ಮೈಸೂರು, ನವೆಂಬರ್ 10: ನಗರದ ಜಯಲಕ್ಷ್ಮೀಪುರಂನಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ತನ್ನ ಸಹಪಾಠಿಗಳಿಂದಲೇ ರ್ಯಾಗಿಂಗ್ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಗಂಭೀರ ಪೆಟ್ಟು ಬಿದ್ದಿದ್ದ ಬಾಲಕನಿಗೆ ವೃಷಣವನ್ನೇ ವೈದ್ಯರು ತೆಗೆದ ಪ್ರಸಂಗ ನಡೆದಿದೆ. ಒಂದು ತಿಂಗಳ ಹಿಂದೆ ಬಾಲಕನ ಮೇಲೆ ಹಲ್ಲೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ಮೇಲೆ ಆತನದ್ದೇ ತರಗತಿಯ ಮೂವರು ಬಾಲಕರು ಹಲ್ಲೆ ನಡೆಸಿದ್ದರು. ಗುಪ್ತಾಂಗಕ್ಕೆ ಕಾಲಿನಿಂದ ಓದು ವಿಕೃತಿ ಮೆರೆದಿದ್ದರು.
ತರಗತಿಯ ಲೀಡರ್ ಆಗಿದ್ದ 13 ವರ್ಷದ ಬಾಲಕನನ್ನು ಆತನ ಸಹಪಾಠಿಗಳೇ ಪ್ರತಿನಿತ್ಯ ರ್ಯಾಗಿಂಗ್ ಮಾಡುತ್ತಿದ್ದರು. ಈ ವಿಷಯವನ್ನು ಶಿಕ್ಷಕರಿಗೆ ತಿಳಿಸಿದ್ದರು. ಇದೇ ಕಾರಣಕ್ಕೆ ತರಗತಿಯ ಮೂವರು ಸಂತ್ರಸ್ತ ಬಾಲಕನನ್ನು ಅಕ್ಟೋಬರ್ 25ರಂದು ಶೌಚಾಲಯಕ್ಕೆ ಕರೆದೊಯ್ದು ಗುಪ್ತಾಂಗಕ್ಕೆ ಕಾಲಿಟ್ಟಿದ್ದು ಗಂಭೀರ ಗಾಯಗೊಂಡಿದ್ದರು. ಆ ಬಳಿಕ ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಬಾಲಕಿಗೆ ತಿಳಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ತಕ್ಷಣವೇ ಆಪರೇಷನ್ ಮಾಡಬೇಕೆಂದು ತಿಳಿಸಿ, ಶಸ್ತ್ರ ಚಿಕಿತ್ಸೆ ಮಾಡಿ ಒಂದು ವೃಷಣವನ್ನ ತೆಗೆದಿದ್ದಾರೆ.
ಇದನ್ನೂ ಓದಿ: ಹಳೆಯ ದ್ವೇಷಕ್ಕೆ ಹರಿದ ನೆತ್ತರು: ಮಗನ ಜೀವ ಉಳಿಸಲು ಹೋಗಿ ತಾಯಿ ಬಲಿ
ಹಲ್ಲೆ ನಡೆಸಿರುವ ಆರೋಪಿ ಬಾಲಕರು ಹಲವು ದಿನಗಳಿಂದ ರ್‍ಯಾಗಿಂಗ್ ನಡೆಸುತ್ತಿದ್ದ ಬಗ್ಗೆ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಗೆ ಫೊಷಕರು ದೂರು ನೀಡಿದ್ದರು. ಆದರೆ, ಶಾಲೆಯವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲದೆ ಶಾಲೆಯ ಮುಖ್ಯ ಶಿಕ್ಷಕಿ ಉಡಾಫೆಯಾಗಿ ನಡೆದುಕೊಂಡಿದ್ದಾರೆ. ಒಂದು ವೇಳೆ ದೂರವನ್ನು ಗಂಭೀರವಾಗಿ ಪರಿಗಣಿಸಿದರೆ ಈ ರೀತಿ ಸ್ಥಿತಿ ಮಗನಿಗೆ ಬರುವುದು ಸಂತ್ರಸ್ತ ಬಾಲಕನ ಪೋಷಕರ ಅಳಲು. ದುಬಾರಿ ರೂಪಾಯಿ ಖರ್ಚು ಮಾಡಿ ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇವೆ. ಇಷ್ಟೆಲ್ಲಾ ಆದರೂ ಶಾಲೆಯ ಆಡಳಿತ ಮಂಡಳಿ ಮಾತ್ರ ಬಾಲಕನ ಆರೋಗ್ಯ ವಿಚಾರಿಸಿಲ್ಲ. ಜೊತೆಗೆ, ಬಾಲಕನ ತಾಯಿ ಶಾಲೆಗೆ ತೆರಳಿದಾಗ ಕೆಟ್ಟದಾಗಿ ಮಾತನಾಡಿ ವಾಪಸ್ಸು ಕಳುಹಿಸಿದ್ದಾರೆ. ಈ ಬಗ್ಗೆ ದೂರು ಕೂಡ ಸ್ವೀಕರಿಸಿಲ್ಲ ಎಂಬ ಆರೋಪವೂ ಪೋಷಕರಿಂದ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.