Headlines

ರಂಗೇರಿದ ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಯಾವ ಕಡೆ?

ರಂಗೇರಿದ ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಯಾವ ಕಡೆ?


ರಂಗೇರಿದ ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಯಾವ ಕಡೆ?

ಬಾಗಲಕೋಟೆ, (ಮಾರ್ಚ್ 26): ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾವು ರಂಗೇರಿದೆ. ಆದರೆ, ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಸ್ಲಿಂ ಸಮುದಾಯ ಕಂಟಕವಾಗಿದೆ. ಪ್ರಮುಖವಾಗಿ ದಾವಣಗೆರೆಯಲ್ಲಿ ಮುಸ್ಲಿಂ ಶಾಸಕ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದು, ಬಾಗಲಕೋಟೆ ಮುಸ್ಲಿಮರಿಗೂ ಕಾಂಗ್ರೆಸ್‌ಗೆ ಕರೆ ನೀಡಬೇಡಿ ಎಂದು ಕರೆ ನೀಡಿದರು. ಹೀಗಾಗಿ ಬಾಗಲಕೋಟೆಯಲ್ಲೂ ದಾನವಗೆರೆ ಮುಸ್ಲಿಂ ಸಮುದಾಯದ ಬಂಡಾಯದ ಬಿಸಿ ತಟ್ಟುತ್ತಾ ಎಂಬ ಆತಂಕ ಇತ್ತು. ಆದರೆ, ಬಾಗಲಕೋಟೆ ಮುಸ್ಲಿಮರು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಬಾಗಲಕೋಟೆಯಲ್ಲಿ ನಮ್ಮ ಸಮುದಾಯದಿಂದ ಯಾವುದೇ ಬಂಡಾಯವಿಲ್ಲ. ನಾವೆಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ ನಮ್ಮ ಸಮುದಾಯಕ್ಕೆ ಆದ ಅನ್ಯಾಯ ಹೈಕಮಾಂಡ್ ನಾಯಕರು ಸರಿ ಮಾಡ್ತೇವೆ ಎಂದು ಹೇಳಿದ್ದಾರೆ. ದಾವಣೆಗೆರೆ ವಸ್ತು ಸ್ಥಿತಿ ಬೇರೆಯೇ ಇದೆ. ಬಾಗಲಕೋಟೆಯ ವಸ್ತು ಸ್ಥಿತಿ ಬೇರೆ ಇದೆ. ಬಾಗಲಕೋಟೆಯ ಶಾಸಕರಾಗಿದ್ದ ದಿವಂಗತ ಎಚ್.ವೈ ಮೇಟಿ ಅವರು ನಮ್ಮ ಸಮುದಾಯದ ಜನರನ್ನು ಸರಿಯಾಗಿ ನೋಡಿದ್ದಾರೆ. ನಾವೆಲ್ಲರೂ ಮೇಟಿ ಕುಟುಂಬ ನಿಲ್ಲುತ್ತೇವೆ. ಬಾಗಲಕೋಟೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆಗೆ ನಿಲ್ಲುತ್ತೆ. ಈ ಬಾರಿ ನಾವು ಉಮೇಶ್ ಪರ ಕೆಲಸ ಮಾಡ್ತೇವೆ, ಇಲ್ಲಿ ನಮ್ಮ ಬಂಡಾಯ ಇಲ್ಲ. ಇದರೊಂದಿಗೆ ಕಾಂಗ್ರೆಸ್ ನಿಟ್ಟುಸಿರುಬಿಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *