ದೆವ್ವಗಳಿಗಾಗಿ ಹುಣಸೆ ಮರದಲ್ಲಿ 3 BHK ಫ್ಲ್ಯಾಟ್​! Naa Ninna bidalaare ಕ್ಯೂಟ್​ ಭೂತದಿಂದ ರಿವೀಲ್​ | Naa Ninna Bidalaare Ambika And Durga Reels About Ghost Suc

ದೆವ್ವಗಳಿಗಾಗಿ ಹುಣಸೆ ಮರದಲ್ಲಿ 3 BHK ಫ್ಲ್ಯಾಟ್​! Naa Ninna bidalaare ಕ್ಯೂಟ್​ ಭೂತದಿಂದ ರಿವೀಲ್​ | Naa Ninna Bidalaare Ambika And Durga Reels About Ghost Suc


17

ಪ್ರೀತಿಯ ದೆವ್ವ

Image Credit : Asianet News

ಪ್ರೀತಿಯ ದೆವ್ವ

ನಾ ನಿನ್ನ ಬಿಡಲಾರೆ (Naa Ninna bidalaare) ಸೀರಿಯಲ್​ನಲ್ಲಿ ವೀಕ್ಷಕರು ತುಂಬಾ ಇಷ್ಟಪಡುವ ಕ್ಯಾರೆಕ್ಟರ್​ಗಳಲ್ಲಿ ಒಂದು ದೆವ್ವ. ಅದೇ ಅಂಬಿಕಾನ ದೆವ್ವ.

27

ಕ್ಯೂಟ್​ ದೆವ್ವ

Image Credit : Instagram

ಕ್ಯೂಟ್​ ದೆವ್ವ

ಈ ದೆವ್ವ ಎಲ್ಲ ದೆವ್ವಗಳಂತೆ ಅಲ್ಲ. ತನ್ನ ಗಂಡ ಮತ್ತು ತಂಗಿಯ ಜೋಡಿಯನ್ನು ಒಂದು ಮಾಡಿ ಅವರು ಸುಖವಾಗಿ ಸಂಸಾರ ಮಾಡುವಂತೆ ಪ್ರಯತ್ನ ಮಾಡ್ತಿರೋ ದೆವ್ವ. ದುರ್ಗಾನೇ ತನ್ನ ತಂಗಿ ಎನ್ನುವ ಸತ್ಯ ಗೊತ್ತಿದ್ದರೂ, ಅದನ್ನು ಹೇಳಲಾಗದೇ ನೋವು ಉಣ್ಣುತ್ತಿರುವ ಕ್ಯೂಟ್​ ದೆವ್ವ ಇದು.

37

ದೆವ್ವ-ದುರ್ಗಾ ರೀಲ್ಸ್​

Image Credit : Instagram

ದೆವ್ವ-ದುರ್ಗಾ ರೀಲ್ಸ್​

ಇದೀಗ ಈ ಅಂಬಿಕಾ ದೆವ್ವ ಮತ್ತು ದುರ್ಗಾ ಸೇರಿ ಒಂದು ರೀಲ್ಸ್​ ಮಾಡಿದ್ದಾರೆ. ಅದರಲ್ಲಿ ದುರ್ಗಾ ಈ ದೆವ್ವಂಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ಅಸಲಿಗೆ ಅಂಬಿಕಾ ಪಾತ್ರಧಾರಿ ನೀತಾ ಅಶೋಕ್​ ಮತ್ತು ದುರ್ಗಾ ಪಾತ್ರಧಾರಿ ರಿಷಿಕಾ ಒಂದು ರೀಲ್ಸ್​ ಮಾಡಿದ್ದಾರೆ.

47

ದೆವ್ವಕ್ಕೆ ಫ್ಲ್ಯಾಟ್​

Image Credit : Instagram

ದೆವ್ವಕ್ಕೆ ಫ್ಲ್ಯಾಟ್​

ಇದರಲ್ಲಿ ರಿಷಿಕಾ ಅವರು ನೀತಾ ಅವರಿಗೆ ದೆವ್ವಗಳು ಎಲ್ಲಿ ವಾಸಿಸುತ್ತವೆ ಎಂದು ಕೇಳಿದಾಗ, ನೀತಾ ಹುಣಸೇಮರದಲ್ಲಿ 3 ಬಿಎಚ್​ಕೆ ಫ್ಲ್ಯಾಟ್​ ಇದೆ ಎಂದಿದ್ದಾರೆ! ಕೊನೆಗೆ ದುರ್ಗಾ ನೀವು ಯಾಕೆ ಬೇರೆ ದೆವ್ವದ ರೀತಿ ಇಲ್ಲ ಎಂದು ಕೇಳಿದಾಗ, ಅಂಬಿಕಾ ಚಾನೆಲ್​ಗೆ ಕ್ಯೂಟ್​ ದೆವ್ವ ಬೇಕಿತ್ತು ಅದಕ್ಕೇ ಎಂದಿದ್ದಾರೆ. ಒಟ್ಟಿನಲ್ಲಿ ಇವರ ಜೋಡಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

57

ಅಂಬಿಕಾ ಕುರಿತು

Image Credit : Instagram

ಅಂಬಿಕಾ ಕುರಿತು

ಇನ್ನು ನಟಿ ನೀತಾ ಅಶೋಕ್ ಕುರಿತು ಹೇಳುವುದಾದರೆ, ಇವರು ಅನೂಪ್‌ ಭಂಡಾರಿ (Anoop Bandhari) ನಿರ್ದೇಶನದ ‘ವಿಕ್ರಾಂತ್‌ ರೋಣ’ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಅಪರ್ಣಾ ಬಲ್ಲಾಳ್‌ (ಪನ್ನಾ) ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ನಟಿಸಿರುವುದು ಒಂದೇ ಸಿನಿಮಾದಲ್ಲಿ ಆದರೂ ಅವರ ಫ್ಯಾನ್ಸ್​ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ.

67

ವಿಕ್ರಾಂತ್​ ರೋಣ

Image Credit : our own

ವಿಕ್ರಾಂತ್​ ರೋಣ

ವಿಕ್ರಾಂತ್​ ರೋಣದಲ್ಲಿ ನಟಿಸುವ ಮುನ್ನ ಅಂದರೆ 2019ರಲ್ಲಿ ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಯಶೋದಾ’ ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್​. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.

77

ದುರ್ಗಾ ಕುರಿತು

Image Credit : Facebook

ದುರ್ಗಾ ಕುರಿತು

ದುರ್ಗಾ ಪಾತ್ರಧಾರಿ ರಿಷಿಕಾ ಕುರಿತು ಹೇಳುವುದಾದರೆ, ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾಕುಮಾರಿ’ ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಮೊದಲ ಸೀರಿಯಲ್​ನಲ್ಲಿ ಸೈಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ಯಾದಾನ’ ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *