ಮುಂಬೈ ವಿವಿ ಆಹ್ವಾನ ರದ್ದತಿಗೆ 'ವಿಶ್ವಗುರು' ಕಾರಣ: ನಟ ನಾಸಿರುದ್ದೀನ್‌ ಶಾ ಕಿಡಿ

ಮುಂಬೈ ವಿವಿ ಆಹ್ವಾನ ರದ್ದತಿಗೆ 'ವಿಶ್ವಗುರು' ಕಾರಣ: ನಟ ನಾಸಿರುದ್ದೀನ್‌  ಶಾ ಕಿಡಿ



ಮುಂಬೈ ವಿವಿ ಆಹ್ವಾನ ರದ್ದತಿಗೆ 'ವಿಶ್ವಗುರು' ಕಾರಣ: ನಟ ನಾಸಿರುದ್ದೀನ್‌  ಶಾ ಕಿಡಿ
ಹಿರಿಯ ನಟ ನಾಸಿರುದ್ದೀನ್‌ ಶಾ ಅವರನ್ನು ಮುಂಬೈ ವಿಶ್ವವಿದ್ಯಾಲಯವು ತನ್ನ ಜಷನ್‌-ಎ-ಉರ್ದು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಕೊನೆಯ ಕ್ಷಣದಲ್ಲಿ ನಿರಾಕರಿಸಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟ, ತಾನು ‘ವಿಶ್ವಗುರು’ವನ್ನು ಟೀಕಿಸಿದ್ದೇ ಈ ನಿರ್ಧಾರಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.<img><p>ಮುಂಬೈ ವಿಶ್ವವಿದ್ಯಾಲಯವು ತನ್ನ ಜಷನ್‌-ಎ-ಉರ್ದು ಕಾರ್ಯಕ್ರಮಕ್ಕೆ ಹಿರಿಯ ನಟ ನಾಸಿರುದ್ದೀನ್‌ ಶಾ ಅವರನ್ನು ಆಹ್ವಾನಿಸಿ, ಕೊನೆಯ ಕ್ಷಣದಲ್ಲಿ ಆಹ್ವಾನ ನಿರಾಕರಿಸಿದೆ. ಇದಕ್ಕೆ ನಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ನಾನು ‘ವಿಶ್ವಗುರು’ವನ್ನು ಟೀಕಿಸುವುದೇ ಕಾರಣ ಎಂದು ಪ್ರಧಾನಿ ಮೋದಿ ಹೆಸರು ಹೇಳದೆಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p><img><p>ಈ ಕುರಿತು ಪತ್ರಿಕೆಯೊಂದರಲ್ಲಿ ಲೇಖನ ಬರೆದಿರುವ ನಟ ನಾಸೀರ್ ಅ‍ವರು, ‘ವಿವಿಯ ಉರ್ದು ವಿಭಾಗ ಫೆ.1ರಂದು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ನನಗೆ ವಿದ್ಯಾರ್ಥಿಗಳ ಜತೆಗೆ ಬೆರೆಯುವುದು ಇಷ್ಟ ಎಂದು ಹೇಳಿಕೊಂಡಿದ್ದಾರೆ.</p><img><p>ಆದರೆ, ಜ.31ರ ರಾತ್ರಿ ನನಗೆ ಕರೆ ಮಾಡಿ ಆಹ್ವಾನ ನಿರಾಕರಿಸಲಾಯಿತು. ಬಳಿಕ ನಾನೇ ಕಾರ್ಯಕ್ರಮದಿಂದ ದೂರವುಳಿದೆ ಎಂದು ಹೇಳಲಾಯಿತು’ ಎಂದು ನಟ ಹಿರಿಯ ನಟ ನಾಸಿರುದ್ದೀನ್‌ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p><img><p>ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ಶಾ, ‘ಸ್ವಯಂಘೋಷಿತ ವಿಶ್ವಗುರುವನ್ನು ನಾನು ಯಾವತ್ತೂ ಹೊಗಳಿಲ್ಲ, ಬದಲಾಗಿ ಟೀಕಿಸಿದವನು. ಕಳೆದ 10 ವರ್ಷಗಳಲ್ಲಿ ಅವರು ಮಾಡಿದ ಯಾವುದೇ ಕೆಲಸ ನನಗೆ ಮೆಚ್ಚುಗೆಯಾಗಿಲ್ಲ’ ಎಂದಿದ್ದಾರೆ. ಈ ಮೂಲಕ ತಾನು ಮೋದಿಯವರನ್ನು ಟೀಕಿಸಿದ್ದಕ್ಕಾಗಿಯೇ ವಿವಿ ಆಹ್ವಾನ ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ.</p>



Source link

Leave a Reply

Your email address will not be published. Required fields are marked *