‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಖ್ಯಾತಿಯ ನಟಿ ನೀತಾ ಅಶೋಕ್ ಅವರು ಶೂಟಿಂಗ್ ಸೆಟ್‌ನಲ್ಲಿ ಅಪಘಾತಕ್ಕೀಡಾಗಿ ಕಾಲು ಮುರಿದುಕೊಂಡಿದ್ದಾರೆ. ಕಾಲಿಗೆ ಸರ್ಜರಿಯಾಗಿದ್ದರೂ, ಅವರು ವೀಲ್‌ಚೇರ್ ಸಹಾಯದಿಂದಲೇ ಆಸ್ಪತ್ರೆ ಹಾಗೂ ಮನೆಯಿಂದ ಚಿತ್ರೀಕರಣದಲ್ಲಿ ಭಾಗವಹಿಸುವ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ.
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ಕ್ಯೂಟ್ ದೆವ್ವ ಆಗಿ ಮಿಂಚುತ್ತಿರುವ ಅಂಬಿಕಾ ರಿಯಲ್ ಹೆಸರು ನೀತಾ ಅಶೋಕ್. ನೀತಾ ಅವರು ಶೂಟಿಂಗ್ ವೇಳೆ ನಡೆದ ಅವಘಡ ಸಂಭವಿಸಿ ಕಾಲಿಗೆ ಫ್ರ್ಯಾಕ್ಚರ್ ಮಾಡಿಕೊಂಡಿದ್ದಾರೆ. ಕಾಲಿನ ಆಪರೇಷನ್ ಆಗಿದ್ದರೂ ಆಸ್ಪತ್ರೆಯಲ್ಲಿಯೇ ಕೆಲವೊಂದು ಕ್ಲಿಪ್ಪಿಂಗ್ ಶೂಟ್ ಮಾಡಿದ್ದರೆ, ಇದೀಗ ಮನೆಗೆ ಬಂದ ಮೇಲೂ ಮುರಿದ ಕಾಲಲ್ಲೇ ಶೂಟಿಂಗ್ ನಡೆದಿದೆ.

ಇದರ ವಿಡಿಯೋ ಅನ್ನು ನೀತಾ ಅಶೋಕ್ ಶೇರ್ ಮಾಡಿಕೊಂಡಿದ್ದಾರೆ. ಕಾಲು ಮುರಿದ ಮೇಲೂ ಸೀರಿಯಲ್ನಲ್ಲಿ ಹೇಗೆ ಕಾಣಿಸಿಕೊಳ್ತಿದ್ದೇನೆ ಎಂದು ಕೆಲವರು ಅಚ್ಚರಿ ಪಡುವುದು ಇದೆ. ಅವರಿಗಾಗಿಯೇ ಈ ವಿಡಿಯೋ ಎಂದು ನಟಿ ಹೇಳಿದ್ದಾರೆ.

ಅಷ್ಟಕ್ಕೂ ನಟಿಗೆ ಆಗಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಅಂದು ಶೂಟಿಂಗ್ ನಡೆಯುತ್ತಿದ್ದಾಗ ಬಿಸಿಲು ಇದ್ದುದರಿಂದ ಹೋಗಿ ನೆರಳಿನಲ್ಲಿ ಕುಳಿತುಕೊಳ್ಳಿ ಎಂದರು. ಅಲ್ಲಿಗೆ ಎದ್ದು ಹೋಗಿ ಕುಳಿತುಕೊಳ್ಳುವಾಗ ಕಾಲು ಟ್ವಿಸ್ಟ್ ಆಯಿತು. ತುಂಬಾ ನೋವಾಯಿತು. ವೈದ್ಯರು ಕೂಡಲೇ ಪೇನ್ ಕಿಲ್ಲರ್ ಇಂಜೆಕ್ಷನ್ ಕೊಡಿಸಿ, ಕೂಡಲೇ ಎಕ್ಸ್ರೇ ಮಾಡಿಸಿ ಎಂದರು ಎಂದು ನಟಿ ನೆನಪಿಸಿಕೊಂಡಿದ್ದಾರೆ.

ಎಕ್ಸ್ರೇ ಮಾಡಿದಾಗ ಫ್ರಾಕ್ಚರ್ ಆಗದೇ ಇರಲಿ ಎಂದು ದೇವರಲ್ಲಿ ತುಂಬಾ ಪ್ರಾರ್ಥಿಸಿಕೊಂಡೆ. ಆದರೆ ಬ್ಯಾಡ್ ಲಕ್, ಫ್ರ್ಯಾಕ್ಚರ್ ಆಗಿ ಹೋಗಿತ್ತು ಎಂದಿದ್ದಾರೆ ನೀತಾ ಅಶೋಕ್. ವೈದ್ಯರು ಕೂಡಲೇ ಸರ್ಜರಿ ಮಾಡಬೇಕು ಎಂದರು. ಸರ್ಜರಿ ಹೆಸರು ಕೇಳುತ್ತಿದ್ದಂತೆಯೇ ನನ್ನ ಮೀಟರ್ ಆಫ್ ಆಗೋಯ್ತು. ಆದರೂ ಎಲ್ಲರ ಒಪೀನಿಯನ್ ತೆಗೆದುಕೊಂಡು ಸರ್ಜರಿಗೆ ಓಕೆ ಎಂದೆ ಎಂದಿದ್ದಾರೆ.

ಸರ್ಜರಿಯ ಮೊದಲ ದಿನ ಸೀರಿಯಲ್ ತಂಡ ಕೆಲವೊಂದು ಕ್ಲೋಸ್ ಅಪ್ ಶಾರ್ಟ್ಸ್ ತೆಗೆದುಕೊಂಡು ಹೋಯಿತು. ತುಂಬಾ ಸಹಕರಿಸಿ ನನಗೆ ಎಲ್ಲಾ ರೀತಿಯ ಸಹಾಯ ಮಾಡಲಾಯಿತು ಎಂದು ನೆನಪಿಸಿಕೊಂಡಿದ್ದಾರೆ ನಟಿ. ಇದೀಗ ಮನೆಗೆ ನಟಿ ಹೋಗಿದ್ದು, ಅಲ್ಲಿಯೂ ವೀಲ್‌ಚೇರ್ ಸಹಾಯದಿಂದ ಶೂಟಿಂಗ್ ಮಾಡಲಾಗಿದೆ. ಆದರೆ ಎಲ್ಲಿಯೂ ಇದರ ಬಗ್ಗೆ ಜನರಿಗೆ ಗೊತ್ತಾಗದಂತೆ ನೋಡಿಕೊಳ್ಳಲಾಗಿದೆ.

ಇದೀಗ ಮನೆಗೆ ನಟಿ ಹೋಗಿದ್ದು, ಅಲ್ಲಿಯೂ ವೀಲ್‌ಚೇರ್ ಸಹಾಯದಿಂದ ಶೂಟಿಂಗ್ ಮಾಡಲಾಗಿದೆ. ಆದರೆ ಎಲ್ಲಿಯೂ ಇದರ ಬಗ್ಗೆ ಜನರಿಗೆ ಗೊತ್ತಾಗದಂತೆ ನೋಡಿಕೊಳ್ಳಲಾಗಿದೆ.

Source link
ಕಾಲು ಮುರಿದ್ರೂ ವ್ಹೀಲ್ ಚೇರ್ ಮೇಲೆ Naa Ninna Bidalaare ಶೂಟಿಂಗ್! ವಿಡಿಯೋ ಶೇರ್ ಮಾಡಿದ ನಟಿ ನೀತಾ