ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್, 2026ರ ಸೀಸನ್ಗಾಗಿ ಎರಡು ಪ್ರಮುಖ ಟ್ರೇಡ್ ಡೀಲ್ಗಳನ್ನು ಅಂತಿಮಗೊಳಿಸಿದೆ. ಈ ಡೀಲ್ಗಳ ಮೂಲಕ ಶಾರ್ದೂಲ್ ಠಾಕೂರ್ ಮತ್ತು ರುದರ್ಫೋರ್ಡ್ ಅವರನ್ನು ತಂಡಕ್ಕೆ ಮರಳಿ ಕರೆತಂದಿದೆ. ಆ ಡೀಲ್ ಯಾರೊಂದಿಗೆ ಅಂತ ಈಗ ತಿಳಿಯೋಣ ಬನ್ನಿ.

2026ರ ಸೀಸನ್ಗೆ ಮುಂಬೈ ಇಂಡಿಯನ್ಸ್ ಎರಡು ಪ್ರಮುಖ ಟ್ರೇಡ್ ಡೀಲ್ಗಳನ್ನು ಮಾಡಿಕೊಂಡಿದೆ. ಈ ಮೂಲಕ ತಮ್ಮ ಹಳೆಯ ಆಟಗಾರರಾದ ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಅವರನ್ನು ತಂಡಕ್ಕೆ ಮರಳಿ ಕರೆತಂದಿದೆ.

ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ತಂಡವನ್ನು ಬಲಪಡಿಸಲು ಇದು ಮೊದಲ ಹೆಜ್ಜೆ. ತಂಡದ ಆಡಳಿತವು ಪಕ್ಕಾ ಪ್ಲಾನ್ನೊಂದಿಗೆ ಈ ಇಬ್ಬರು ಆಟಗಾರರನ್ನು ಕ್ಯಾಶ್ ಆನ್ ಡೀಲ್ ಮೂಲಕ ಮರಳಿ ಪಡೆದುಕೊಂಡಿದೆ.

ಭಾರತದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಲಖನೌ ಸೂಪರ್ ಜೈಂಟ್ಸ್ನಿಂದ ಮುಂಬೈ ಟ್ರೇಡ್ ಮಾಡಿಕೊಂಡಿದೆ. ಈಗ ಶಾರ್ದೂಲ್ ತಮ್ಮ ಹಳೆಯ ತಂಡವಾದ ಮುಂಬೈಗೆ ಮರಳಿದ್ದಾರೆ.

ಕಳೆದ ಸೀಸನ್ನಲ್ಲಿ 10 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದ ಶಾರ್ದೂಲ್ ಆಗಮನದಿಂದ ಮುಂಬೈ ಲೋಯರ್ ಆರ್ಡರ್ ಬಲಗೊಳ್ಳಲಿದೆ. ಜೊತೆಗೆ ರುದರ್ಫೋರ್ಡ್ ಅವರನ್ನು ಗುಜರಾತ್ನಿಂದ 2.6 ಕೋಟಿಗೆ ಟ್ರೇಡ್ ಮಾಡಿಕೊಂಡಿದೆ.

ರುದರ್ಫೋರ್ಡ್ 2025ರ ಸೀಸನ್ನಲ್ಲಿ ಗುಜರಾತ್ ಪರ 13 ಪಂದ್ಯಗಳಲ್ಲಿ 291 ರನ್ ಗಳಿಸಿದ್ದರು. ಈ ಟ್ರೇಡ್ನೊಂದಿಗೆ, ಐಪಿಎಲ್ನಲ್ಲಿ ಎರಡು ಬಾರಿ ಟ್ರೇಡ್ ಆದ ವಿದೇಶಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

Source link
ಶಾರ್ದೂಲ್ ಠಾಕೂರ್ ಜತೆಗೆ ಮತ್ತೊಬ್ಬ ಬಿಗ್ ಹಿಟ್ಟರ್ ಖರೀದಿಸಿದ ಮುಂಬೈ ಇಂಡಿಯನ್ಸ್!