Headlines

ಆಂಟಿಲಿಯಾಕ್ಕೆ ಹಿಲರಿ ಕ್ಲಿಂಟನ್, ಅದ್ಧೂರಿ ಸ್ವಾಗತ ನೀಡಿದ ಮುಖೇಶ್, ನೀತಾ ಅಂಬಾನಿ

ಆಂಟಿಲಿಯಾಕ್ಕೆ ಹಿಲರಿ ಕ್ಲಿಂಟನ್, ಅದ್ಧೂರಿ ಸ್ವಾಗತ ನೀಡಿದ ಮುಖೇಶ್, ನೀತಾ ಅಂಬಾನಿ

ಆಂಟಿಲಿಯಾಕ್ಕೆ ಹಿಲರಿ ಕ್ಲಿಂಟನ್, ಅದ್ಧೂರಿ ಸ್ವಾಗತ ನೀಡಿದ ಮುಖೇಶ್, ನೀತಾ ಅಂಬಾನಿ

Hillary Clinton : ಭಾರತ ಪ್ರವಾಸದಲ್ಲಿರುವ ಹಿಲರಿ ಕ್ಲಿಂಟನ್ ಅಂಬಾನಿ ಭವ್ಯ ಬಂಗಲೆಗೆ ಭೇಟಿ ನೀಡಿದ್ದರು. ಆಂಟಿಲಿಯಾದಲ್ಲಿ ಅಮೆರಿಕಾ ಮಾಜಿ ವಿದೇಶಾಂಗ ಕಾರ್ಯದರ್ಶಿಗೆ ಅದ್ಧೂರಿ ಸ್ವಾಗತ ಸಿಕ್ಕಿತು.

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ, ತಮ್ಮ ಮುಂಬೈನ ಮನೆ ಆಂಟಿಲಿಯಾಕ್ಕೆ ಸ್ವಾಗತಿಸಿದ್ರು. ಈ ವಿಶೇಷ ಸಂದರ್ಭಕ್ಕಾಗಿ ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಇಶಾ ಅಂಬಾನಿ ಕೂಡ ಹಾಜರಿದ್ದರು. ಹಿಲರಿ ಕ್ಲಿಂಟನ್ ಅವರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ ಅಂಬಾನಿ ಕುಟುಂಬ, ದೇಶದ ಸಂಸ್ಕೃತಿ, ಕಲೆ, ಪರಿಸರದ ಬಗ್ಗೆ ಮಾಹಿತಿ ನೀಡಿದ್ರು.

ಅತಿಥಿ ದೇವೋ ಭವದ ಅರ್ಥವನ್ನು ಹೇಳಿ ಹಿಲರಿ ಕ್ಲಿಂಟನ್ ಅವರಿಗೆ ಶಾಲು ಹೊದಿಸಿ ಶ್ರೀಕೃಷ್ಣನಿಗೆ ಕೈಮುಗಿದು ಅತಿಥಿಯನ್ನು ನೀತಾ ಅಂಬಾನಿ ಸ್ವಾಗತಿಸಿದ್ರು. ತಮ್ಮ ಬಂಗಲೆಯ ಪರಿಚಯ ಮಾಡಿದ ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ, ಅಲ್ಲಿರುವ ವಸ್ತುಗಳು ಅದ್ರ ಸಂಸ್ಕೃತಿಕ ಮಹತ್ವವನ್ನನು ಹಿಲರಿ ಕ್ಲಿಂಟನ್ ಅವರಿಗೆ ವಿವರಿಸಿದ್ರು.

ಸಣ್ಣ ಪಾರ್ಟಿ ಮೃದುವಾದ ಲೈವ್ ಸಂಗೀತದೊಂದಿಗೆ ಪ್ರಾರಂಭವಾಯಿತು. ಇದು ವಿಶ್ರಾಂತಿ ಮತ್ತು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿತು. ಅಂಬಾನಿ ಕುಟುಂಬ ಮತ್ತು ಕ್ಲಿಂಟನ್ ದಂಪತಿ ನಡುವಿನ ಮಾತುಕತೆ, ಭೇಟಿಯ ಅನೇಕ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನೀತಾ ಅಂಬಾನಿ ನೀಲಿ ಹೂವಿನ ಸೀರೆಯಲ್ಲಿ ಮಿಂಚಿದ್ರು. ಕೆಲವೇ ಕೆಲವು ಆಭರಣಗಳನ್ನು ಧರಿಸಿದ್ದ ಅವರು ಸರಳ, ಸುಂದರಿಯಾಗಿದ್ದರು. ಇನ್ನು ಮುಖೇಶ್ ಅಂಬಾನಿ ಎಂದಿನಂತೆ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ನೊಂದಿಗೆ ಕ್ಲಾಸಿಕ್ ಲುಕ್ ಹೊಂದಿದ್ದರು. ಮುಖ್ಯ ಅತಿಥಿಯಾಗಿದ್ದ ಕ್ಲಿಂಟನ್, ಬಿಳಿ ಉಡುಪಿನ ಮೇಲೆ ಬೀಜ್ ಬಣ್ಣದ ಕೋಟ್ ಧರಿಸಿ ಎಲ್ಲರನ್ನು ಆಕರ್ಷಿಸಿದ್ರು.

ಆಂಟಿಲಿಯಾದಲ್ಲಿ ಅಂಬಾನಿ ಕುಟುಂಬದ ಜೊತೆ ಸಮಯ ಕಳೆದ ಹಿಲರಿ ಕ್ಲಿಂಟನ್ ತುಂಬಾ ಖುಷಿಯಾಗಿದ್ದರು. ಸಂಗೀತ ಆಲಿಸಿದ ಅವರು, ಇಶಾ ಅಂಬಾನಿ ಜೊತೆ ಒಂದಿಷ್ಟು ಸಮಯ ಕಳೆದರು.

ಅಂಬಾನಿ ನಿವಾಸಕ್ಕೆ ಭೇಟಿ ನೀಡುವ ಮುನ್ನ ಮುಂಬೈ ಹವಾಮಾನ ವಾರ 2026 (MCW) ನಲ್ಲಿ ಕ್ಲಿಂಟನ್ ಭಾಗವಹಿಸಿದ್ದರು. ಈ ಶೃಂಗಸಭೆಯು ಫೆಬ್ರವರಿ 17 ರಿಂದ 19, 2026 ರವರೆಗೆ ನಡೆಯಿತು. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವಲ್ಲಿ ಭಾರತವನ್ನು ಪ್ರಮುಖ ಲೀಡರ್ ಮತ್ತು ನಾವೀನ್ಯಕಾರ ಎಂದು ಅವರು ಬಣ್ಣಿಸಿದರು. ಈ ಸಮಸ್ಯೆಯನ್ನು ಪರಿಹರಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದರು. ಉತ್ತಮ ಕೆಲಸ ಮಾಡಲು ಯುಎಸ್ನಲ್ಲಿ ರಾಜಕೀಯ ಬದಲಾವಣೆಯವರೆಗೆ ಕಾಯಲು ಸಾಧ್ಯವಿಲ್ಲ ಎಂದು ಹಿಲರಿ ಕ್ಲಿಂಟನ್ ಹೇಳಿದ್ರು.

Source link

Leave a Reply

Your email address will not be published. Required fields are marked *