Headlines

IPL 2026: ಮುಸ್ತಾಫಿಜುರ್ ರೆಹಮಾನ್ ಐಪಿಎಲ್​ನಿಂದ ನಿಷೇಧ? ಸ್ಪಷ್ಟನೆ ನೀಡಿದ ಬಿಸಿಸಿಐ

IPL 2026: ಮುಸ್ತಾಫಿಜುರ್ ರೆಹಮಾನ್ ಐಪಿಎಲ್​ನಿಂದ ನಿಷೇಧ? ಸ್ಪಷ್ಟನೆ ನೀಡಿದ ಬಿಸಿಸಿಐ


ಐಪಿಎಲ್ 2026 (ಐಪಿಎಲ್ 2026) ರ ಮಿನಿ ಹರಾಜಿನಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ (ಮುಸ್ತಾಫಿಜುರ್ ರೆಹಮಾನ್) ಅವರು ಬರೋಬ್ಬರಿ 9.2 ಕೋಟಿಗೆ ಖರೀದಿಸಿದರು. ಈ ಮೂಲಕ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಬಾಂಗ್ಲಾದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಆದರೀಗ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ ಆಡುವ ಬಗ್ಗೆ ದೇಶದ ಆಕ್ರೋಶ ಭುಗಿಲೆದ್ದಿದೆ. ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯನ್ನು ಉಲ್ಲೇಖಿಸಿ ಅನೇಕ ಅಭಿಮಾನಿಗಳು ಮತ್ತು ಕೆಲವು ರಾಜಕೀಯ ವ್ಯಕ್ತಿಗಳು ಕೆಕೆಆರ್ ತಂಡವನ್ನು ಟೀಕಿಸುತ್ತಿದ್ದಾರೆ. ಹಾಗೆಯೇ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ ನಿಂದ ಹೊರಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ನಿಷೇಧಿಸುವಂತೆ ಶಿವಸೇನೆ ಆಗ್ರಹ

ಮುಸ್ತಾನ ರೆಹಮಾನ್ ಅವರನ್ನು ಖರೀದಿಸಿ ತಂಡದಲ್ಲಿ ಅವಕಾಶ ನೀಡಲಾಗಿದೆ ಕೆಕೆಆರ್ ತಂಡದ ವಿರುದ್ಧ ಶಿವಸೇನೆ ವಕ್ತ ಆನಂದ್ ದುಬೆ ಹರಿಹಾಯ್ದಿದ್ದು, ‘ಸನಾತನ ಮತ್ತು ಶಿವ ಸೈನಿಕನಾಗಿ, ತಾವು ಮತ್ತು ಈ ಕ್ರಮವನ್ನು ವಿರೋಧಿಸುತ್ತೇವೆ. ರೆಹಮಾನ್ ಅವರನ್ನು ಐಪಿಎಲ್ ತಂಡದಿಂದ ತೆಗೆದುಹಾಕಿದರೆ ಶಾರುಖ್ ಖಾನ್ ಅವರ ಗೌರವ ಹಾಗೆಯೇ ಉಳಿಯುತ್ತದೆ. ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ಯಾವುದೇ ಕ್ರಮವನ್ನು ಶಿವಸೇನೆ ಪಕ್ಷವು ಅನುಮತಿಸುವುದಿಲ್ಲ. ತಮ್ಮ ಪಕ್ಷವು ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಶತ್ರುಗಳೆಂದು ಪರಿಗಣಿಸುತ್ತದೆ. ಹೀಗಾಗಿ ಈ ದೇಶದ ಆಟಗಾರರನ್ನು ಸಂಪೂರ್ಣವಾಗಿ ಬಹಿಷ್ಕರಿಸುವವರೆಗೂ ನಾವು ವಿರಮಿಸುವುದಿಲ್ಲ. ದೇಶವಿರೋಧಿಗಳು ಭಾರತಕ್ಕೆ ಪ್ರವೇಶಿಸುವುದನ್ನು ಶಿವಸೇನೆ ವಿರೋಧಿಸುತ್ತದೆ. ಈ ವಿಷಯದಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸುತ್ತದೆ ಎಂದು ದುಬೆ ಹೇಳಿದರು.

ಮುಸ್ತಾಫಿಜುರ್ ಐಪಿಎಲ್ ಆಡ್ತಾರಾ?

ಆಗಸ್ಟ್ 2024 ರಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಹಿಂಸಾತ್ಮಕ ಘಟನೆಗಳು ಹೆಚ್ಚಾಗಿವೆ. ಭಾರತ ಸರ್ಕಾರದ ಸೂಚನೆಗಳನ್ನು ಅನುಸರಿಸಿ, ಬಿಸಿ ಈ ವರ್ಷ ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಲಾಗಿದೆ. ಹೀಗಿರುವಾಗ ಮುಸ್ತಾಫಿಜುರ್ ಅವರನ್ನು ಕೆಕೆಆರ್ ಖರೀದಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಐಪಿಎಲ್ ಹರಾಜ ಎಲ್ಲಾ ಬಾಂಗ್ಲಾದೇಶಿ ಆಟಗಾರರನ್ನು ಕಡೆಗಣಿಸಲಾಯಿತು, ಆದರೆ ಈ ಬಾರಿ ಕೆಕೆಆರ್ ಬಾಂಗ್ಲಾ ಆಟಗಾರನನ್ನು ಖರೀದಿಸಿದೆ.

IPL 2026: ಬಾಂಗ್ಲಾದಲ್ಲಿ ಹಿಂದೂಗಳ ಹಿಂಸಾಚಾರ; ಕೆಕೆಆರ್ ತಂಡಕ್ಕೆ ಭಾರತೀಯರಿಂದ ಹಿಡಿಶಾಪ

ಸ್ಪಷ್ಟನೆ ನೀಡಿದ ಬಿಸಿ

ಇನ್‌ಸೈಡ್‌ಸ್ಪೋರ್ಟ್‌ನ ವರದಿಯ ಪ್ರಕಾರ, ಬಿಸಿಸಿನ ಹಿರಿಯ ಅಧಿಕಾರಿಯೊಬ್ಬರು, ‘ಇದು ಸೂಕ್ಷ್ಮ ಪರಿಸ್ಥಿತಿಯನ್ನು ನಾವು ಗುರುತಿಸಬೇಕಾಗಿದೆ. ವಿಕಸನಗೊಳ್ಳುತ್ತಿರುವ ರಾಜತಾಂತ್ರಿಕ ಪರಿಸ್ಥಿತಿಯ ಕುರಿತು ನಾವು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಬಾಂಗ್ಲಾದೇಶಿ ಆಟಗಾರರನ್ನು ತಡೆಯುವಂತೆ ಒತ್ತಾಯಿಸಲು ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಮುಸ್ತಾಫಿಜುರ್ ಐಪಿಎಲ್‌ನಲ್ಲಿ ಆಡುತ್ತಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:47 pm, ಶುಕ್ರ, 2 ಜನವರಿ 26



Source link

Leave a Reply

Your email address will not be published. Required fields are marked *