Headlines

70ರ ದಶಕಕ್ಕೆ ಜಾರಿದ Naa Ninna Bidalaare ಹಿತಾ: ಎಷ್ಟೂಂತ ಹೃದಯ ಕದೀತಿಯಮ್ಮಾ ಎಂದ ಫ್ಯಾನ್ಸ್​

70ರ ದಶಕಕ್ಕೆ ಜಾರಿದ Naa Ninna Bidalaare ಹಿತಾ: ಎಷ್ಟೂಂತ ಹೃದಯ ಕದೀತಿಯಮ್ಮಾ ಎಂದ ಫ್ಯಾನ್ಸ್​

70ರ ದಶಕಕ್ಕೆ ಜಾರಿದ Naa Ninna Bidalaare ಹಿತಾ: ಎಷ್ಟೂಂತ ಹೃದಯ ಕದೀತಿಯಮ್ಮಾ ಎಂದ ಫ್ಯಾನ್ಸ್​
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಬಾಲ ನಟಿ ಹಿತಾ, ತನ್ನ ಅದ್ಭುತ ನಟನೆ ಮತ್ತು ಗಾಯನ ಪ್ರತಿಭೆಯಿಂದ ಗಮನ ಸೆಳೆದಿದ್ದಾಳೆ. ಇತ್ತೀಚೆಗೆ, ಹಳೆಯ ಹಿಂದಿ ಹಾಡೊಂದಕ್ಕೆ ರೆಟ್ರೋ ಶೈಲಿಯಲ್ಲಿ ರೀಲ್ಸ್ ಮಾಡಿ, ತನ್ನ ಮನೋಜ್ಞ ಅಭಿನಯದಿಂದ ನೆಟ್ಟಿಗರ ಹೃದಯ ಗೆದ್ದಿದ್ದಾಳೆ.
ಕೆಲವರಿಗೆ ಹಾಗೆನೇ. ಟ್ಯಾಲೆಂಟ್​ ಎನ್ನುವುದು ಹುಟ್ಟುತ್ತಲೇ ಬಂದು ಬಿಡುತ್ತದೆ. ಹಿಂದಿನ ಜನ್ಮದಿಂದ ಬಂದ ಕಲೆ ಅದು ಎಂದು ಹೇಳುವವರೇ ಹೆಚ್ಚು ಮಂದಿ. ನಟನೆ, ಸಂಗೀತ, ಚಿತ್ರಕಲೆ, ಅಭಿನಯ, ನೃತ್ಯ… ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಚಿಕ್ಕಪುಟಾಣಿ ಇರುವಾಗಲೇ ಇವರು ಮಾಡುವ ಸಾಧನೆ ನೋಡಿದರೆ ನಿಜಕ್ಕೂ ಅದು ಈ ಜನ್ಮದಂತೂ ಇದ್ದಿರಲಿಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸಿಬಿಡುವುದು ಉಂಟು.

ಅಂಥ ನಟಿಯರಲ್ಲಿ ಒಬ್ಬಾಕೆ ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಬಾಲಕಿ ಹಿತಾ. ತನ್ನ ಅದ್ಭುತ ನಟನೆಯಿಂದ ಭೇಷ್​ ಎನ್ನಿಸಿಕೊಂಡಿದ್ದಾಳೆ ಈ ಪುಟಾಣಿ. ನಾ ನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಅದ್ಭುತ ನಟನೆಯಿಂದ ಮೋಡಿ ಮಾಡ್ತಿರೋ ಬಾಲಕಿ ಅಷ್ಟೇ ಅದ್ಭುತ ಗಾಯಕಿ ಕೂಡ. ಅಂದಹಾಗೆ ಮಹಿತಾ, ಸ್ಕೂಲ್ ಮತ್ತು ಸೀರಿಯಲ್‌ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ.

ಇದೀಗ ಅವಳು, 1973ರಲ್ಲಿ ಬಿಡುಗಡೆಯಾದ ಜಯಾ ಬಚ್ಚನ್​, ಸಂಜೀವ್​ ಕುಮಾರ್​ ಅಭಿನಯದ ಅನಾಮಿಕ ಚಿತ್ರದ ಸಕತ್​ ಹಿಟ್​ ಹಾಡು ಬಾಹೋ ಮೇ ಚಲೆ ಆ ಹಾಡಿಗೆ ರೆಟ್ರೋಸ್ಟೈಲ್​ನಲ್ಲಿ ಅಭಿನಯಿಸಿದ್ದಾಳೆ ಮಹಿತಾ.ಲತಾ ಮಂಗೇಶ್ಕರ್​ ಅವರ ಹಿಟ್​ ಹಾಡುಗಳಲ್ಲಿ ಇದೂ ಒಂದಾಗಿದ್ದು, ಅದಕ್ಕೆ ಮುದ್ದಾಗಿ ರೀಲ್ಸ್​ ಮಾಡಿದ್ದಾರೆ ಪುಟಾಣಿ.ಇದನ್ನು ನೋಡಿದ ನೆಟ್ಟಿಗರು ಇರೋ ಒಂದು ಹೃದಯವನ್ನು ಎಷ್ಟೂ ಅಂತ ಕದೀತಿಯಮ್ಮಾ ಎಂದು ಪ್ರಶ್ನಿಸುತ್ತಿದ್ದಾರೆ.

ಕಲೆ ಎನ್ನುವುದು ರಕ್ತಗತವಾಗಿ ಬರುವುದು ನಿಜವಾದರೂ, ಕೆಲವೊಮ್ಮೆ ಯಾವ ಹಿನ್ನೆಲೆಯೂ ಇಲ್ಲದ ಪುಟಾಣಿ ಮಕ್ಕಳು ನಡೆದುಕೊಳ್ಳುವ ರೀತಿ ಅಚ್ಚರಿ ಎನ್ನಿಸುವುದು ಉಂಟು. ಅಂಥವಳಲ್ಲಿ ಒಬ್ಬಳು ಈ ಪುಟಾಣಿ ಹಿತಾ.

ನಾನಿನ್ನ ಬಿಡಲಾರೆ ಸೀರಿಯಲ್​ ಸೀರಿಯಲ್​ನಲ್ಲಿ ಈಕೆಯ ಒಂದೊಂದು ಅಭಿನಯಕ್ಕೂ ವೀಕ್ಷಕರು ಮನಸೋತಿದ್ದಾರೆ. ನಗು, ಅಳು, ತಮಾಷೆ ಏನೇ ಇರಲಿ. ಯಾವುದೇ ಭಾವ ಇರಲಿ ಅದಕ್ಕೆ ತಕ್ಕಂತೆ ನಟಿಸುತ್ತಾಳೆ. ದುಃಖದ ಸನ್ನಿವೇಶದಲ್ಲಿ ವೀಕ್ಷಕರನ್ನು ಅಳಿಸುತ್ತಾಳೆ.

ಇದರಲ್ಲಿ ಆಕೆ ತಾಯಿಯನ್ನು ಕಳೆದುಕೊಂಡಿರುವ ತಬ್ಬಲಿ ಮಗು. ತಾಯಿಯ ಪ್ರೀತಿಗಾಗಿ ಹಂಬಲಿಸುವ, ತನ್ನ ತಾಯಿಯ ಸಾವಿಗೆ ಅಪ್ಪನೇ ಕಾರಣ ಎಂದು ತಪ್ಪು ತಿಳಿದು ಆತನನ್ನು ದ್ವೇಷಿಸುವ ಕ್ಯಾರೆಕ್ಟರ್​ ಈಕೆಯದ್ದು. ಇದೀಗ ಅಪ್ಪನನ್ನು ಮತ್ತೆ ಒಪ್ಪಿಕೊಂಡಿರೋ ಹಿತಾ ಅಷ್ಟೇ ಮನೋಜ್ಞವಾಗಿ ಅಭಿನಯಿಸಿದ್ದಾಳೆ.

Source link

Leave a Reply

Your email address will not be published. Required fields are marked *