Headlines

ಪ್ಲೀಸ್,​ ದೆವ್ವಕ್ಕೆ ಬೇರೆ ಸೀರೆ ಕೊಡಿಸ್ರಪ್ಪಾ? ಹರಿದ ಸೀರೆ ತೋರಿಸಿ ನೋವು ತೋಡಿಕೊಂಡ Naa Ninna Bidalaare ಅಂಬಿಕಾ

ಪ್ಲೀಸ್,​ ದೆವ್ವಕ್ಕೆ ಬೇರೆ ಸೀರೆ ಕೊಡಿಸ್ರಪ್ಪಾ? ಹರಿದ ಸೀರೆ ತೋರಿಸಿ ನೋವು ತೋಡಿಕೊಂಡ Naa Ninna Bidalaare ಅಂಬಿಕಾ

ಪ್ಲೀಸ್,​ ದೆವ್ವಕ್ಕೆ ಬೇರೆ ಸೀರೆ ಕೊಡಿಸ್ರಪ್ಪಾ? ಹರಿದ ಸೀರೆ ತೋರಿಸಿ ನೋವು ತೋಡಿಕೊಂಡ Naa Ninna Bidalaare ಅಂಬಿಕಾ

’ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ದೆವ್ವದ ಪಾತ್ರಧಾರಿ ನೀತಾ ಅಶೋಕ್, ತಮ್ಮ ಪಾತ್ರದ ಹರಿದ ಸೀರೆಯ ಫೋಟೋ ಹಂಚಿಕೊಂಡು ತಮಾಷೆ ಮಾಡಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ಪನ್ನಾ ಪಾತ್ರದ ಮೂಲಕವೂ ಖ್ಯಾತಿ ಗಳಿಸಿದ್ದಾರೆ  ನೀತಾ

ನಾ ನಿನ್ನ ಬಿಡಲಾರೆ (Naa Ninna Bidalaare) ಅಂಬಿಕಾ ಎಂದರೆ ಅದೊಂದು ಕ್ಯೂಟ್​ ದೆವ್ವ ಎನ್ನೋದು ಸೀರಿಯಲ್​ ಪ್ರೇಮಿಗಳಿಗೆ ತಿಳಿದಿರುವ ವಿಷಯ. ತನ್ನ ತಂಗಿ ಮತ್ತು ತನ್ನದೇ ಗಂಡನ ಜೊತೆಗೆ ಬಾಂಧವ್ಯ ಬೆಸೆಯುವ ಹಾಗೆ ಮಾಡಿರುವ ದೆವ್ವ ಇದು.

ಈ ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ನಟಿಯ ಹೆಸರು ನೀತಾ ಅಶೋಕ್​. ಸಾಮಾನ್ಯವಾಗಿ ಈ ಸೀರಿಯಲ್​ನಲ್ಲಿ ಒಂದೇ ರೀತಿಯ ಸೀರೆ ಉಟ್ಟುಕೊಂಡಿರೋ ದೆವ್ವ ಇದಾಗಿದ್ದರಿಂದ ಆ ಸೀರೆಯ ಗತಿ ಏನಾಗಿದೆ ಎಂದು ನೀತಾ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಹರಿದು ಹೋಗಿರೋ ಸೀರೆಯ ಸೆರಗನ್ನು ತೋರಿಸಿರೋ ಅವರು, ನೋಡಿ ಕಲಾವಿದರ ಕಷ್ಟ ನಿಮಗೂ ಅರ್ಥ ಆಗಲಿ ಎಂದು ಹರಿದ ಸೀರೆಯಲ್ಲಿಯೇ ಫೋಟೋಶೂಟ್​ ಮಾಡಿಸಿಕೊಳ್ತಿದ್ದೇನೆ ಎಂದು ತಮಾಷೆ ಮಾಡಿದ್ದಾರೆ.

ಇನ್ನು ನಟಿ ನೀತಾ ಅಶೋಕ್ ಕುರಿತು ಹೇಳುವುದಾದರೆ, ಇವರು ಅನೂಪ್‌ ಭಂಡಾರಿ (Anoop Bandhari) ನಿರ್ದೇಶನದ ‘ವಿಕ್ರಾಂತ್‌ ರೋಣ’ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಅಪರ್ಣಾ ಬಲ್ಲಾಳ್‌ (ಪನ್ನಾ) ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ನಟಿಸಿರುವುದು ಒಂದೇ ಸಿನಿಮಾದಲ್ಲಿ ಆದರೂ ಅವರ ಫ್ಯಾನ್ಸ್​ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ.

ವಿಕ್ರಾಂತ್​ ರೋಣದಲ್ಲಿ ನಟಿಸುವ ಮುನ್ನ ಅಂದರೆ 2019ರಲ್ಲಿ ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಯಶೋದಾ’ ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್​. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *