Headlines

'ಮೋನಿಕಾ' ಹಾಡಿಗೆ ರಿಯಲ್​ ಪುತ್ರಿ ಜೊತೆ ರಿಯಲ್​ ವೇಷದಲ್ಲಿ Naa Ninna Bidallare ಶಂಭು ಭರ್ಜರಿ ಸ್ಟೆಪ್​!

'ಮೋನಿಕಾ' ಹಾಡಿಗೆ ರಿಯಲ್​ ಪುತ್ರಿ ಜೊತೆ ರಿಯಲ್​ ವೇಷದಲ್ಲಿ Naa Ninna Bidallare ಶಂಭು ಭರ್ಜರಿ ಸ್ಟೆಪ್​!

'ಮೋನಿಕಾ' ಹಾಡಿಗೆ ರಿಯಲ್​ ಪುತ್ರಿ ಜೊತೆ ರಿಯಲ್​ ವೇಷದಲ್ಲಿ Naa Ninna Bidallare ಶಂಭು ಭರ್ಜರಿ ಸ್ಟೆಪ್​!
‘ನಾ ನಿನ್ನ ಬಿಡಲಾರೆ’ ಸೀರಿಯಲ್‌ನ ಭಯಾನಕ ಶಂಭು ಪಾತ್ರಧಾರಿಯ ನಿಜವಾದ ಹೆಸರು ಸಂತೋಷ್ ಕರ್ಕಿ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಇವರು, ತಮ್ಮ ಮಗಳೊಂದಿಗೆ ಡಾನ್ಸ್ ಮಾಡುವ ಮೂಲಕ ಮತ್ತು ನಾಟಕಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ನಿಜ ಜೀವನದ ವಿಭಿನ್ನ ಮುಖವನ್ನು ಪರಿಚಯಿಸಿದ್ದಾರೆ.
ಶಂಭು ಎಂದರೆ ಸಾಕು, ಸಿರಿಯಲ್​ ಪ್ರಿಯರಿಗೆ ನಾ ನಿನ್ನ ಬಿಡಲಾರೆ (Naa Ninna Bidallare) ಸೀರಿಯಲ್​ ವಿಚಿತ್ರ ವೇಷಧಾರಿ, ಹರಕು ಮುರುಕು ಬಟ್ಟೆಗಳಿಂದ ಭಯ ಉಂಟು ಮಾಡುವ, ಒಗಟು ಒಗಟು ಮಾತನಾಡಿ ಭವಿಷ್ಯ ನುಡಿಯುವ ಒಂದು ಆಕೃತಿ ಕಾಣಿಸುತ್ತದೆ.

ಶಂಭು ವೇಷಧಾರಿಯ ರಿಯಲ್​ ಹೆಸರು ಸಂತೋಷ್​ ಕರ್ಕಿ (Naa Ninna Bidallare Shambhu urf Santosh Karki). ಸಾಫ್ಟ್​ವೇರ್​ ಎಂಜಿನಿಯರ್​ ಆಗಿರುವ ಶಂಭು ಅವರು ರಿಯಲ್​ ವೇಷದಲ್ಲಿ ಬಂದರೆ ಗುರುತು ಸಿಗುವುದೇ ಇಲ್ಲ ಬಿಡಿ!

ಈ ಹಿಂದೆ ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಅವರಿಗೆ ಬೆಸ್ಟ್​ ಅಪ್ಪ ಪ್ರಶಸ್ತಿ ಬಂದಾಗ, ಅವರ ವಿಟಿ ಒಂದನ್ನು ತೋರಿಸಲಾಗಿತ್ತು. ರಿಯಲ್​ ವೇಷದಲ್ಲಿ ಹೋದಾಗ, ನಾನೇ ಶಂಭು ಎಂದರೂ ಜನರು ನಂಬಿರಲಿಲ್ಲ. ಶಂಭುವಿನ ವೇಷದಲ್ಲಿ ಹೋದಾಗ ಕೆಲವು ಮಹಿಳೆಯರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದರು.

ನಾಟಕಗಳಿಂದಲೂ ಫೇಮಸ್​ ಆಗ್ತಿರೋ ಸಂತೋಷ್​ ಅವರು, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇದೇ 21ರಂದು ತಮ್ಮ ಹಾಗೂ ತಂಡದ ಅಭಿನಯದ ಹೊಸ ಬೆಳಕು ನಾಟಕ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಇವರನ್ನು ರಿಯಲ್​ ಆಗಿ ನೋಡುವುದಾದರೆ ಬೆಂಗಳೂರಿನ ಜಯನಗರದಲ್ಲಿ ಈ ನಾಟಕದ 14ನೇ ಪ್ರದರ್ಶನ ಕಾಣಲಿದೆ ಎಂದಿದ್ದಾರೆ.

ಇನ್ನು, ಸೀರಿಯಲ್​ನಲ್ಲಿ ಶಂಭುವಿಗೆ ಅಂಬಿಕಾ ಮತ್ತು ದುರ್ಗಾ ಮಕ್ಕಳಾದರೆ ರಿಯಲ್​ ಲೈಫ್​ನಲ್ಲಿ ಪ್ರಣತಿ ಎನ್ನುವ ಮಗಳಿದ್ದಾರೆ. ಇವರ ಜೊತೆ ಸಂತೋಷ್​ ಅವರು ಮೋನಿಕಾ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ.

ಬಹುಶಃ ಈ ಹಾಡಿನಲ್ಲಿ ಅವರನ್ನು ನೋಡಿದರೆ, ಅವರೇ ಶಂಭು ಎನ್ನುವುದು ಗುರುತು ಹಿಡಿಯುವುದೂ ಕಷ್ಟವೇ. ಮಗಳು ಹಾಗೂ ಮಗಳ ಸ್ನೇಹಿತೆಯರ ಜೊತೆ ಶಂಭು ಅರ್ಥಾತ್​ ಸಂತೋಷ್​ ಕರ್ಕಿ ಅವರು ಸ್ಟೆಪ್​ ಹಾಕಿರುವ ವಿಡಿಯೋ ಈ ಕೆಳಗಿದೆ ನೋಡಿ

ಹಲವು ಸಂದರ್ಭಗಳಲ್ಲಿ ಸಂತೋಷ್​ ಅವರು ತಮ್ಮ ನಾ ನಿನ್ನ ಬಿಡಲಾರೆ ಸೀರಿಯಲ್​ ಮಕ್ಕಳು ಹಾಗೂ ಇತರ ಕಲಾವಿದರ ಜೊತೆಯೂ ಶಂಭುವಿನ ವೇಷದಲ್ಲಿಯೇ ರೀಲ್ಸ್​ ಮಾಡಿ ಹಂಚಿಕೊಳ್ಳುವುದು ಇದೆ.

ನಾ ನಿನ್ನ ಬಿಡಲಾರೆ ಶಂಭು ರೀಲ್ಸ್​ ನೋಡಲು ಇದರ ಮೇಲೆ ಕ್ಲಿಕ್​  ಮಾಡಿ

Source link

Leave a Reply

Your email address will not be published. Required fields are marked *