Headlines

ಮೈಸೂರು ರೈಲ್ವೆ ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ

ಮೈಸೂರು ರೈಲ್ವೆ ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ


ಮೈಸೂರು ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ

ಮೈಸೂರು, ಏಪ್ರಿಲ್ 03: ನೈರುತ್ಯ ಮೈಸೂರು ವಿಭಾಗವು (ಮೈಸೂರು ರೈಲ್ವೆ ವಿಭಾಗ) 2025-26ನೇ ಸಾಲಿನ ಹಣಕಾಸು ವರ್ಷದ ಅತ್ಯುತ್ತಮ ಸಾಧನೆ ಮಾಡಿದೆ. 449.13 ಕೋಟಿ ರೂ ಪ್ರಯಾಣಿಕ ಆದಾಯ ಗಳಿಸುವ ಮೂಲಕ ಈ ಹಿಂದಿನ ದಾಖಲೆಯನ್ನು ಮೀರಿದೆ. ಜೊತೆಗೆ ಸರಕ ಸಾಗಾಣೆಯಲ್ಲೂ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇತಿಹಾಸದಲ್ಲೇ ಹೆಚ್ಚು ಸರಕು ಸಾಗಣೆ ಮಾಡಿದ ಎರಡನೇ ಅತ್ಯುನ್ನತ ಸಾಧನೆಯಾಗಿದೆ ಎಂದು ವಿಭಾಗೀಯ ಮುಖ್ಯಸ್ಥ ಮುದಿತ್ ಮಿತ್ತಲ್ ಮಾಹಿತಿ ನೀಡಿದ್ದಾರೆ.

ಮುದಿತ್ ಮಿತ್ತಲ್ ಹೇಳಿದ್ದಿಷ್ಟು

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುದಿತ್ ಮಿತ್ತಲ್, ಟಿಕೆಟ್ ಪರಿಶೀಲನೆ ಮೂಲಕ 9.75 ಕೋಟಿ ರೂ ಆದಾಯ ಗಳಿಸಲಾಗಿದೆ. 11.81 ಕೋಟಿ ರೂ ಪಾರ್ಸೆಲ್ ಆದಾಯ, ಲೀಸ್ ಮೂಲಕ 5.85 ಕೋಟಿ ರೂ.

ಇದನ್ನೂ ಓದಿ: ಈ ವಂದೇ ಭಾರತ್ ರೈಲಿನಲ್ಲಿ ಪುರುಷ ಸಿಬ್ಬಂದಿಯೇ ಇರಲಿಲ್ಲ, ಎಲ್ಲರೂ ಮಹಿಳೆಯರೇ!

ಇನ್ನು ಸರಕು ಚಾಲನೆ ವಿಭಾಗದಿಂದ 900.19 ಕೋಟಿ ಆದಾಯ ಗಳಿಸಿದೆ, 10.586 ಮಿಲಿಯನ್ ಟನ್ ಸರಕು ಸಾಗಣೆಯಾಗಿದೆ. ಆ ಮೂಲಕ ಇತಿಹಾಸದಲ್ಲೇ ಅತೀ ಹೆಚ್ಚು ಸಾಗಾಟ ಮಾಡುವ ಮೂಲಕ ರೆಲ್ವೆ ವಿಭಾಗದ ಎರಡನೇ ಸಾಧನೆಯಾಗಿದೆ.

ಡಿಜಿಟಲ್ ಟಿಕೆಟ್ ವ್ಯವಸ್ಥೆ

ಕುವೆಂಪುನಗರದಲ್ಲಿ ಹೊಸ ಪಿಆರ್‌ಎಸ್ ಸೌಲಭ್ಯ, ಡಿಜಿಟಲ್ ಟಿಕೆಟ್ ವ್ಯವಸ್ಥೆ ಆರಂಭಿಸಲಾಗಿದೆ. ನಗದು ರಹಿತ ಸೇವೆ ಸೇರಿದಂತೆ ಸ್ಥಳೀಯ ಪ್ರಯಾಣಿಕರಿಗೆ ಸೌಲಭ್ಯವನ್ನು ಹೆಚ್ಚಿಸಲಾಗಿದೆ. ಮಾರ್ಗ, ಸೇತುವೆ, ಪ್ಲಾಟ್ಫಾರ್ಮ್ ಅಭಿವೃದ್ಧಿ ಪಡಿಸಲಾಗಿದೆ. ದಾಹಕ, ನಿಷಿದ್ಧ ವಸ್ತು ಪತ್ತೆ ಇಲ್ಲ ಆಗಿಲ್ಲ ಆ ಮೂಲಕ ಭದ್ರತೆಯಲ್ಲಿ ಉತ್ತಮ ದಾಖಲೆ ಮಾಡಿದೆ. 69 ಸಿಬ್ಬಂದಿಗೆ ಅಗ್ನಿಶಾಮಕ ತರಬೇತಿ ನೀಡುವ ಮೂಲಕ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ಅವರು ಮಾಹಿತಿ ನೀಡುತ್ತಾರೆ.

ವಿದ್ಯುತ್ ಕಾಮಗಾರಿಯಲ್ಲಿ ಮಹತ್ವದ ಸಾಧನೆ

91.34 MU ರಿಂದ 90.53 MUG ವಿದ್ಯುತ್ ಬಳಕೆಯಲ್ಲಿ ಇಳಿಕೆಯಾಗಿದೆ. ಸೌರ ಶಕ್ತಿ ಸಾಮರ್ಥ್ಯ 160% ಏರಿಕೆ ಆಗಿದ್ದು, ವಾರ್ಷಿಕ 29 ಲಕ್ಷ ರೂ ಉಳಿತಾಯ ಮಾಡಲಾಗುತ್ತಿದೆ. ಮೂಲ ಸೌಕರ್ಯದಲ್ಲಿ ದೊಡ್ಡ ಸುಧಾರಣೆಯ ಅಂಕಿಅಂಶ 176 ರಿಂದ 75ಕ್ಕೆ ಇಳಿಕೆಯಾಗಿದೆ. ಆ ಮೂಲಕ ಸಕಲೇಶಪುರ-ಸುಬ್ರಮಣ್ಯ ಘಾಟ್ ವಿದ್ಯುತ್ ಕಾಮಗಾರಿಯಲ್ಲಿ ಮಹತ್ವದ ಸಾಧನೆ ಮಾಡಲಾಗಿದೆ. ಪ್ರಯಾಣಿಕ ಸೌಲಭ್ಯಗಳಾದ ಲಿಫ್ಟ್, ಸ್ಟೇಷನ್ ಅಭಿವೃದ್ಧಿ ಪಡಿಸಲಾಗಿದೆ. ಶೂನ್ಯ ವಿದ್ಯುತ್, ಅಪಘಾತ ಶೂನ್ಯ ಅಗ್ನಿ ಅವಘಡಗಳ ಭದ್ರತೆಗೆ ಆದ್ಯತೆ ನೀಡಲಾಗಿದೆ.

ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ಫೆಬ್ರವರಿ 16ರಂದು ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ; ಇಲ್ಲಿದೆ ಮಾಹಿತಿ

ಇನ್ನು ನೂರಾರು ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸುವ ಮೂಲಕ ಆರೋಗ್ಯ ಸೇವೆಗಳಲ್ಲಿ ಸಾಧನೆ ಮಾಡಲಾಗಿದೆ. 132 ಮಕ್ಕಳ ರಕ್ಷಣೆ, 1.17 ಕೋಟಿ ರೂ ಮೌಲ್ಯದ ವಸ್ತುಗಳನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗಿದೆ. 88.92 ಕೋಟಿ ರೂ ಹಣಕಾಸು ಉಳಿತಾಯದಿಂದ 53.55% ಏರಿಕೆಯಾಗಿದೆ. QR ಕೋಡ್ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಸರಕು ಮತ್ತು ಪ್ರಯಾಣಿಕ ಸೇವೆಯಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಾಗಿದೆ ಎಂದು ಮುದಿತ್ ಮಿತ್ತಲ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *