ಬೆಂಗಳೂರಿನ ಇಂದಿರಾನಗರದ ಮುನಿಕೃಷ್ಣಪ್ಪ ಕೊಲೆ ಪ್ರಕರಣವು ಅಕ್ರಮ ಸಂಬಂಧದ ಆರೋಪದಿಂದ ಹೊಸ ತಿರುವು ಪಡೆದಿದೆ. ಆಸ್ತಿಗಾಗಿ ಮಕ್ಕಳೇ ಕೊಲೆ ಮಾಡಿರಬಹುದೆಂಬ ಆರಂಭಿಕ ಶಂಕೆಯ ನಡುವೆ, ಮೃತನ ಸೊಸೆಯೇ ಅಕ್ರಮ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದು, ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಬೆಂಗಳೂರಿನ ಇಂದಿರಾನಗರದ ಮುನಿಕೃಷ್ಣಪ್ಪ ಎಂಬ ವ್ಯಕ್ತಿಯ ಕೊ*ಲೆ ಪ್ರಕರಣ ಅಚ್ಚರಿಯ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಆಸ್ತಿಗಾಗಿಯೇ ಮಕ್ಕಳಿಂದಲೇ ಮುನಿಕೃಷ್ಣಪ್ಪನ ಕೊ*ಲೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಈ ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎಂದು ಮುನಿಕೃಷ್ಣಪ್ಪ ಸೊಸೆ ಹೇಳಿದ್ದಾರೆ.

ಮುನಿಕೃಷ್ಣಪ್ಪನ ಇಬ್ಬರು ಮಕ್ಕಳ ಪೈಕಿ ಮೋಹನ್ ಕುಮಾರ್ ಬಂಧನಕ್ಕೊಳಗಾಗಿದ್ದಾನೆ. ಮತ್ತೋರ್ವ ಮಗ ರುದ್ರೇಶ್ ಪತ್ನಿ ಸೌಮ್ಯಾ (ಹೆಸರು ಬದಲಾಯಿಸಲಾಗಿದೆ) ಜೊತೆಯಲ್ಲಿ ಅಕ್ರಮ ಸಂಬಂಧವಿತ್ತು ಎಂಬ ಆರೋಪ ಕೇಳಿ ಬಂದಿದೆ. ಇತ್ತ ರುದ್ರೇಶ್ 2021ರಲ್ಲಿಯೇ ತಂದೆ ಮತ್ತು ಪತ್ನಿ ವಿರುದ್ಧವೇ ದೂರು ದಾಖಲಿಸಿರೋದು ಬೆಳಕಿಗೆ ಬಂದಿದೆ. ಸೌಮ್ಯ ಜೊತೆ ಗಜೇಂದ್ರ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಮೋಹನ್ ಕುಮಾರ್ ಪತ್ನಿ, 2019ರವರೆಗೂ ನಾವೆಲ್ಲರೂ ಒಂದೇ ಮನೆಯಲ್ಲಿದ್ದೀವಿ. 2014ರಲ್ಲಿ ರುದ್ರೇಶ್ ಮತ್ತು ಸೌಮ್ಯ ಮದುವೆಯಾಗಿತ್ತು. ಕೆಲ ವರ್ಷಗಳಲ್ಲಿ ಮಾವನೊಂದಿಗೆ ಸೌಮ್ಯಾಗೆ ಅಕ್ರಮ ಸಂಬಂಧವಿರೋದು ಗೊತ್ತಾಯ್ತು. ಈ ಕುರಿತು ಮನೆಯಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು ಎಂದು ಹೇಳಿದ್ದಾರೆ.

ಇನ್ನು ಇದೇ ಪ್ರಕರಣ ಸಂಬಂಧ ದೂರು ಸಲ್ಲಿಕೆ ಮಾಡಿರುವ ಸೌಮ್ಯಾ, ಮುನಿಕೃಷ್ಣಪ್ಪ ಎನ್ನುವವರ ಮೇಲೆ ಹಲ್ಲೆ ಆಗಿದೆ. ನಾಯಿ ಹಿಡಿದು ವಾಕಿಂಗ್ ಮಾಡುವಾಗ ಬಂದು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ದಾಖಲಿಸಿದ್ದರು. (ಮೋಹನ್ ಕುಮಾರ್ ಪತ್ನಿ)

ಇದನ್ನೂ ಓದಿ: ಅದೊಂದು ಸುಳಿವಿನಿಂದ ಸಿಕ್ಕಿಬಿದ್ಲು! ಬಾಯ್ಫ್ರೆಂಡ್ ಸೇರಲು ಖತರ್ನಾಕ್ ಪ್ಲಾನ್ ಮಾಡಿದ್ದ ಪ್ರಿಯಾಂಕಾ ಸಿಕ್ಕಿಬಿದ್ದಿದ್ದೇ ಇಂಟ್ರೆಸ್ಟಿಂಗ್ ಸ್ಟೋರಿ

ಶನಿವಾರ ಮುನಿಕೃಷ್ಣಪ್ಪ ಮಚ್ಚು ಹಿಡಿದುಕೊಂಡು ಮಕ್ಕಳನ್ನು ಕೊಲ್ಲಲು ಓಡಾಡಿಸಿದ್ದ ಎಂಬ ಅಂಶಗಳು ದೂರಿನಲ್ಲಿ ಉಲ್ಲೇಖವಾಗಿವೆ. ಸದ್ಯ ಈ ಪ್ರಕರಣ ಗೊಂದಲದ ಗೂಡು ಆಗಿದ್ದು, ಪೊಲೀಸರ ತನಿಖೆಯಲ್ಲಿ ಎಲ್ಲ ಅಂಶಗಳು ತಿಳಿಯಬೇಕಿದೆ.

ಇದನ್ನೂ ಓದಿ: ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ?

Source link
ಆಸ್ತಿಗಾಗಿ ಅಲ್ಲ, ಮುದುಕನಿಗೆ ಸೊಸೆ ಜೊತೆಯಲ್ಲಿತ್ತಂತೆ ಅಕ್ರಮ ಸಂಬಂಧ; ಜೈಲುಪಾಲಾದ ಮಗ!