‘ಮುದ್ದು ಸೊಸೆ’ ಧಾರಾವಾಹಿ: ವಿದ್ಯಾಳ ಬಾಳಲ್ಲಿ ಬಂತು ದೊಡ್ಡ ಬಿರುಗಾಳಿ

‘ಮುದ್ದು ಸೊಸೆ’ ಧಾರಾವಾಹಿ: ವಿದ್ಯಾಳ ಬಾಳಲ್ಲಿ ಬಂತು ದೊಡ್ಡ ಬಿರುಗಾಳಿ


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ’ಮುದ್ದುಸೊಸೆ’ ಧಾರಾವಾಹಿಗೆ ದೊಡ್ಡ ವೀಕ್ಷಕರ ಬಳಗವಿದೆ. ಈ ಧಾರಾವಾಹಿಯು ಪ್ರತಿದಿನ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯು ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ತ್ರಿವಿಕ್ರಮ್ ಹಾಗೂ ಪ್ರತಿಮಾ ಠಾಕೂರ್ ಅವರು ನಟಿಸುತ್ತಿದ್ದಾರೆ. ಆರಂಭದಿಂದಲೂ ತನ್ನ ವೇಗವಾದ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಈ ಧಾರಾವಾಹಿ ಮನೆ ಮಾತಾಗಿದೆ.

ಕಥಾನಾಯಕಿ ವಿದ್ಯಾಳ ಬಾಳಲ್ಲಿ ಬಿರುಗಾಳಿ ಬೀಸುವಂತೆ ಘಟನೆ ನಡೆದಿದೆ. ಆಕೆ ಅಗ್ನಿಪರೀಕ್ಷೆಗೆ ಸಿದ್ಧಳಾಗಿದ್ದಾಳೆ. ಕೇವಲ ಸಂಸಾರದ ಕಲಹವಲ್ಲದೆ, ಅಸ್ತಿತ್ವ ಮತ್ತು ಸಂಬಂಧದ ನಡುವಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗಿದೆ. ಒಂದೇ ತಿಂಗಳಿನಲ್ಲಿ ಈ ಧಾರಾವಾಹಿ ಎಂಟಕ್ಕೂ ಅಧಿಕ ತಿರುವುಗಳನ್ನು ಬಯಸಿತ್ತು. ಈ ಮೂಲಕ ವೇಗವಾಗಿ ಧಾರಾವಾಹಿಯ ಕಥೆಯಾಗುತ್ತಿದೆ. ಈಗ ಮತ್ತೊಂದ ಟ್ವಿಸ್ಟ್‌ ಜೊತೆಗೆ ಆಗಮಿಸುತ್ತಿದ್ದಾರೆ.

ಭದ್ರ ಮತ್ತು ವಿನಂತಿ ಒಂದೇ ಹಾಸಿಗೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇದು ವಿರೋಧಿಗಳ ಪ್ಲ್ಯಾನ್. ಇವರ ಸಂಸಾರ ಹಾಳು ಮಾಡಲು ನಡೆದಿರುವ ಕುತಂತ್ರ. ಈ ಹಠಾತ್ ಬೆಳವಣಿಗೆಯಿಂದ ಕುಪಿತನಾದ ಭದ್ರನ ತಂದೆ ಶಿವರಾಮೇಗೌಡ ಮಗ ಹಾಗೂ ವಿನಂತಿ ಜೊತೆ ಮದುವೆ ಮಾಡಲು ಮುಂದಾಗಿದ್ದಾನೆ.

ಈ ವೇಳೆ ವಿದ್ಯಾಳ ಮುಂದೆ ಎರಡು ಕಠಿಣ ಆಯ್ಕೆಗಳನ್ನು ಮಾವ ಇಟ್ಟಿದ್ದಾನೆ. ವಿಚ್ಛೇದನ ಕೊಡೋದು ಹಾಗೂ ಶೇ.50 ಆಸ್ತಿ ಪಡೆದು ಮನೆಯಿಂದ ಹೊರ ಹೋಗುವುದು ಅಥವಾ ಭದ್ರನ ಮೊದಲ ಪತ್ನಿಯಾಗಿ ಮನೆಯಲ್ಲೇ ಉಳಿದುಕೊಳ್ಳಬೇಕು. ಈಗ ವಿದ್ಯಾಳು, ಭದ್ರನ ಎರಡನೇ ಮದುವೆಗೆ ಸಮ್ಮತಿಸಿ, ಮನೆಯಲ್ಲೇ ಉಳಿಯೋದಾಗಿ ಹೇಳಿದ್ದಾನೆ.

ಇದನ್ನೂ ಓದಿ: ಕಲರ್ಸ್ ಕನ್ನಡ ‘ಯಜಮಾನ’ ಧಾರಾವಾಹಿಗೆ ಯಮುನಾ ಶ್ರೀನಿಧಿ ಎಂಟ್ರಿ

ಇಡೀ ಪ್ರಪಂಚವೇ ಭದ್ರನ ಮೇಲೆ ಬೆರಳು ತೋರಿಸುತ್ತಿದ್ದರೂ, ತನ್ನ ಪತಿಯ ಮೇಲೆ ವಿದ್ಯಾಳಿಗೆ ಅಚಲವಾದ ನಂಬಿಕೆಯಿದೆ. ತನ್ನ ಗಂಡನ ವಿರುದ್ಧ ದೊಡ್ಡ ಪಿತೂರಿ ನಡೆದಿದೆ ಎಂಬ ಸತ್ಯವನ್ನು ಅರಿತಿರುವ ವಿದ್ಯಾ, ಆಸ್ತಿ ಅಥವಾ ರಾಜಿ ಯಾವುದಕ್ಕೂ ಬಗ್ಗದೆ ತನ್ನ ಮೌಲ್ಯಗಳಿಗಾಗಿ ನಿಂತಿದ್ದಾಳೆ. ಇದು ಸುಳ್ಳು ಎಂದು ಆಕೆ ಮಾಡುವಳಿದ್ದಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *