ಬೆಂಗಳೂರು, ಜನವರಿ 11: ಇತ್ತೀಚೆಗೆ ನಟಿ ರಮ್ಯಾ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಅಶ್ಲೀಲಾ ಮೆಸೇಜ್ ಮಾಡುವವರ ವಿರುದ್ಧ ಸಿಡಿದೆದ್ದಿದ್ದರು. ಅಶ್ಲೀಲವಾಗಿ ಕಾಮೆಂಟ್ (ಅಶ್ಲೀಲ ಕಾಮೆಂಟ್)
ಮಾಡಿದವರ ವಿರುದ್ಧ ದೂರು ನೀಡುವ ಮೂಲಕ ಕಾನೂನು ಸಮರ ಸಾರಿದ್ದರು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮರಿಗೂ (ನಯನಾ ಮೋಟಮ್ಮ) ಅಶ್ಲೀಲ ಕಾಮೆಂಟ್ ಕಾಟ ಶುರುವಾಗಿದೆ. ವೈಯಕ್ತಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ಪೋಸ್ಟ್ಗೆ ವೇಶ್ಯೆ ಎಂದು ಕಾಮೆಂಟ್ ಮಾಡಿದ್ದಾರೆಂದು ನಯನಾ ಮೋಟಮ್ಮ ಆರೋಪಿಸಿದ್ದಾರೆ.
ಬಟ್ಟೆ ಬಗ್ಗೆ ಅಶ್ಲೀಲಾ ಕಾಮೆಂಟ್
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಇನ್ಸ್ಟಾಗ್ರಾಮ್ನಲ್ಲಿ ಎರಡು ಅಧಿಕೃತ ಖಾತೆದಾರ. ವೈಯಕ್ತಿಕ ವಿಚಾರ ಹಂಚಿಕೊಳ್ಳಲು ಮತ್ತೊಂದು ಖಾತೆ, ರಾಜಕೀಯ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮತ್ತೊಂದು ಪ್ರತ್ಯೇಕ ಖಾತೆಗಳನ್ನು ಹೊಂದಿದೆ. ಖಾಸಗಿ ಪ್ರವಾಸ, ವೈಯಕ್ತಿಕ ವಿಚಾರ ಹಂಚಿಕೊಳ್ಳುವ ಖಾತೆಯಲ್ಲಿ ಬಟ್ಟೆ ಬಗ್ಗೆ ಕಿಡಿಗೇಡಿಗಳು ಅಶ್ಲೀಲಾ ಕಾಮೆಂಟ್ ಮಾಡಿದ್ದಾರೆ.
ಅಶ್ಲೀಲ ಕಾಮೆಂಟ್ ಮಾಡಿರುವವರ ಬಗ್ಗೆ ಶಾಸಕಿ ನಯನಾ ಮೋಟಮ್ಮ ಬೇಸರ
ಇನ್ನು ರೀತಿ ಅಶ್ಲೀಲಾ ಕಾಮೆಂಟ್ ಮಾಡಿರುವವರ ಬಗ್ಗೆ ಶಾಸಕಿ ನಯನಾ ಮೋಟಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, ಮಹಿಳಾ ವಿರೋಧಿ ಮನೋಭಾವವನ್ನು ನಾನು ವಿರೋಧಿಸುತ್ತಿದ್ದೇನೆ. ಸ್ಲೀವ್ ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡಿದ ರಾಜಕಾರಣಿ ಎನ್ನುತ್ತಾರೆ. ವೇಶ್ಯೆ ಎನ್ನುವ ಮಟ್ಟಕ್ಕೂ ಇಳಿಯುತ್ತಾರೆ. ಡಿಪಿ ಇಲ್ಲದ ಪ್ರೊಫೈಲ್ ಇಟ್ಟುಕೊಂಡು ಕಾಮೆಂಟ್ ಮಾಡುತ್ತಾರೆ. ಬಹುಶಃ ಒಂದು ದಿನ ನಾನವರನ್ನು ಎದುರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಭಾಷೆಯ ಸೂಚನಾ ಬರಹ: ಸಾರ್ವಜನಿಕರ ಆಕ್ರೋಶ
ಕೊಪ್ಪಳ ನಗರದ ಬನ್ನಿಕಟ್ಟೆ ಬಡಾವಣೆಗೆ ಸಮೀಪದ ಪದಕಿ ಲೇಔಟ್ನಲ್ಲಿ, ಕೊಪ್ಪಳ ನಗರಸಭೆ ವತಿಯಿಂದ ಸೂಚನಾ ಬರಹವೊಂದು ವಿದ್ಯುತ್ ಕಂಬಕ್ಕೆ ಆಂಟಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿಧಿಸುವ ಕುರಿತು ಸ್ಥಳೀಯ ಸೂಚನಾ ಫಲಕವನ್ನು ಅಂಟಿಸುವುದು ಆಡಳಿತದ ಸಾಮಾನ್ಯ ಮತ್ತು ನಿಯಮಬದ್ಧ ಕ್ರಮವಾಗಿದ್ದರೂ, ಈ ಸ್ಥಳದಲ್ಲಿ ಅಂಟಿಸಿರುವ ಸೂಚನಾ ಬರಹದಲ್ಲಿ ಅಶ್ಲೀಲ ಮತ್ತು ಅಸಭ್ಯ ಪದಗಳನ್ನು ಬಳಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?, ಗಂಡ-ಹೆಂಡ್ತಿ ಜಗಳ ಕೇಸ್ ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್
ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ನಿರಂತರವಾಗಿ ಸಂಚರಿಸುವ ಪ್ರದೇಶದಲ್ಲಿ ಈ ರೀತಿಯ ಬಳಕೆ ಅಸಹ್ಯಕರ ಎಂದು ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ನಗರಸಭೆಯ ಜವಾಬ್ದಾರಿಯುತ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ಮತ್ತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.