್ಲಿ ನಟಿಸುತ್ತಿರುವ ನಿಶಿತ್ ರಾಜ್ ಶೆಟ್ಟಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸುಂದರವಾದ ಫೋಟೊಗಳು ಇಲ್ಲಿವೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಮುದ್ದು ಸೊಸೆ’ ಯಲ್ಲಿ ಭದ್ರೇ ಗೌಡರ ಸ್ನೇಹಿತ ಕ್ವಾಟ್ಲೆ ಪಾತ್ರದಲ್ಲಿ ನಟಿಸುತ್ತಿರುವ ನಟ ನಿಶಿತ್ ರಾಜ್ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿಶಿತ್ ರಾಜ್ ಫೆಬ್ರುವರಿ 10ರಂದು ಅಭಿತಾ ತನು ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದು. ಒಂದಿಷ್ಟು ಸುಂದರ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮದುವೆಯಾಗಿರುವುದಾಗಿ ನಟ ತಿಳಿಸಿದ್ದಾರೆ.

ನಮ್ಮ ಮನೆಯ ಮೆಟ್ಟಿಲುಗಳ ಬಳಿ ನಡೆದ ಮೊದಲ ಮಾತುಕತೆಯಿಂದಲೇ ನಮ್ಮ ಹೃದಯಕ್ಕೆ ತಿಳಿದಿತ್ತು. ಇಂದಿನಿಂದ ಮುಂದೆ, ನಾವಿಬ್ಬರು ಒಂದಾಗುತ್ತೇವೆ ಎಂದು..So blessed to be Mr. And Mrs ಎಂದು ಬರೆದುಕೊಂಡಿದ್ದಾರೆ.

ನಿಶಿತ್ ರಾಜ್ ಶೆಟ್ಟಿ ಮತ್ತು ಅಭಿತಾ ಶೆಟ್ಟಿ ಪ್ರೀತಿ ಹಲವು ವರ್ಷಗಳದ್ದು. ‘ನಿಜವಾದ ಪ್ರೀತಿ ಯಾವತ್ತಿಗೂ ಕೊನೆಯಾಗೋದಿಲ್ಲ ಎನ್ನುವ ಪೋಸ್ಟರ್ ಕೆಲವು ದಿನಗಳ ಹಿಂದೆ ಅಭಿತಾ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಈ ಜೋಡಿಗೆ ಅಭಿಮಾನಿಗಳು, ಸಿರಿಯಲ್ ನಟರು ಶುಭಾಶಯ ತಿಳಿಸಿದ್ದಾರೆ.

ನಿಶಿತ್ ರಾಜ್ ‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುತ್ತಿದ್ದರೂ ಸಹ, ಆ ಪಾತ್ರದಲ್ಲಿ ಅವರ ಕಾಮಿಡಿ, ಇಮೋಶನ್ ಸೀನ್, ಭದ್ರೆ ಗೌಡರ ಜೊತೆಗಿನ ಸ್ನೇಹಾ ಎಲ್ಲವೂ ಕೂಡ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.

ನಿಶಿತ್ ರಾಜ್ ಅವರು ಮೂಲತಃ ರಂಗಭೂಮಿ ಕಲಾವಿದರಾಗಿದ್ದು, ಯೂಟ್ಯೂಬ್ ವಿಡಿಯೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇವರು ‘ಶ್ರೀಗೌರಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನದ ಕಿರುತೆರೆಗೆ ಎಂಟ್ರಿ ಕೊಟ್ಟರು.

Source link
ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಮುದ್ದು ಸೊಸೆ’ ಧಾರಾವಾಹಿಯ ಕ್ವಾಟ್ಲೆ ನಿಶಿತ್ ರಾಜ್ ಶೆಟ್ಟಿ