
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಸಾಕಷ್ಟು ತಿರವುಗಳನ್ನು ಹೊಂದಿದೆ. ಈಗ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಿಗುತ್ತಿದೆ. ಹಾಗಾದರೆ ಏನು ಆ ಟ್ವಿಸ್ಟ್? ಆ ಬಗ್ಗೆ ನಾವು ಹೇಳಿದ್ದೇವೆ. ಈ ಧಾರಾವಾಹಿಯಲ್ಲಿ ವಿಲನ್ ಪಾತ್ರದ ಗುಣದಲ್ಲಿ ಬದಲಾವಣೆ ಬರುವ ಸೂಚನೆ ಸಿಕ್ಕಿದೆ. ಹಾಗದ್ರೆ ಧಾರಾವಾಹಿಗೆ ವಿಲನ್ ಇರೋದೇ ಇಲ್ವಾ? ಆ ಬಗ್ಗೆ ಇಲ್ಲಿದೆ ವಿವರ.
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ದೊಡ್ಡ ಬದಲಾವಣೆ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಮಾಳವಿಕಾ ಎಷ್ಟು ಕೆಟ್ಟವಳು ಎಂಬುದು ಮಾಯಾಗೆ ಗೊತ್ತಾಗಿ ಹೋಗಿದೆ. ಈ ಕಾರಣಕ್ಕೆ ಆಕೆಗೆ ತಲೆಬಿಸಿ ಶುರುವಾಗಿದೆ. ಅಂಬಿಕಾನ ಸಾವಿಗೆ ನಾನೇ ಕಾರಣ ಎಂದು ಆಕೆಗೆ ಅನಿಸಿತ್ತು. ಆದರೆ, ಇದರ ಹಿಂದೆ ಮಾಳವಿಕಾ ಕೈವಾಡ ಇದೆ ಎಂಬ ಅನುಮಾನ ಅವಳಿಗೆ ಬಂದಿದೆ.
ಈ ವಿಷಯವನ್ನು ಮಾಯಾ, ಅಂಬಿಕಾ ಆತ್ಮದ ಬಳಿ ಪ್ರಶ್ನೆ ಮಾಡಿದ್ದಾಳೆ. ‘ನಿನ್ನ ಕೊಲೆಯಲ್ಲಿ ಮಾಳವಿಕಾ ಕೈವಾಡ ಇದೆ ಅಲ್ಲವೇ? ನಾನು ಕೇವಲ ಅಸ್ತ್ರ ಮಾತ್ರ ಆಗಿದ್ದೆ ಅಲ್ಲವೇ’ ಎಂದು ಮಾಯಾ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಅಂಬಿಕಾ ಹೌದು ಎಂಬ ಉತ್ತರ ನೀಡಿದ್ದಾಳೆ. ಇದರಿಂದ ಅವಳಿಗೆ ಎಲ್ಲವೂ ಸ್ಪಷ್ಟವಾಗಿದೆ. ಮುಂದೇನು ಮಾಡಬೇಕು ಎಂಬ ಚಿಂತೆ ಬಹುವಾಗಿ ಕಾಡುತ್ತಿದೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಆಕೆಯ ಮುಂದೆ ಈಗ ಎರಡು ಆಯ್ಕೆ ಇದೆ. ಒಬ್ಬ ಆಕೆ ನೇರವಾಗಿ ಅಂಬಿಕಾಗೆ ಸಹಾಯ ಮಾಡಬೇಕು ಅಥವಾ ಮಾಳವಿಕಾ ಪರವಾಗಿ ನಿಂತು ತಾನೂ ಕಷ್ಟ ಅನುಭವಿಸಬೇಕು. ಹೀಗಾಗಿ, ಆಕೆಯ ಗುಣದಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೆಲವು ದಿನ ಧಾರಾವಾಹಿಯಿಂದ ದೂರ ಉಳಿಯಲಿದ್ದಾರೆ ‘ನಾ ನಿನ್ನ ಬಿಡಲಾರೆ’ ನಟಿ ನೀತಾ ಅಶೋಕ್
ಈಗ ಸದ್ಯ ಅವಳು ಅಂಬಿಕಾಳನ್ನು ದ್ವೇಷಿಸೋದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾಳೆ. ಆದರೆ, ದಿನ ಕಳೆದಂತೆ ಮಾಯಾ ಪಾತ್ರದಲ್ಲಿ ಬದಲಾವಣೆ ಕಾಣುತ್ತಿದೆ. ಅವು ಕೂಡ ಮಾಳವಿಕಾಳ ಅಸ್ತ್ರ ಆಗಬಹುದು ಎಂದು ಹೇಳಲಾಗದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.