ಹತ್ತಿರ ಹತ್ತಿರ ಬಾರೆ ಎಂದು ಅಂಬಾನಿ ಹಿಡಿದ್ರೂ, ದೂರ ಸರಿದ ನೀತಾ- ಲಕ್ಷ ಲಕ್ಷ ವ್ಯೂವ್ಸ್‌ ಕಂಡ ವಿಡಿಯೋ ವೈರಲ್‌

ಹತ್ತಿರ ಹತ್ತಿರ ಬಾರೆ ಎಂದು ಅಂಬಾನಿ ಹಿಡಿದ್ರೂ, ದೂರ ಸರಿದ ನೀತಾ- ಲಕ್ಷ ಲಕ್ಷ ವ್ಯೂವ್ಸ್‌ ಕಂಡ ವಿಡಿಯೋ ವೈರಲ್‌

ಹತ್ತಿರ ಹತ್ತಿರ ಬಾರೆ ಎಂದು ಅಂಬಾನಿ ಹಿಡಿದ್ರೂ, ದೂರ ಸರಿದ ನೀತಾ- ಲಕ್ಷ ಲಕ್ಷ ವ್ಯೂವ್ಸ್‌ ಕಂಡ ವಿಡಿಯೋ ವೈರಲ್‌

ಕಾರ್ಯಕ್ರಮವೊಂದರಲ್ಲಿ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರ ಕೈ ಹಿಡಿಯಲು ಮತ್ತು ಸೊಂಟದ ಮೇಲೆ ಕೈ ಹಾಕಲು ಪ್ರಯತ್ನಿಸಿದಾಗ, ನೀತಾ ಅವರು ತಪ್ಪಿಸಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಿನಿಮಾ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿ, ಗಣ್ಯ ವ್ಯಕ್ತಿಗಳು ಎಲ್ಲೇ ಹೋದರೂ ಅವರ ಪ್ರತಿಯೊಂದು ಚಟುವಟಿಕೆಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅವರು ಮೈಯೆಲ್ಲಾ ಕಣ್ಣಾಗಿ ಇರಬೇಕು. ಏಕೆಂದರೆ, ಸ್ವಲ್ಪ ನೆಗೆಟಿವ್‌ ಕಂಡರೂ ಅದೇ ಹೈಲೈಟ್‌ ಆಗಿ, ಅದನ್ನೇ ಬಂಡವಾಳ ಮಾಡಿಕೊಳ್ಳುವ ಪಾಪರಾಜಿಗಳಿಗೇನೂ ಕೊರತೆಯಿಲ್ಲ.

ಇದೀಗ ಅಂಥದ್ದೇ ಒಂದು ವಿಡಿಯೋ ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯದ್ದು ವೈರಲ್‌ ಆಗಿದೆ. ಫಂಕ್ಷನ್‌ ಒಂದರಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಸಹಜವಾಗಿ ಸೆಲೆಬ್ರಿಟಿ ದಂಪತಿ ಒಟ್ಟಿಗೇ ಬರುವಾಗ ಕೈ ಕೈ ಹಿಡಿದು ಬರುವುದು ಮಾಮೂಲು. ಇಲ್ಲಿಯೂ ಅದೇ ರೀತಿ ಆಗಿದೆ.

ಮುಕೇಶ್‌ ಅಂಬಾನಿ ಅವರು, ನೀತಾ ಜೊತೆ ಕಾಣಿಸಿಕೊಂಡಾಗ, ಆರಂಭದಲ್ಲಿ ಅವರ ಕೈ ಹಿಡಿದಿದ್ದಾರೆ. ಕೈ ಹಿಡಿಯುತ್ತಿದ್ದಂತೆಯೇ ನೀತಾ ತಪ್ಪಿಸಿಕೊಂಡು ಅತ್ತ ಸಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ವಲ್ಪ ಗರಂ ಆಗಿದ್ದಂಗೆ ಕಂಡಿತು.

ಆದರೆ ಕ್ಯಾಮೆರಾ ಕಣ್ಣುಗಳು ತಮ್ಮ ಮೇಲೆ ಇದೆ ಎನ್ನುವುದು ತಿಳಿಯುತ್ತಲೇ ಸ್ವಲ್ಪ ಮುಂದೆ ಬಂದಾಗ ಮುಕೇಶ್‌ ಅವರು ಮತ್ತೊಮ್ಮೆ ಕೈಹಿಡಿದುಕೊಳ್ಳಲು ಮುಂದಾದಾಗ, ಅವರು ಟಚ್‌ ಮಾಡುತ್ತಿದ್ದಂತೆಯೇ ನೀತಾ ಅತ್ತ ಹೋಗಿದ್ದಾರೆ.

ಅದೂ ಸಾಲದು ಎನ್ನುವಂತೆ ಕೊನೆಯದಾಗ ಮತ್ತೆ ಮುಂದೆ ಬಂದಾಗ ಮುಕೇಶ್‌ ಅವರು ಸೊಂಟದ ಮೇಲೆ ಕೈಹಾಕಲು ಹೋದಾಗಲೂ ನೀತಾ ತಪ್ಪಿಸಿಕೊಂಡು ಹೋಗಿದ್ದಾರೆ.

ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಕತ್‌ ವೈರಲ್‌ ಆಗಿದೆ. ಹಲವಾರು ಮಂದಿ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಸಾರ್ವಜನಿಕವಾಗಿ ಕೈ ಹಿಡಿದರೆ ಚೆನ್ನಾಗಿರಲಿಲ್ಲ ಎಂದು ನೀತಾ ಹೀಗೆ ಮಾಡಿದ್ದಾರೆ ಎಂದು ಸಮರ್ಥಿಸಿಕೊಳ್ಳುತ್ತಿದ್ದರೆ, ಇದು ಪತಿಗೆ ಮಾಡಿದ ಅವಮಾನ ಎನ್ನುತ್ತಿದ್ದಾರೆ ಮತ್ತೆ ಕೆಲವರು.

Source link

Leave a Reply

Your email address will not be published. Required fields are marked *