ಬೆಂಗಳೂರಿನಂತೆ ಮೈಸೂರು ಕೂಡ ಬದಲಾಗುತ್ತಿದೆ. ಮೈಸೂರು (ಮೈಸೂರು ಸಾಂಸ್ಕೃತಿಕ ಬದಲಾವಣೆ) ತನ್ನ ಮೂಲ ವಿಚಾರಗಳನ್ನು ಕಳೆದುಕೊಳ್ಳುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈಗ “ಮೈಸೂರು ಹೊರವಲಯ” ಆಗುತ್ತಿದೆ ಎಂಬ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಹೆಚ್ಚಿನ ಹೊರ ರಾಜ್ಯ, ದೇಶದ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಮೂಲ ನಿವಾಸಿಗಳು ಮೈಸೂರಿನಲ್ಲಿ ಇಲ್ಲ. ಹೆಚ್ಚಾಗಿ ಕನ್ನಡ ಮಾತನಾಡುವವರ ಸಂಖ್ಯೆ ಮೈಸೂರಿನಲ್ಲಿ ಕಡಿಮೆಯಾಗಿದೆ. ಮೈಸೂರು ಬೆಂಗಳೂರಿನಂತೆ ಭಾಷೆ, ವಿಚಾರಧಾರೆಗಳಿಂದ ಬದಲಾಗುತ್ತಿದೆ ಎಂದು ಹೇಳಲಾಗಿದೆ.
ಮೈಸೂರು ಬೆಂಗಳೂರಿನಂತೆ ಮಹಾನಗರವಾಗಿ ರೂಪಾಂತರಗೊಳ್ಳುತ್ತಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ವೊಂದು ವೈರಲ್ ಆಗಿದೆ. ಇದೀಗ ಈ ಪೋಸ್ಟ್ ಮೈಸೂರು ಹೊರವಲಯ ಆಗುತ್ತಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಮೈಸೂರು ತನ್ನ ಮೂಲ ವಿಚಾರಗಳನ್ನು, ಭಾಷೆಗಳನ್ನು, ಸಂಸ್ಕೃತಿಗಳನ್ನು ಬಹಿಷ್ಕರಿಸಿದಂತೆ ಕಾಣುತ್ತಿದೆ. ಬೆಂಗಳೂರಿನ ಸ್ಥಿತಿ ಮೈಸೂರಿಗೂ ಬರುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬೇರೆ ಬೇರೆ ಭಾಷೆಯ ಜನ, ಅವರ ಸಂಸ್ಕೃತಿಗಳ ಆಚರಣೆ, ಹೀಗೆ ಅನೇಕ ವಿಚಾರಗಳಿಂದ ಬೆಂಗಳೂರು ಬದಲಾಗಿದೆ. ಅದೇ ರೀತಿ ಮೈಸೂರಿನಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಆದರೆ ಬೆಂಗಳೂರು ಬದಲಾವಣೆಯಾಗಲು ಉದ್ಯೋಗ, ವ್ಯಾಪಕ ತಂತ್ರಜ್ಞಾನ ಕಾರಣ, ಇದರೊಂದಿಗೆ ದೊಡ್ಡ ದೊಡ್ಡ ಐಟಿ ಕಂಪನಿಗಳು ಬೆಂಗಳೂರಿನಲ್ಲಿದೆ. ಇಲ್ಲ ಬೇರೆ ಬೇರೆ ದೇಶದ ಹಾಗೂ ರಾಜ್ಯದ ಜನರು ಇಲ್ಲಿಗೆ ಬಂದಿದ್ದಾರೆ. ಆದರೆ ಮೈಸೂರು ಯಾಕೆ ಈ ರೀತಿ ಬದಲಾಗುತ್ತಿದೆ. ಅಲ್ಲಿ ಯಾವುದೇ ದೊಡ್ಡ ದೊಡ್ಡ ಕಂಪನಿಗಳು ಇಲ್ಲ. ಹಾಗಾದರೆ ಮೈಸೂರು ಬದಲಾವಣೆ ಕಾಣಲು ವಲಸೆ ಕಾರಣವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆ, ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ವೈರಲ್
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಮೈಸೂರಿನ “ಹೊರತನ”ದ ಗತಿ ನಿಜಕ್ಕೂ ಆಶ್ಚರ್ಯಕರವಾಗಿದೆ!😵
ನಗರವು ಸರಿಯಾದ ಕನ್ನಡ ಜನಸಂಖ್ಯೆ ಆಧಾರಿತ ನಿವೃತ್ತಿ ನಗರದಿಂದ ಸ್ಥಳಾಂತರಗೊಂಡಿದೆ- ಈಗಾಗಲೇ ಬೆಂಗಳೂರಿನಂತಹ ಮಹಾನಗರಕ್ಕೆ!
ಬೆಂಗಳೂರು ಉದ್ಯೋಗಗಳನ್ನು ಒದಗಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಮೈಸೂರು ಇಷ್ಟು ವಲಸೆಗೆ ಏನು ಒದಗಿಸುತ್ತಿದೆ?🤔
– NEO (@normaly_abnorml) ನವೆಂಬರ್ 17, 2025
ಮೈಸೂರು ಬೆಂಗಳೂರಿನಂತೆ ಬದಲಾವಣೆಯಾಗಲು ನೆಟ್ಟಿಗರು ಕಾರಣ ಎಂದು ಹೇಳಿದ್ದಾರೆ. ಇನ್ನು ಕೆಲವು, ದೊಡ್ಡ ಪ್ರಮಾಣದ ರಿಯಲ್ ಎಸ್ಟೇಟ್ ಹೂಡಿಕೆ ಹಾಗೂ ಅದರಲ್ಲಿ ಕೆಲಸ ಮಾಡಲು ಉತ್ತರ ಭಾರತೀಯರನ್ನು ಆಕರ್ಷಿಸುತ್ತಿದೆ ಎಂದು ಹೇಳಿದ್ದಾರೆ. ಒಬ್ಬರು ಹೀಗೆ ಕಮೆಂಟ್ ಮಾಡಿದ್ದಾರೆ, ನಗರದ ಸಂಪರ್ಕದತ್ತ ಗಮನಸೆಳೆಯುತ್ತಿದೆ. ಮೈಸೂರಿನಲ್ಲಿ ಸಂಪರ್ಕ ಚೆನ್ನಾಗಿದೆ. ಈ ಕಾರಣಕ್ಕೆ ಬೇರೆ ಬೇರೆ ರಾಜ್ಯಗಳನ್ನು ಸಂಪರ್ಕಿಸಲು ಮೈಸೂರು ಸುಲಭ ದಾರಿ ಎಂಬುದು ಅವರಿಗೆ ತಿಳಿಸಲಾಗಿದೆ. ಬೆಂಗಳೂರಿನ ಅಶುದ್ಧ ಗಾಳಿ, ಕೆಲಸದ ಒತ್ತಡ, ಮೂಲಸೌಕರ್ಯಗಳ ಕೊರತೆಯಿಂದ ಅದೆಷ್ಟೋ ಉದ್ಯಮಿಗಳು ಮೈಸೂರು ಬೆಸ್ಟ್ ಎಂದು ಹೇಳುತ್ತಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 5:26 pm, ಮಂಗಳವಾರ, 18 ನವೆಂಬರ್ 25