Mysuru Mylari Hotel: ಸುಮಾರು 87ವರ್ಷಗಳ ಇತಿಹಾಸವಿರುವ ಮೈಸೂರು ಮೈಲಾರಿ ಹೋಟೆಲ್ ಇತ್ತೀಚೆಗೆ ಬೆಂಗಳೂರು ಇಂದಿರಾನಗರದಲ್ಲಿಯೂ ತನ್ನ ಶಾಖೆಯನ್ನು ಆರಂಭಿಸಿದೆ. ಈ ಹೋಟೆಲ್ಗೆ ‘ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ – 1938’(Old Original Vinayaka Mylari) ಎಂದು ನಾಮಕರಣ ಮಾಡಲಾಗಿದೆ.

ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಅಥವಾ ಫುಡ್ ಲವರ್ಸ್ ಖಂಡಿತವಾಗಿ ವಿನಾಯಕ ಮೈಲಾರಿ ದೋಸೆ ಸವಿದಿರುತ್ತೀರಿ. ಮೈಲಾರಿ ದೋಸೆ ಎಂದರೆ "ಕೇವಲ ಒಂದು ತಿನಿಸಲ್ಲ. ಅದು ಮೈಸೂರಿನ ಪಾಕಶಾಲೆಯ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕ" ಅಂತಾರೆ ಬಲ್ಲವರು.

ಸುಮಾರು 87ವರ್ಷಗಳ ಇತಿಹಾಸವಿರುವ ಮೈಸೂರು ಮೈಲಾರಿ ಹೋಟೆಲ್ ಇತ್ತೀಚೆಗೆ ಬೆಂಗಳೂರು ಇಂದಿರಾನಗರದಲ್ಲಿಯೂ ತನ್ನ ಶಾಖೆಯನ್ನು ಆರಂಭಿಸಿದೆ. ಬೆಂಗಳೂರಿನ ಶಾಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದು(ಜ. 23), ದೋಸೆಯನ್ನು ಸವಿದಿದ್ದಾರೆ. ಇದು ಅವರ ಅತ್ಯಂತ ಫೇವರಿಟ್ ಹೋಟೆಲ್.

"ಇನ್ಮುಂದೆ ಬೆಂಗಳೂರಿನಲ್ಲೇ ಮೈಸೂರಿನ ಮೈಲಾರಿ ದೋಸೆಯ ರುಚಿ ಸವಿಯಬಹುದಾಗಿದ್ದು, ಬೆಂಗಳೂರು ನಿವಾಸಿಗಳು ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ತಂದಿರುವ ಪ್ರಸಿದ್ಧ ಮೈಲಾರಿ ದೋಸೆಗಾಗಿ ಮೈಸೂರಿಗೆ ಇನ್ನು ಮುಂದೆ ಹೋಗಬೇಕಾಗಿಲ್ಲ" ಎಂದು ಸಿದ್ದರಾಮಯ್ಯ ಅವರು ಹೋಟೆಲ್ ಉದ್ಘಾಟಿಸಿದ ಸಂದರ್ಭದಲ್ಲಿ ಹೇಳಿದರು.

ಈ ಹೋಟೆಲ್ಗೆ ‘ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ – 1938’(Old Original Vinayaka Mylari) ಎಂದು ನಾಮಕರಣ ಮಾಡಲಾಗಿದೆ. ಅಂದಹಾಗೆ ಈ ಹೋಟೆಲ್ನ್ನು ಪ್ರಾರಂಭಿಸಿದ್ದು ಮೈಲಾರಸ್ವಾಮಿ ಮತ್ತು ಅವರ ಪತ್ನಿ ಸುಂದರಮ್ಮ (ಗೌರಮ್ಮ).

ಅಂದು ಡಾ.ರಾಜಕುಮಾರ್ ಅವರು ಮೈಸೂರಿಗೆ ಶೂಟಿಂಗ್ಗೆ ಬಂದಾಗಲೆಲ್ಲಾ ಸೆಟ್ನ ಹುಡುಗರೊಂದಿಗೆ ವಿನಾಯಕ ಮೈಲಾರಿಗೆ ಬಂದು ದೋಸೆ ಸವಿಯುತ್ತಿದ್ದರೆಂದು ಸ್ಥಳೀಯರು ಈಗಲೂ ಹೇಳುತ್ತಾರೆ. ಪ್ರವಾಸಕ್ಕೆ ಬರುವ ವಿದೇಶಿಗರೂ ಈ ಒರಿಜಿನಲ್ ಮೈಲಾರಿ ದೋಸೆ ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ.

ಈಗ ಇಂದಿರಾ ನಗರದಲ್ಲಿ ಶಾಖೆಯನ್ನು ಹೊಂದಿರುವ ವಿನಾಯಕ ಮೈಲಾರಿ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಇಲ್ಲಿ ದೋಸೆ ಸವಿದ ಮುಖ್ಯಮಂತ್ರಿಗಳೂ ‘ನಮ್ಮ ಮೈಸೂರಿನ ಮೈಲಾರಿ ಹೋಟೆಲ್ನಲ್ಲಿ ತಿಂಡಿ ತಿಂದರೆ ಒಂಥರಾ ಸಮಾಧಾನ, ತೃಪ್ತಿ. ಇಂದು ಕೂಡ ಹಾಗೆಯೇ ಆಯಿತು’ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

ದೋಸೆ ಪ್ರಿಯರೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಈ ಹೋಟೆಲ್ನಲ್ಲಿ ದೋಸೆ ತಿಂದ ಅನುಭವವನ್ನು ಹಂಚಿಕೊಳ್ಳುತ್ತಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿರುವುದನ್ನು ಗಮನಿಸಬಹುದು.

Source link