ಮೈಸೂರು, ಫೆ.12: ಮೈಸೂರಿನಲ್ಲಿ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಮಗುವಿನ ಬ್ಯಾಗಿನೊಳಗೆ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ. ಮೈಸೂರಿನ ಇಲವಾಲದ ಮಥುರಾನಗರದಲ್ಲಿ ಈ ಘಟನೆ ನಡೆದಿದೆ. ಇನ್ನು ಬ್ಯಾಗಿನೊಳಗೆ ಹಾವು ಕಂಡು ಪುಟ್ಟ ಭಯಭೀತಗೊಂಡಿದ್ದಾಳೆ. ಆಡವಾಡುವ ವೇಳೆ ಮೈದಾನದಲ್ಲಿ ಬ್ಯಾಗ್ ಇಟ್ಟಿದ್ದಳು, ಈ ವೇಳೆ ಹಾವು ಬ್ಯಾಗಿನ ಒಳಗೆ ಬಂದಿದೆ. ನಂತರ ಸ್ನೇಕ್ ಶಾಮ್ ಅವರನ್ನು ಕರೆಸಿ, ಹಾವಿನ ರಕ್ಷಣೆ ಮಾಡಿದ್ದಾರೆ. ಇನ್ನು ಬಯಲು ಪ್ರದೇಶದಲ್ಲಿ ಬ್ಯಾಗ್ ಇಡುವ ಮುನ್ನ ಎಚ್ಚರ ವಹಿಸುವಂತೆ ಮನವಿ ಮಾಡಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ